ವಿರಾಜಪೇಟೆ: ಏ: 14: (ಕಿಶೋರ್ ಕುಮಾರ್ ಶೆಟ್ಟಿ) : ಕಲಾವಿದನ ಬದುಕು ಅನೇಕ ಏರಿಳಿತಗಳನ್ನು ಕಂಡು ಸಾಗುತ್ತದೆ. ಅದರೇ ಬದುಕಿನಲ್ಲಿ ಸಾಧಿಸಿರುವ ಸಾದನೆಯು ಯುಗಯುಗಳು ಕಳೆದರು ಶಾಶ್ವತವಾಗಿ ನೆಲೆ ನಿಲ್ಲುತ್ತದೆ ಇದಕ್ಕೆ ಸಾಕ್ಷಿ ದಿ.ಅಪಾಡಂಡ ರಘು ಅವರು ಎಂದು, ಅವರ ನೆನಪಿನಲ್ಲಿ ನಡೆದ ಶ್ರದ್ದಾಂಜಲಿ ಸಭೆಯಲ್ಲಿ ಭಾಗವಹಿಸಿದ್ದ ಗಣ್ಯರು ಮನದಾಳದಿಂದ ನುಡಿ ನಮನ ಸಲ್ಲಿಸಿದರು.
ಕೊಡಗು ಜಿಲ್ಲಾ ಕಲಾವಿದರ ಸಂಘ (ರಿ) ಮಡಿಕೇರಿ ಕೊಡಗು ಜಿಲ್ಲೆ ವತಿಯಿಂದ ವಿರಾಜಪೇಟೆ ನಗರದ ನಿಸರ್ಗ ಬಡಾವಣೆಯ ಕೆ.ಕೆ. ಗ್ರೂಪ್ ಖಾಸಗಿ ಸಭಾಂಗಣದಲ್ಲಿ, ಇತ್ತೀಚೆಗೆ ಅಗಲಿದ ಕನ್ನಡ ಚಿತ್ರರಂಗದ ಖ್ಯಾತ ನಿರ್ಧೇಶಕ ದಿ. ಅಪಾಡಂಡ ಟಿ. ರಘು ಅವರಿಗೆ ಶ್ರಧ್ದಾಂಜಲಿ ಸಭೆ ಎರ್ಪಡಿಸಲಾಗಿತ್ತು. ಸಭೆಗೆ ಆಗಮಿಸಿ ಮಾತನಾಡಿದ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಅವರು, ಜಿಲ್ಲೆಯಲ್ಲಿ ಹಲವು ಕಲಾವಿದರಿಗೆ ಆಶ್ರಯ ಕರುಣಿಸಿ ಕೊಡವ ಧೀಮಂತ ಸಂಸ್ಕೃತಿಯನ್ನು ವಿಶ್ವದ ಎಲ್ಲೆಡೆ ದಾರವಾಹಿ ಮೂಲಕ ಭಿತ್ತರಿಸಿದ ಕೀರ್ತಿ ರಘು ಅವರಿಗೆ ಸಲ್ಲುತ್ತದೆ. ಕೊಡಗಿನಲ್ಲಿ ಐನ್ ಮನೆಗಳು ಒಂದಾನೊಂದು ಕಾಲದಲ್ಲಿ ನಶೀಸಿ ಹೋಗುವ ಸ್ಥಿತಿಯಿತ್ತು. ಐನ್ ಮನೆಗಳ ಚಿತ್ರಣ ಐತಿಹಾಸಿಕ ಕ್ಷಣಗಳು ಹಿನ್ನಲೆಗಳನ್ನು ದಾರವಾಹಿ ಮೂಲಕ ಜನತೆಗೆ ತೋರಿಸಿಕೊಟ್ಟು ಐನ್ ಮನೆಗಳ ಉಳಿವಿಗೆ ಕಾರಣಕರ್ತರಾದವರು ಎ.ಟಿ. ರಘು ಅವರು, ಇತಂಹ ಮಾಹಾನ್ ವ್ಯಕ್ತಿಗಳ ಸಾಧನೆಯನ್ನು ಎಂದಿಗೂ ಜೀವಂತವಾಗಿರಿಸುವ ನಿಟ್ಟಿನಲ್ಲಿ ಶಾಶ್ವತವಾದ ಭವನ ನಿರ್ಮಾಣ ಮಾಡಬೇಕು ಅಲ್ಲದೆ. ಸದಾ ಕಾಲವು ನೆನಪಿಸುವಂತೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತಾಗಬೇಕು ಎಂದು ಹೇಳಿದರು.
