ಬೆಂಗಳೂರು,ಮೇ27(Nadubade News): ಕರ್ನಾಟಕದ ಶಕ್ತಿ ಕೇಂದ್ರ, ಪ್ರಜಾಪ್ರಭುತ್ವದ ಸಂಕೇತ ಎನಿಸಿಕೊಂಡಿರುವ ವಿಧಾನಸೌಧವು ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾಗಿದೆ. ಐತಿಹಾಸಿಕ ಕಟ್ಟಡದ ಮಹತ್ವವನ್ನು ಪರಿಚಯಿಸುವ ನಿಟ್ಟಿನಲ್ಲಿ ʼವಿಧಾನಸೌಧ ಮಾರ್ಗದರ್ಶಿ ನಡಿಗೆʼ ಆರಂಭಿಸಲಾಗಿದೆ.
ಪ್ರತಿ 2ನೇ ಮತ್ತು 4ನೇ ಶನಿವಾರ ಹಾಗೂ ಎಲ್ಲ ಭಾನುವಾರ ಬೆಳಗ್ಗೆ 8ರಿಂದ ಸಂಜೆ 5ರವರೆಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. 16 ವರ್ಷ ಕೆಳಗಿನ ಮಕ್ಕಳಿಗೆ ಉಚಿತ ಪ್ರವೇಶವಿರಲಿದ್ದು, ಇದಕ್ಕೆ ಮೇಲ್ಪಟ್ಟವರಿಗೆ 50 ರೂ. ಶುಲ್ಕ ನಿಗದಿ ಮಾಡಲಾಗಿದೆ. ದಿನಕ್ಕೆ 300 ಪ್ರೇಕ್ಷಕರಿಗೆ ಮಾತ್ರ ಪ್ರವೇಶ ಅವಕಾಶವಿರಲಿದೆ.
ಅಧಿಕೃತ ಕೆಎಸ್ಟಿಡಿಸಿ ವೆಬ್ಸೈಟ್ ಅಥವಾ ದೃಢೀಕೃತ ಟಿಕೆಟ್ ಸೇವಾ ಪೂರೈಕೆದಾರರ ವೇದಿಕೆಯಲ್ಲಿ ಟಿಕೆಟ್ ಬುಕ್ಕಿಂಗ್ ಕಡ್ಡಾಯ. ಸ್ಥಳದಲ್ಲಿ ಬುಕ್ಕಿಂಗ್ ಮಾಡಲು ಬಯಸುವವರು ಗೇಟ್ -3ರಲ್ಲಿರುವ ಕೆಎಸ್ಟಿಡಿಸಿ ಕೌಂಟರ್ನಲ್ಲಿ ಟಿಕೆಟ್ ಲಭ್ಯತೆ ಇದ್ದರೆ ಪ್ರವೇಶಕ್ಕೆ ಅವಕಾಶ ನೀಡಲಾಗುವುದು.