ಮರಗೋಡು, ಏ.13: ಇಲ್ಲಿಗೆ ಸಮೀಪದ ಹೊಸಕೇರಿಯಲ್ಲಿ ಪುರಾತನ ಕಾಲದ ಚಿಲಿಪಿಲಿ ದೇವಾಲಯವಿದ್ದು, ದೇವಾಲಯದ ಪಕ್ಕದಲ್ಲಿಯೇ ಇರುವ ಜಲಪಾತ ನೀರಿಗೆ ಕೋಳಿ ತ್ಯಾಜಸುರಿದು ಅಶುದ್ದಿಮಾಡಿದ್ದು ಕಿಡಿಗೇಳಿಗಳ ವಿರುದ್ದ ಕ್ರಮ ಕೈಗೋಳ್ಳಬೇಕೆಂದು ಸ್ಥಳೀಯರೂ,ಸಮಾಜ ಸೇವಕರೂ ಆಗಿರುವ ಚೀಯಂಡಿರ ಕಿಶನ್ ಉತ್ತಪ್ಪ ಅವರು ಆಗ್ರಹಿಸಿದ್ದಾರೆ.
ದೇವಾಲಯದ ಪಕ್ಕದಲ್ಲೇ ಹರಿಯುತ್ತಿರು ಈ ಜಪಾತವನ್ನೂ ಭಕ್ತರು ಶ್ರದ್ದಾಭಕ್ತಿಯಿಂದ ಪೂಜಿಸುತ್ತಿದ್ದಾರೆ. ಜಲರಾಶಿಯೂ ಕೂಡ ದೇವರ ಸಮಾನ ಎಂದು ನಂಬಿಕೆ ಇದೆ. ಆದರೆ ಇತ್ತೀಚೆಗೆ ಕೆಲವು ಕಿಡಿಗೇಡಿಗಳು ಇಪ್ಪತ್ತಕ್ಕೂ ಹೆಚ್ಚು ಪ್ಲಾಸ್ಟಿಕ್ ಡ್ರಮ್ನಲ್ಲಿ ತುಂಬಿದ್ದ ಕೋಳಿ ತ್ಯಾಜವನ್ನು ತಂದು ಜಲಪಾತದ ನೀರಿಗೆ ಸುರಿದಿರುತ್ತಾರೆ. ಇದು ಸ್ಥಳೀಯ ನಿವಾಸಿಗಳು ಮಾತ್ರವಲ್ಲದೆ ಭಕ್ತಾಧಿಗಳ ಭಾವನೆಗೂ ಧಕ್ಕೆ ತಂದಿದೆ ಎಂದಿರುವ ಅವರು. ಹೀಗೆ ಪುಣ್ಯ ಕ್ಷೇತ್ರದಲ್ಲಿ ತ್ಯಾಜ್ಯ ಸುರಿದು ಸ್ಥಳೀಯರು ಹಾಗೂ ಭಕ್ತರ ಭಾವನೆಗಳಿಗೆ ಧಕ್ಕೆ ತಂದ ಕಿಡಿಗೇಡಿಗಳ ವಿರುದ್ದ ಕೂಡಲೆ ಸಂಭಪಟ್ಟವರು ಕ್ರಮ ಕೈಗೊಳ್ಳಬೇಕೆಂದು ಚೀಯಂಡಿರ ಕಿಶನ್ ಉತ್ತಪ್ಪ ಒತ್ತಾಯಿಸಿದ್ದಾರೆ.