ಹಿರಿಯ ಕಲಾವಿದರಾದ ನೆರವಂಡ ಉಮೇಶ್ ಅವರು ತಮ್ಮ ಪ್ರಸ್ತಾವಿಕ ಭಾಷಣದಲ್ಲಿ ಕೊಡಗು ಜಿಲ್ಲೆ ಪುಟ್ಟದಾದರು ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿರುವುದಕ್ಕೆ ಹಲವು ಮಹನೀಯರು ದಂತಕತೆಗಳೇ ಸಾಕ್ಷೀ. ಕೊಡಗು ಜಿಲ್ಲೆಯಿಂದ ಒಂದು ನೂರು ರೂಪಾಯಿಗಳಲ್ಲಿ ಮದ್ರಾಸ್ಗೆ ಪಯಣ ಬೆಳೆಸಿ ಸುಮಾರು 57 ಚಲನಚಿತ್ರಗಳನ್ನು ನಿರ್ಧೇಶನ ಮಾಡಿ ಖ್ಯಾತ ನಾಮರ ಸಾಲಿನಲ್ಲಿ ನೆಲೆ ಕಂಡಿರುವ ದಿ..ಎ.ಟಿ ರಘು ಅವರು ಧಿಮಂತರು. ನಟನೆ ಎಂಬುದು ಏನೆಂಬುದು ತಿಳಿಯದಿದರುವ ವಯಸ್ಸಿನಲ್ಲಿ ನಟನೆ ಕಲಿಕೆಯೊಂದಿಗೆ ಹಲವು ಕಲಾವಿದರನ್ನು ಹುಟ್ಟುಹಾಕಿದ್ದಾರೆ. 06 ಕೊಡವ ದಾರವಾಹಿಗಳನ್ನು ಕಿರುತೆರೆಯ ಮೇಲೆ ಭಿತ್ತರಿಸಿದ್ದಾರೆ. ದಾರವಾಹಿಗಲ್ಲಿ ಬರುವ ಸಾಹಿತ್ಯ, ಹಾಡುಗಳು, ಸಂಸ್ಕೃತಿಯು ಮುಂದಿನ ಪೀಳಿಗೆಗೆ ಧಾರಿದೀಪದಂತೆ. ಎ.ಟಿ. ರಘು ಅವರು ಮಾತನಾಡುವ ಶೈಲಿ, ಕಲ್ಪನೆ, ವಿಮರ್ಶೇಗಳು ಚಿತ್ರಕಥೆಗಳನ್ನು ಹೆಣೆಯುವ ರೀತಿ ಹೇಳುವ ಧಾಟಿ, ಎಲ್ಲಾವನು ಮನದಟ್ಟು ಮಾಡಿದಲ್ಲಿ ಸಂಪೂರ್ಣ ನಟನಾಗಬಹುದು. ಇಂತಃ ಮಹಾನ್ ಚೇತನ ಇಹಲೋಕ ತೆಜಿಸುವ ವೇಳೆಯಲ್ಲಿ ಹಾಸಿಗೆ ಹಿಡಿದಿದ್ದರು. ಕಾಯಿಲೆ ಆವರಿಸಿತು. ಕಷ್ಟದ ಸಮಯವನ್ನು ಕಳೆದಿದ್ದರು. ಕಲಾವಿದನ ಇಂತ ಸಂಕಷ್ಟಕ್ಕೆ ಪ್ರತಿಸ್ಪಂದಿಸಬೇಕು ಈ ನಟ್ಟಿನಲ್ಲಿ ಕೊಡಗು ಜಿಲ್ಲಾ ಕಲಾವಿದರ ಸಂಘ ಹುಟ್ಟುಹಾಕಲಾಗಿದೆ. ಇಲ್ಲಿ ನಿರ್ಮಾಪಕ, ನಿರ್ಧೇಶಕ, ನಾಯಕ ನಟ, ನಟಿ, ಕಿರುತೆರೆ ಕಲಾವಿದ ಹೀಗೆ ಯಾವುದೇ ತಾರತಮ್ಯವಿಲ್ಲದೆ ಎಲ್ಲಾರು ಕಲಾವಿದರು ಎಂಬ ಮನೋಭಾವ ಕಾಣುವಂತಾಗಬೇಕು. ಎಂದು ಹೇಳಿದರು.
