ಬೆಂಗಳೂರು, ಜೂ.27(nadubadenews): ಮಕ್ಕಳ ಪ್ರಿಯವಾದ ಚಾಕೋಲೇಟ್ಗಳಲ್ಲಿ ಒಂದಾದ ಜೆಲ್ಲಿಯನ್ನು ಕೊಡಿಸುವ ಮುನ್ನ ಯೋಚಿಸುವ ಪರಿಸ್ತಿತಿ ಬಂದಿದೆ. ಇದೇ ರಂಗು ರಂಗಿನ ಜಲ್ಲಿ ಚಾಕೋಲೇಟ್ ಒಳಗೆ ಗಾಂಜಾ ರಸಸೇರಿಸಿ ಮಾರಾಟ ಮಾಡುವ ಜಾಲವನ್ನು ಬೆಂಗಳುರಿನಲ್ಲಿ ಪತ್ತೆಹಚ್ಚಚಾಗಿದೆ.
ಬೆಂಗಳೂರಿನ ನಗರಕ್ಕೆ ಹೊಸ ಮಾದರಿಯ ಜಲ್ಲಿ ಗಾಂಜ ಎಂಟ್ರಿ ಕೊಟ್ಟಿದ್ದು, ಜಲ್ಲಿ ಚಾಕೊಲೇಟ್ನಲ್ಲಿ ಗಾಂಜಾ ಮಿಕ್ಸ್ ಮಾಡಿ ಮಾರಾಟ ಮಾಡಲಾಗುತ್ತಿದ್ದ ದಂದೆಯನ್ನು ಪೋಲೀಸರು ಪತ್ತೆಹಚ್ಚಿದ್ದಾರೆ. ಮೆಡಿಕಲ್ ಹಾಗೂ ಇಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡುತ್ತಿರುವ ಈ ದಂದೆಯ ಬಗ್ಗೆ ಬ್ಯಾಟರಾಯನಪುರ ಪೊಲೀಸರಿಗೆ ಲಭಿಸಿದ ಮಾಹಿತಿ ಮೇರೆಗೆ, ಬಂಧಿಸಲಾಗಿದೆ ಮೊಹಮ್ಮದ್ ಜಾಯಿದ್ ಹಾಗೂ ಇಸ್ಮೈಲ್ ಅದ್ನಾದ್ ಬಂದಿತ ಆರೋಪಿಗಳಾಗಿದ್ದು ತಲೆಮರೆಸಿಕೊಂಡ ಮತ್ತೊಬ್ಬ ದಂದೆಕೋರನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಬ್ಯಾಟರಾಯನಪುರ ಇನ್ಸ್ಪೆಕ್ಟರ್ ಕೆ ಜೀವನ ನೇತೃತ್ವದ ತಂಡದಿಂದ ಕಾರ್ಯಾಚರಣೆ ಮಾಡಿದ್ದು ಒಟ್ಟು ಮೂರು ಲಕ್ಷ ಮೌಲ್ಯದ 1640 ಗ್ರಾಂ ಜಲ್ಲಿಗನ್ಜಾ ವಶಕ್ಕೆ ಪಡೆದಿದ್ದಾರೆ ತನಿಖೆ ವೇಳೆ ಜೊತೆ ಬೆರೆಸುತ್ತಿರುವುದು ಪತ್ತೆಯಾಗಿದೆ