ವಿರಾಜಪೇಟೆ, ಸೆ.15(nadubade news): ಕುಲಮಾತೆ ಕಾವೇರಿ ಅಕ್ಟೋಬರ್ 17ರ ಮಧ್ಯಾಹ್ನ 1 ಗಂಟೆ 44 ನಿಮಿಷಕ್ಕೆ ಮಕರ ಲಗ್ನದಲ್ಲಿ ತೀರ್ಥರೂಪಿಣಿಯಾಗಿ ಆವಿರ್ಭವಿಸಲಿರುವ ಕಾವೇರಿ.
ಕಾವೇರಿ ಚಂಗ್ರಾದಿಯ ಪ್ರಯುಕ್ತ ದೇವಾಲಯದಲ್ಲಿ ಇದೇ ತಿಂಗಳು 26ರ ಶುಕ್ರವಾರ ಬೆಳಗ್ಗೆ 9:31ಕ್ಕೆ ತುಲಾ ಲಗ್ನದಲ್ಲಿ ಪತ್ತಾಯಕ್ಕೆ ಅಕ್ಕಿ ಹಾಕುವುದು, ಅಕ್ಟೋಬರ್ 4ರ ಶನಿವಾರ ಬೆಳಗ್ಗೆ 8:33ರ ತುಲಾ ಲಗ್ನದಲ್ಲಿ ಆಜ್ಞಾ ಮುಹೂರ್ತ, ಅ. 14ರ ಮಂಗಳವಾರ ಬೆಳಗ್ಗೆ 11:45ಕ್ಕೆ ಧನುರ್ ಲಗ್ನದಲ್ಲಿ ಅಕ್ಷಯ ಪಾತ್ರೆ ಇರಿಸುವುದು,ಸಂಜೆ 4:45ಕ್ಕೆ ಮೀನಾ ಲಗ್ನದಲ್ಲಿ ಕಾಣಿಕೆ ಡಬ್ಬಿ ಇರಿಸುವುದು .ಅ. 17ರ ಶುಕ್ರವಾರ ಮಧ್ಯಾಹ್ನ 1:44 ಮಕರ ಲಗ್ನದಲ್ಲಿ ಪವಿತ್ರ ತೀರ್ಥೋದ್ಭವದ ಮೂಲಕ ಅವ್ವ ಕಾವೇರಿ ಭಕ್ತಾದಿಗಳಿಗೆ ದರ್ಶನ ನೀಡಲಿದ್ದಾಳೆ, ಎಂದು ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯಿಂದ ಅಧಿಕೃತ ಮಾಹಿತಿ ಲಭ್ಯವಾಗಿದೆ.