ಜಿಲ್ಲಾ ಜನಪದ ಪರಿಷತ್ ಅದ್ಯಕ್ಷರಾದ ಬಿ.ಜಿ. ಅನಂತಶಯನ ಅವರು ಮಾತನಾಡಿ ಎ.ಟಿ. ರಘು ಅವರು ಆತ್ಮಜ್ಯೋತಿಯಂತೆ ಮನುಜನ ದೇಹಕ್ಕೆ ಸಾವು ಸಂಭವಿಸಿದರು. ಜ್ಯೋತಿಯು ಎಂದಿಗೂ ನಂದುವುದಿಲ್ಲಾ. ಎ.ಟಿ. ರಘು ಅವರ ಹೆಸರಿನಲ್ಲಿ ಶಾಶ್ವತವಾದ ಸ್ಮಾರಕ ನಿರ್ಮಾಣವಾಗಬೇಕು. ಕಳೆದುಕೊಂಡಿರುವ ದಿವ್ಯ ಚೇತನಕ್ಕೆ ಕಲಾವಿದರ ಆತ್ಮಪೂರ್ಣ ಕಲೆ ನಮನಗಳನ್ನು ಸಲ್ಲಿಸುವಂತಾಗಬೇಕು ಎಂದು ಹೇಳಿದರು.
ದಿ. ಎ.ಟಿ. ರಘು ಅವರ ಪುತ್ರಿ ಬಯವಂಡ ಬಿನು ಸಚೀನ್ ಅವರು ಮಾತನಾಡಿ. ಜಿಲ್ಲೆ ಮತ್ತು ರಾಜ್ಯದ ಚಲನಚಿತ್ರ ಕ್ಷೇತ್ರಕ್ಕೆ ತಮ್ಮ ಜೀವನವನ್ನೇ ತ್ಯಾಗ ಮಾಡಿದ್ದಾರೆ ನಮ್ಮ ತಂದೆ. ಅವರು ನೀಡಿರುವ ಸ್ಪೂರ್ತಿದಾಯಕವಾದ ಮಾಹಿತಿಗಳು ಯುವ ಜನತೆಗೆ ಮಾರ್ಗದರ್ಶನವಾಗಬೇಕು. ಅವರ ಅಶೋತ್ತರಗಳು ಯುವ ಜನತೆಗೆ, ಕಲಾವಿದರಿಗೆ ಧಾರಿದೀಪವಾಗಬೇಕು ಎಂದು ಹೇಳಿದರು.
ಕಾರ್ಯಕ್ರಮ ಉದ್ದೇಶಿಸಿ ಬ್ರಹ್ಮಗಿರಿ ವಾರ ಪತ್ರಿಕೆಯ ಸಂಪಾದಕರಾದ ಉಳ್ಳಿಯಡ ಪೂವಯ್ಯ, ಕನ್ನಡ ಸಾಹಿತ್ಯ ಪರಿಷತ್ನ ನಿಕಟಪೂರ್ವ ಅದ್ಯಕ್ಷರಾದ ಮಾದಂಡ ಪೂವಯ್ಯ, ಕಾವೇರಿ ಕಾಲೇಜಿನ ಮಾಜಿ ಪ್ರಾಂಶುಪಾಲರಾದ ಪ್ರೋ.ಇಟ್ಟಿರ ಬಿದ್ದಪ್ಪ, ಕೊಡವಾಮೆರ ಕೊಂಡಾಟ ಸಂಘಟನೆಯ ಅದ್ಯಕ್ಷರಾದ ಚಾಮೇರ ದಿನೇಶ್ ಬೆಳ್ಯಪ್ಪ, ನಿರ್ದೆಶಕರಾದ ಕೊಟ್ಟುಕತ್ತಿರ ಪ್ರಕಾಶ್, ಪೊನ್ನಚೆಟ್ಟಿರ ರಮೇಶ್, ಚಿರಿಯಪಂಡ ಸುರೇಶ್, ಕೋಟ್ರುಮಾಡ ಲಾಲ ಪೂಣಚ್ಚ ಚಲನಚಿತ್ರ ನಟಿ ತಾತಂಡ ಪ್ರಭಾ ನಾಣಯ್ಯ ಅವರುಗಳು ಮಾತನಾಡಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಎ.ಟಿ. ರಘು ಅವರ 45 ನಿಮಿಷಗಳ ಸಾಕ್ಷ ಚಿತ್ರ ಪ್ರದರ್ಶನ ಕಂಡಿತ್ತು. ಜಿಲ್ಲೆಯ ಹೆಸರಾಂತ ಚಿತ್ರಕಲಾವಿದರಾದ ಬಿ.ಆರ್.ಸತೀಶ್ ಅವರ ಕುಂಚದಿಂದ ಎ.ಟಿ. ರಘು ಅವರ ಭಾವಚಿತ್ರ ಅನಾವರಣವಾಯಿತು. ಗಾಯಕರಾದ ಟಿ.ಡಿ.ಮೋಹನ್ ಮತ್ತು ಮಾಳೇಟಿರ ಅಜೀತ್ ಅವರಿಂದ, ಚೊಟ್ಟಂಡ ಪ್ರಭೂ ಸೋಮಯ್ಯ ರಚಿತ ಶೋಕ ಗೀತೆ ಹಾಡಲಾಯಿತು. ಬಹುಭಾಷ ಸಾಹಿತಿಗಳಾದ ಉಳುವಂಗಡ ಕಾವೇರಿ ಅವರು ಎ.ಟಿ. ರಘು ಅವರ ಹೆಸರಿನಲ್ಲಿ ಸಾಹಿತ್ಯ ರಚನೆ ಮಾಡಿ ನುಡಿದರು. ಜಾದುಗಾರ್ ವಿಕ್ರಂ ಶೆಟ್ಟಿ ಅವರು ತಮ್ಮ ಜಾದು ಕಲೆಯ ಮೂಲಕ ಎ.ಟಿ. ರಘು ಅವರ ಭಾವಚಿತ್ರದೊಂದಿಗೆ ಹೂವಿನ ಮಾಲೆ ಪ್ರದರ್ಶನ ಮಾಡಿದರು.
