
ಪೊನ್ನಂಪೇಟೆ, ಜೂ.22(nadubadenews): ಪೊನ್ನಂಪೇಟೆ ತಾಲೂಕು ಬೊಮ್ಮಾಡುವಿನಲ್ಲಿ, ನೂತನವಾಗಿ ನಿರ್ಮಿಸಿದ ವಿದ್ಯುತ್ ಲೈನ್ ಉದ್ಘಾಟನೆಯನ್ನು ವಿರಾಜಪೇಟೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಅವರು ಇಂದು ನೆರವೇರಿಸಿದರು.
ಕ್ಷೇತ್ರಾದ್ಯಂತ ವಿದ್ಯುತ್ ಸರಬರಾಜಿನ ಗುಣಮಟ್ಟವನ್ನು ಅಭಿವೃದ್ಧಿ ಪಡಿಸುವಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಬೊಮ್ಮಡುವಿನಲ್ಲಿ ನೂತನ ಲೈನ್ ಅಳವಡಿಕೆಯು, ಈ ಭಾಗಕ್ಕೆ ಸರಬರಾಜು ಆಗುವ ವಿದ್ಯುತ್ ಗುಣಮಟ್ಟವನ್ನು ಅಭಿವೃದ್ಧಿಪಡಿಸುವುದರೊಂದಿಗೆ, ಬೊಮ್ಮಾಡು ಹಾಡಿಗೆ ಮೊದಲ ಬಾರಿ ವಿದ್ಯುತ್ ನೀಡಿದ ಖ್ಯಾತಿ ಮಾನ್ಯ ಶಾಸಕರಿಗೆ ಸಂದಿದೆ. ತಾವು ಚುನಾವಣೆ ಸಂದರ್ಭದಲ್ಲಿ ಕೊಟ್ಟ ಮಾತಿನಂತೆ ಈಗ ಬೊಮ್ಮಡು ಹಾಡಿಗೆ ವಿದ್ಯುತ್ ಸಂಪರ್ಕ ಒದಗಿಸಿದ್ದು, ಮುಂದಿನ ದಿನಗಳಲ್ಲಿ ನಿರಂತರ ವಿದ್ಯುತ್ ಸರಬರಾಜು ಮಾಡಲು ಈ ಯೋಜನೆ ಸಹಕಾರಿಯಾಗಲಿದೆ ಎಂದು ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಬಣ್ಣಿಸಿದರು.
ಬಳಿಕ ಬೊಮ್ಮಡುವಿನಲ್ಲಿರುವ ವಾಲ್ಮೀಕಿ ಆಶ್ರಮ ಶಾಲೆಗೆ ಭೇಟಿ ನೀಡಿದ ಮಾನ್ಯ ಶಾಸಕರು, ವಸತಿ ಶಾಲೆಯ ಮೂಲಭೂತ ಸೌಕರ್ಯಗಳ ಬಗ್ಗೆ ಪರಿಶೀಲಿಸಿ, ಶಾಲೆಯ ಮಕ್ಕಳೊಂದಿಗೆ ಸಮಯ ಕಳೆದ ಮಾನ್ಯ ಶಾಸಕರು, ಮಕ್ಕಳಿಗೆ ದಿನ ಬಳಕೆಯ ಕಿಟ್ ಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ತಿತೀರ ಧರ್ಮಜ ಉತ್ತಪ್ಪ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಿದೇರಿರ ನವೀನ್, ನಾಲ್ಕೇರಿ ವಲಯ ಕಾಂಗ್ರೆಸ್ ಅಧ್ಯಕ್ಷರಾದ ತಿತೀರ ಕಟ್ಟಿ ಕಾರ್ಯಪ್ಪ, ಶ್ರೀಮಂಗಲ ವಲಯ ಅಧ್ಯಕ್ಷರಾದ ಪಲ್ವಿನ್ ಪೂಣಚ್ಚ, ಕೆ ಬಾಡಗ ವಲಯ ಅಧ್ಯಕ್ಷರಾದ ಚಿಮಾಣ್ಣಮಾಡ ರವಿ, ಕೆ ಬಾಡಗ ಪಂಚಾಯಿತಿ ಸದಸ್ಯರಾದ ಬೋಪ್ಪಣ್ಣ, ನಾಲ್ಕೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸೋಮಯ್ಯ, ನಾಲ್ಕೇರಿ ಗ್ರಾಮ ಪಂಚಾಯಿತಿ ಸದಸ್ಯರಾದ ಲಕ್ಷ್ಮಿ, ಮುಕಟ್ಟೀರ ದೀಪಕ್, ವಿಶು, ಅಜ್ಜಿಕುಟ್ಟಿರ ಗಿರೀಶ್, ಪಕ್ಷದ ಪ್ರಮುಖರು, ಐಟಿಡಿಪಿ ಇಲಾಖೆಯ ಅಧಿಕಾರಿಗಳು, ಶಾಲೆ ಮುಕ್ಯೋಪಾಧ್ಯಾಯರು, ಸಿಬಂಧಿ ವರ್ಗ, ಶಾಲಾ ಮಕ್ಕಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.




