
ಚೆಟ್ಟಳ್ಳಿ, ಜು.07(nadubadenews): ಕೊಡಗಿನ ಸಾಂಪ್ರದಾಯಿಕ ಉಡುಗೆ ತೊಟ್ಟ ಮಹಿಳೆಯರು ತಂಡ ಕೊಡಗಿನ ಕಕ್ಕಡ ತಿಂಗಳ ವಿವಿಧ ಖಾದ್ಯಗಳನ್ನು ಪ್ರಾಯೋಗಿಕವಾಗಿ ಮಾಡುವ ಮೂಲಕ ಎಲ್ಲರ ಘಮನ ಸೆಳೆದದ್ದು ಚೆಟ್ಟಳ್ಳಿಯಲ್ಲಿ ಕಂಡುಬಂದವು.
ಕೊಡಗಿನಲ್ಲಿ ಕಕ್ಕಡ ತಿಂಗಳಿಗೆ ವಿಶೇಷ ಪ್ರಾಧಾನ್ಯತೆ ಇದ್ದುಎಲ್ಲೆಡೆ ಕಕ್ಕಡ 18 ಆಚರಣೆ ನಡೆಯುತಿದೆ.ಅದೇರೀತಿ ಚೆಟ್ಟಳ್ಳಿಯ ಅವರ್ ಕ್ಲಬ್ಬ್ ನ ಮಹಿಳೆಯರು ಕಕ್ಕಡ ಪಾಯಸ, ಮದ್ದ್ ಪುಟ್ಟ್, ಹಂದಿ ಮಾಂಸದ ಸಾರು, ಪತ್ರೊಡೆ, ಏಡಿ ಸಾರು, ನಾಟಿಕೊಳಿಸಾರು, ಹಲಸಿನ ಬೀಜದ ಚಟ್ನಿ, ಅಕ್ಕಿರೊಟ್ಟಿ, ಕಣಿಲೆ ಸಾರು, ಹೀಗೆ ಹಲವು ಬಗೆಯ ಖಾದ್ಯಗಳ ತಯಾರಿಕೆ ಹಾಗು ಪ್ರದರ್ಶನ ಏರ್ಪಡಿಸಲಾಯಿತು.
ಕೊಡಗಿನ ಗ್ರಾಮೀಣ ಸೊಬಗಿನ ಚಿತ್ರಣದ ಸೌದೆ ಒಲೆಯ ಅಡುಗೆಯ ಸಂಪ್ರದಾಯ, ಕಕ್ಕಡ ದಿನ ವಿಶೇಷದ ಮಹಿಳೆಯರ ಲಾವಣಿ ಹಾಡುಗಳು, ಕ್ರೀಡೆಗಳು ಹೀಗೆ ಹಲವು ಬಗೆಯ ಕಾರ್ಯಕ್ರಮದ ಅಕರ್ಶಣೆ ಗಳಾಗಿದ್ದವು.
ಕಾರ್ಯಕ್ರಮದ ಅಂಗವಾಗಿ ಅಧ್ಯಕ್ಷರಾದ ಮುಳ್ಳಂಡ ಶೋಭಾಚಂಗಪ್ಪ ಮಾತನಾಡಿ ಕೊಡಗಿನ ಸಾಂಪ್ರದಾಯದ ಆಚರಣೆಯನ್ನು ಕ್ಲಬ್ ವತಿಯಿಂದ ಈ ಬಾರಿ ವಿಶೇಷವಾಗಿ ಆಚರಿಸಲಾಗುತಿದೆಂದರು. ಮುಳ್ಳಂಡ ಮಾಯಮ್ಮತಮ್ಮಯ್ಯ ಪ್ರಾರ್ಥಿಸಿ, ಶೋಭಾಚಂಗಪ್ಪ ಸ್ವಾಗತಿಸಿ, ಕೆಚ್ಚೆಟೀರ ಕಾರ್ಯಪ್ಪ ನಿರೂಪಿಸಿದರು.ಕಕ್ಕಡ ಖಾದ್ಯಗಳ ತಯಾರಿಕೆ ಹಾಗು ಉತ್ತಮ್ಮ ಪ್ರದರ್ಶನಾ ತಂಡಕ್ಕೆ ಬಹುಮಾನ ವಿತರಿಸಲಾಯಿತು. ಪಳಂಗಂಡ ಕಮಲ ಸುಬ್ಬಯ್ಯ, ಕೋಡಿಮಣಿಯಂಡ ಪದ್ಮಿನಿ ಪೂವಣ್ಣ ,ಚೆಟ್ರಂಡ ವಸಂತಿ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.