ವಿರಾಜಪೇಟೆ ಕೊಡವ ಸಮಾಜದ ಮಾಜಿ ಅದ್ಯಕ್ಷರು, ಹಿರಿಯ ನಟರಾದ ವಾಂಚಿರ ನಾಣಯ್ಯ ಅವರು ಕಾರ್ಯಕ್ರಮದ ಅದ್ಯಕ್ಷತೆ ವಹಿಸಿ ಮಾತನಾಡಿ, ದಿ.ಎ.ಟಿ ರಘು ಅವರು ನಮ್ಮನ್ನು ಬಿಟ್ಟು ಕಣ್ಮರೆಯಾಗಿದ್ದಾರೆ. ಅದರೇ ಅವರು ಕನ್ನಡ ಚಲನಚಿತ್ರ ಕ್ಷೇತ್ರ, ಕೊಡವ ಭಾಷೆ, ಸಂಸ್ಕೃತಿ ಕಲೆಗೆ ಕಲಾವಿದರಿಗೆ ನೀಡಿರುವ ಸೇವೆ ಅನನ್ಯವಾಗಿದೆ. ಮನುಷ್ಯ ಜೀವನದಲ್ಲಿ ಸಾಧಿಸುವ ಅನೇಕ ಸಂಗತಿಗಳು ಕಣ್ಮರೆಯಾದರು ಗುಣಗಾನ ಮಾಡುವಂತಿರಬೇಕು. ರಘು ಅವರ ಹೆಸರಿನಲ್ಲಿ ಕಲೆಗೆ ಸಂಭಂದಿಸಿದಂತೆ ಸಾಧನೆಗೈದ ವ್ಯಕ್ತಿಗಳನ್ನು ಗುರುತಿಸಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ ಎಂದು ಹೇಳಿದರು.
ನೆಲ್ಲಚಂಡ ರೇಖಾ ಅವರು ಸ್ವಾಗತಿಸಿ, ಈರಮಂಡ ಹರಿಣಿವಿಜಯ್ ಮತ್ತು ಮುಂಡಾಚಾಡಿರ ರಿನಿಭರತ್ ಅವರು ಕಾರ್ಯಕ್ರಮ ನಿರೂಪಿಸಿದರು. ಬಿದ್ದಂಡ ವಿಕ್ರಮ್ ಬಿದ್ದಪ್ಪ ಅವರು ವಂದಿಸಿದರು.
ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಕಲಾವಿದರ ಸಂಘದ ಪದಾಧಿಕಾರಿಗಳು, ಸದಸ್ಯರಾದ, ಬಾಳೆಯಡ ಪ್ರತೀಶ್, ಪಟ್ಟಡ ಧನು, ಆಚೆಯಡ ಗಗನ್, ಸೇರಿದಂತೆ ಎ.ಟಿ. ರಘು ಅವರು ನಿರ್ಧೇಶಿಸಿದ ಚಲನಚಿತ್ರದಲ್ಲಿ ಅಭಿನಯಿಸಿದ ನಟ ನಟಿಯರು, ಕಿರು ತೆರೆಯ ನಟನಟಿಯರು, ಗಾಯಕರು ಹಿತೈಷಿಗಳು, ಸ್ನೇಹಿತರು, ಹಾಜರಿದ್ದರು.