ವಿರಾಜಪೇಟೆ, ಅ.01;(nadubadenews): ವಿರಾಜಪೇಟೆ ಕಾವೇರಿ ಪದವಿ ಪೂರ್ವ ಕಾಲೇಜಿನ 2025-26 ನೇ ಸಾಲಿನ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ , ಪ್ರಧಾನ ಕಾರ್ಯದರ್ಶಿಯಾಗಿ ಕುಮಾರಿ ಚೈತ್ರ ಬಿ.ಎಸ್, ಜಂಟಿ ಕಾರ್ಯದರ್ಶಿಗಳಾಗಿ ಆದಿತ್ಯ ಹೆಚ್. ಎನ್. ಹಾಗೂ ಕಾವ್ಯ ಕೆ. ಎಸ್. ಕ್ರೀಡಾ ಕಾರ್ಯದರ್ಶಿಯಾಗಿ ಪುನೀತ್ ಪಿ. ಎಂ. ಮತ್ತು ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಅಮೂಲ್ಯ ಟಿ. ಎಸ್. ಆಯ್ಕೆಯಾಗಿರುತ್ತಾರೆ.
ದಿನಾಂಕ 31ರಂದು ಕಾಲೇಜು ನಾಯಕರು ಮತ್ತು ತರಗತಿ ಪ್ರತಿನಿಧಿಗಳ ಚುನಾವಣೆಯನ್ನು ನಡೆಸಲಾಯಿತು. ಕಲಾ, ವಾಣಿಜ್ಯ,ವಿಜ್ಞಾನ ವಿಭಾಗದಿಂದ ತಲಾ ಇಬ್ಬರು ವಿದ್ಯಾರ್ಥಿಗಳು ತರಗತಿ ಪ್ರತಿನಿಧಿಗಳಾಗಿ ಆಯ್ಕೆಗೊಂಡಿದ್ದು ಚುನಾವಣಾ ಪ್ರಕ್ರಿಯೆಯಲ್ಲಿ ಪ್ರಾಂಶುಪಾಲರು ಹಾಗೂ ಸರ್ವ ಉಪನ್ಯಾಸಕ ವೃಂದದವರು ಉಪಸ್ಥಿತರಿದ್ದರು.