ಗೋಣಿಕೊಪ್ಪ ಜೂ.12 (nadubadenews): ಗೋಣಿಕೊಪ್ಪ ಪಟ್ಟಣದಲ್ಲಿ ವಾಹನದಟ್ಟಣೆ ಹೆಚ್ಚಾಗಿರುವುದರಿಂದ, ಟ್ರಾಫಿಕ್ ಜಾಮ್ ಸಮಸ್ಯೆ ನಿರಂತರವಾಗಿದ್ದು ಸಾರ್ವಜನಿಕರಲ್ಲಿ ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಇದೀಗ ಗೋಣಿಕೊಪ್ಪ ಪೊಲೀಸರು ನಗರ ಚೇಂಬರ್ ಆಫ್ ಕಾಮರ್ಸ್ಗೆ ಪತ್ರ ಬರೆದು ಕೆಲವು ನಿಬಂಧನೆಗಳನ್ನು ಅಳವಡಿಸಿಕೊಳ್ಳುವಂತೆ ಕೋರಿದ್ದಾರೆ.
ಗೋಣಿಕೊಪ್ಪ ಪಟ್ಟಣದಲ್ಲಿ ಅಂದಾಜು 400 ವಾಣಿಜ್ಯ ಮಳಿಗೆಗಳು ಇದ್ದು ಈ ಮಳಿಗೆಗಳಿಗೆ ಸಾಮಗ್ರಿಗಳನ್ನು ಹೊತ್ತು ತರುವ ವಾಹನಗಳು ಇನ್ನು ಮುಂದೆ ಬೆಳಿಗ್ಗೆ 07 ಗಂಟೆಯ ಒಳಗಡೆ ಹಾಗೂ ಸಂಜೆ 08ಗಂಟೆಯ ನಂತರ ಮುಖ್ಯರಸ್ತೆಯಲ್ಲಿ ನಿಲುಗಡೆಗೊಳಿಸಿ ಸಾಮಗ್ರಿಗಳನ್ನು ಇಳಿಸಲು ಅವಕಾಶ ಇರುವ ಬಗೆ ತಿಳುವಳಿಕೆ ನೀಡುವಂತೆ, ಹಾಗೆಯೇ ವರ್ತಕರು ತಮ್ಮ ಸ್ವಂತ ವಾಹನಗಳನ್ನು ದಿನಪೂರ್ತಿ ಮುಖ್ಯ ರಸ್ತೆಯಲ್ಲಿ ನಿಲುಗಡೆಗೊಳಿಸದೆ ಬೇರೊಂದು ಕಡೆ ವಾಹನ ನಿಲುಗಡೆ ವ್ಯವಸ್ಥೆ ಮಾಡಿಕೊಳ್ಳಲು ಸೂಚಿಸುವಂತೆ ನಗರ ಚೇಂಬರ್ ಆಫ್ ಕಾಮರ್ಸ್ ಆದ್ಯಕರಿಗೆ ಬರೆದಿರುವ ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ. ಸುಗಮ ವಾಹನ ಸಂಚಾರಕ್ಕಾಗಿ ಈಗಿರುವ ಸಮಸ್ಯೆಯನ್ನು ಬಗೆಹರಿಸಲು ಅನುವು ಮಾಡಿಕೊಡಬೇಕಾಗಿ ಕೋರಿಕೊಂಡಿದ್ದಾರ
ಇದೇ ರೀತಿ ವರ್ತಕರು ತಮ್ಮ ಸ್ವಂತ ವಾಹನಗಳನ್ನು ಮಳಿಗೆಯ ಮುಂಭಾಗದ ಮುಖ್ಯ ರಸ್ತೆಯಲ್ಲಿ ಹೆಚ್ಚಿನ ಸಮಯ ನಿಲುಗಡೆಗೊಳಿಸಿದರೆ ವಾಹನವನ್ನು ಟೋಯಿಂಗ್ ಮೂಲಕ ಸಾಗಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಮ್ಮ ಪತ್ರದಲ್ಲಿ, ಪೊಲೀಸ್ ಇಲಾಖೆ ತಿಳಿಸಿದೆ.