ಕುಶಾಲನಗರ ಮೇ 23(Nadubade News): ಕುಶಾಲನಗರ ನ್ಯಾಯಾಲಯ ದಲ್ಲಿ ಕಳೆದ 3 ವರ್ಷಗಳಿಂದ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿ, ನಂಜನಗೂಡುಗೆ ವರ್ಗಾವಣೆಗೊಂಡ ಸರಿತ ಕುಮಾರಿಯವರಿಗೆ ಕುಶಾಲನಗರ ತಾಲೋಕು ವಕೀಲರ ಸಂಘ ದಿಂದ ಹಾರ್ದಿಕ ವಾಗಿ ಬೀಳ್ಕೊಡುಗೆ ನೀಡಲಾಯಿತು.
ನಿರ್ಗಮಿತ ನ್ಯಾಯಧೀಶರು ಮಾತನಾಡಿ, ಕುಶಾಲನಗರದಲ್ಲಿ ಸೇವೆ ಸಲ್ಲಿಸಿದ ಬಗ್ಗೆ, ತಮಗೆ ತೃಪ್ತಿ ತಂದಿದೆ, ನ್ಯಾಯಾಲಯದ ಸಿಬ್ಬಂದಿಗಳಿಗೆ, ನ್ಯಾಯಲಯದಲ್ಲಿ ಸಹಕರಿಸಿದ ವಕೀಲ ಮಿತ್ರರಿಗೆ ಧನ್ಯವಾದಗಳನ್ನು ಈ ಸಂದರ್ಭದಲ್ಲಿ ಹೇಳಿದರು.
ನ್ಯಾಯಾಧೀಶರಿಗೆ ನೆನಪಿನ ಕಾಣಿಕೆ ನೀಡಿ ಉಜ್ವಲ ಭವಿಷ್ಯ ಹಾರೈಸಿ ಹರಿದ್ರಾ, ಸಿಂಧೂರ, ಸಕಲ ಗೌರವದೊಂದಿಗೆ ಬೀಳ್ಕೊಡಲಾಯಿತು.
ಈ ಸಂದರ್ಭದಲ್ಲಿ, ವಕೀಲ ಸಂಘ ದ ಸದಸ್ಯ ಕೆ. ಪಿ ಶರತ್ ರವರ ಮಗ ಕೆ. ಎಸ್ ಚಿನ್ಮತ್ ಮಗು ಕ್ರೀಡಾ ಕ್ಷೇತ್ರ ದಲ್ಲಿ ರಾಷ್ಟ್ರೀಯ ಮಟ್ಟ ಚೆಸ್ ನಲ್ಲಿ ಪ್ರಶಸ್ತಿ(ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲೆ ಮಾಡಿದ್ದು )ಪಡೆದಿರುತ್ತಾನೆ. ಶೈಕ್ಷಣಿಕ ಕ್ಷೇತ್ರದ ಲ್ಲಿ ಎಸ್ ಎಸ್ ಎಲ್ ಸಿ ಯಲ್ಲಿ ರಾಜ್ಯ ಕ್ಕೆ 6ನೇ ರ್ಯಾಂಕ್ ಪಡೆದ ಕೂಡಿಗೆ ಬಿ ಮೋಹನ್ ರವರ ಪುತ್ರಿ ಸಮೃದ್ಧಿ ಆಚಾರ್, ಜಿ ಎಲ್ ಸವಿತ ಎಂಬುವವರ ಮಗಳು ಯಶಸ್ವಿನಿ ಯವರು ದ್ವಿತೀಯ ಪಿ ಯು ಸಿ ಯಲ್ಲಿ ಶೇ 91%ಪಡೆದಿದ್ದು ಅವರಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಆರ್ ಕೆ ನಾಗೇಂದ್ರ ವಹಿಸಿದ್ದು, ಕೂಡಿಗೆ ಬಿ ಮೋಹನ್ ಸ್ವಾಗತಿಸಿ, ಉಪಾಧ್ಯಕ್ಷ ಕೆ ಎಸ್ ವೆಂಕಟರಮಣರಾವ್ ವಂದಿಸಿದರು. ಸಮಾರಂಭದಲ್ಲಿ, ವಕೀಲಸಂಘದ ಸದಸ್ಯರು, ನ್ಯಾಯಾಲಯದ ಸಿಬ್ಬಂದಿಗಳು,ಆರಕ್ಷಕರು, ಹಾಜರಿದ್ದರು.