
ವಿರಾಜಪೇಟೆ, ಜೂ.25(nadubadenews): ಕೊಡಗು ಜಿಲ್ಲೆಯಲ್ಲಿ ಮಳೆಯ ಅಬ್ಬರ ಹೆಚ್ಚಾಗಿದ್ದು, ಶಾಲಾಮಕ್ಕಳಿಗೆ ರಜೆ ನೀಡುವ ವಿಚಾರದಲ್ಲಿ ತೀವ್ರ ಗೊಂದಲವಾಗುತ್ತಿದೆ. ಆತಂಕ ಪರಿಹಾರಕ್ಕೆ ಜಿಲ್ಲಾಧಿಕಾರಿಗಳಿಗೇ ನೇರ ನಿರ್ಧಾರ ತೆಗೆದುಕೊಳ್ಳಲು ಸೂಚಿಸುವುದಾಗಿ ಕೊಡಗು ಜಿಲ್ಲಾ ಉಸ್ತವಾರಿ ಸಚಿವ ಎನ್. ಎಸ್. ಬೋಸರಾಜು ನಡುಬಾಡೆ ನ್ಯೂಸ್ಗೆ ಸ್ಪಷ್ಟಪಡಿಸಿದ್ದಾರೆ.
ಇಂದು ಶಿಕ್ಷಣ ಇಲಾಖಾಧಿಕಾರಿಗಳು ಬೆಳಿಗ್ಗೆ 8.30ಕ್ಕೆ ಗೊಂದಲಕಾರಿಯಾಗಿ ರಜೆ ಘೋಷಿಸಿದ್ದು, ಇದರಿಂದಾಗಿ ಮಕ್ಕಳು, ಪೋಷಕರು, ಶಿಕ್ಷಕರ ಗೊಂದಲ ಮತ್ತು ಆತಂಕವನ್ನು, ನಡುಬಾಡೆ ನ್ಯೂಸ್ ಧೂರವಾಣಿ ಮೂಲಕ ಸಚಿವರ ಗಮನಕ್ಕೆ ತಂದಾಗ, ಮಾತನಾಡಿದ ಸಚಿವರು, ನಿನ್ನೆ ರಾತ್ರಿಯೇ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಢಿದ್ದೇನೆ, ಆದರೆ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಅಧಿಕಾರ ನೀಡಿರುವುದಾಗಿ ಜಿಲ್ಲಾಧಿಕಾರಿಗಳು ಹೇಳಿದ್ದಾರೆ ಎಂದರು.
ಇಂದು ಆಗಿರುವ ಗೊಂದಲ ಮತ್ತು ಆತಂಕದ ವಾಸ್ತವ ಚಿತ್ರಣವನ್ನು ನಡುಬಾಡೆ ನ್ಯೂಸ್ ಸಚಿವರಿಗೆ ಮನವರಿಕೆ ಮಾಡಿದಾಗ, ಸ್ಪಂದಿಸಿದ ಸಚಿವರು ಜಿಲ್ಲಾಧಿಕಾರಿಗಳಿಗೇ ನೇರ ನಿರ್ಧಾರ ತೆಗೆದುಕೊಂಡು, ಗೊಂದಲಕ್ಕೆ ಎಡೆಯಿಲ್ಲದಂತೆ ಕ್ರಮವಹಿಸಲು ತಕ್ಷಣ ಸೂಚಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ.
I’m glad the Nadubaade news is doing so good job and I appreciate your work❤️, Please make an article about the mekeri to madikeri road , the water flow is on the road near mekeri masjid and i personally fell into a roadside huge hole to give way for a bus and even heard about a father and child fell into the same pot hole while dropping the child to school, no work is done since few years only the pot holes are filled , no proper road side bush is cleared due to that opposite vehicles can’t be seen and there was also an accident near Kgb bank mekeri in the month of June and when the people complained to the chief engineer they said they don’t have funds , what a pity it is, the government have no fund to repair the state highway!
SIR please whtsapp some photos to 8951073556 we will do