
ವಿರಾಜಪೇಟೆ: ಎ:28: (ಕಿಶೋರ್ ಕುಮಾರ್ ಶೆಟ್ಟಿ) ನಗರದಲ್ಲಿ ರಸ್ತೆ ದುರಸ್ಥಿ, ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ, ಪಾದಚಾರಿ ರಸ್ತೆ, ಬೀದಿ ದೀಪ ಸೇರಿದಂತೆ ಹಲವಾರು ಮೂಲಭೂತ ಸಮಸ್ಯೆಗಳಿದ್ದರೂ, ನಿರ್ಧಿಷ್ಟವಾದ ಯೋಜನೆಗಳಿಗೆ ವಿನಿಯೋಗವಾಗದೆ. ಅಭಿವೃದ್ದಿ ಹೆಸರಿನಲ್ಲಿ ಜನ ಸಮಾನ್ಯರ ತೆರಿಗೆ ಹಣ ಪೋಲಾಗುತ್ತಿದೆ, ದುಂದುವೆಚ್ಚಕ್ಕೆ ಸರ್ಕಾರದ ಹಣ ಸಂದಾಯವಾಗುತ್ತಿದೆ. ಎಂದು ನಾಗರಿಕ ಸಮಿತಿಯು ಆರೋಪಿಸಿದೆ.
ನಾಗರಿಕ ಸಮಿತಿ ವಿರಾಜಪೇಟೆ ವತಿಯಿಂದ ನಗರದ ದೊಡ್ಡಟ್ಟಿ ಚೌಕಿ ಬಳಿಯ ಕಛೇರಿಯಲ್ಲಿ ನಗರದ ಸಮಸ್ಯೆಗಳ ಚಿತ್ರಣವನ್ನು ಮುಖ್ಯಾಧೀಕಾರಿಗಳಿಗೆ ಮನದಟ್ಟು ಮಾಡಿರುವ ವಿಚಾರಕ್ಕೆ ಸಂಭದಿಸಿದಂತೆ ನಡೆದ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ನಾಗರಿಕ ಸಮಿತಿಯ ಸಂಚಾಲಕರಾದ ಡಾ.ಇ.ಆರ್. ದುರ್ಗಾಪ್ರಸಾದ್ ಅವರು, ನಗರದಲ್ಲಿ ಹಲವಾರು ಜ್ವಲಂತ ಸಮಸ್ಯೆಗಳಿವೆ. ಹೈಟೆಕ್ ಅಭಿವೃದ್ದಿ ಪಡಿಸುತ್ತೇವೆ ಎಂಬ ಹೆಸರಿನಲ್ಲಿ ಜನ ಸಮಾನ್ಯರ ತೆರಿಗೆ ಹಣವು ದುಂದುವೆಚ್ಚಗಳಿಗೆ ವ್ಯಯವಾಗುತ್ತಿರುವುದು ಶೋಚನೀಯ ಎಂದರು. ಬ್ಲಾಕ್ ನಂ 06ರಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಟವರ್ ನಿರ್ಮಾಣಕ್ಕೆ ಅಕ್ಷೇಪಣೆ ವ್ಯಕ್ತಪಡಿಸಿ ರಾಜ್ಯ ಉಚ್ಚನ್ಯಾಯಾಲಯದಲ್ಲಿ ದಾವೆ ಹೂಡಲಾಗಿತ್ತು. ನ್ಯಾಯಾಲಯವು ಜಿಲ್ಲಾಧಿಕಾರಿಗಳ ನ್ಯಾಯಾಲಯಕ್ಕೆ ವರ್ಗಾಹಿಸಿತು. ಜಿಲ್ಲಾಧಿಕಾರಿಗಳು ಆದೇಶ ಮಾಡಿದರೂ ಪುರಸಭೆಯು ಆದೇಶ ಪಾಲನೆ ಮಾಡುವಲ್ಲಿ ವಿಫಲವಾಗಿದೆ. ನಗರದಲ್ಲಿ ಕೆರೆಗಳ ಅಭಿವೃದ್ದಿ ಎಂದು ಕೋಟಿ ಹಣ ವ್ಯಯ ಮಾಡಿದ್ದಾರೆ. ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ಆದೇಶ, ರಾಜ್ಯ ಸರ್ಕಾರದ ಅದೇಶ ಸರ್ವೋಚ್ಚ ನ್ಯಾಯಾಲಯದ ತೀರ್ಪುಗಳನ್ನು ಪಾಲನೆ ಮಾಡದೇ ಕಾನೂನು ಭಾಹಿರವಾಗಿ ಕಾಮಗಾರಿಗಳು ನಡೆದಿರುವುದು ಅಕ್ಷಮ್ಯ ಅಪರಾಧವಾಗಿದೆ. ಪಟ್ಟಣ ಪಂಚಾಯಿತಿಯಿಂದ ಪುರಸಭೆಯಾಗಿ ಮೇಲ್ದರ್ಜೆಗೆ ಎರಿಕೆ ಕಂಡಿದೆ. ನಗರದ ಸನೀಹದ ಗ್ರಾಮಗಳ ಕೆಲವು ಭಾಗಗಳು ನಗರದ ವ್ಯಾಪ್ತಿ ಸೇರ್ಪಡೆಗೊಂಡಿದೆ. ಗ್ರಾಮ ವಾಸಿಗಳು ಪುರಸಭೆಗೂ ಗ್ರಾಮ ಪಂಚಾಯಿತಿಗೂ ತೆರಿಗೆ ಪಾವತಿ ಮಾಡುತಿದ್ದಾರೆ. ಇಂದಿನ ವರೆಗೆ ಗ್ರಾಮ ವ್ಯಾಪ್ತಿ ಭಾಗಗಳ ಸ್ಥಳದ ಗಡಿಭಾಗ ನಿಗದಿಗೊಳಿಸಿಲ್ಲ. ಗ್ರಾಮವಾಸಿಗಳು ಆತಂಕ ವ್ಯಕ್ತಪಡಿಸುತಿದ್ದಾರೆ. ದಿನದಿಂದದಿನಕ್ಕೆ ವಾಹನ ದಟ್ಟಣೆಗಳಿಂದ ನಗರದಲ್ಲಿ ಸಂಚಾರ ವ್ಯವಸ್ಥೆ ಹದಗೆಟ್ಟಿದೆ. ರಸ್ತೆ ಆಗಲೀಕರಣವಾಗಬೇಕು ಮತ್ತು ಅಭಿವೃದ್ದಿಯಾಗಬೇಕು ಎನ್ನುವುದು ಸಾರ್ವಜನಿಕರ ಅಭಿಪ್ರಾಯ. ರಸ್ತೆ ಬದಿಯ ನಿವಾಸಿಗಳಿಗೆ ಸೂಕ್ತ ಪರಿಹಾರ ನೀಡಿ ಅಭಿವೃದ್ದಿಪಡಿಸಬೇಕು. ಮೂಲಭೂತ ಸೌಕರ್ಯಗಳಲ್ಲಿ ಒಳಚರಂಡಿ ವ್ಯವಸ್ಥೆ ತೀರ ಹದಗೆಟ್ಟಿದೆ. ನೀರು ಸರಾಗವಾಗಿ ಹರಿಯಲು ಸಾದ್ಯವಾಗದೆ ದುರ್ಗಂದ ಭೀರುತ್ತಿದೆ. ಚರಂಡಿಯ ನೀರು ರಸ್ತೆಯ ಮೇಲೆ ಹರಿದಾಡುತ್ತಿದೆ, ಒಳಚರಂಡಿ ವ್ಯವಸ್ಥೆ ಸರಿಪಡಿಬೇಕು ಎಂದು ಸಮಸ್ಯೆಗಳ ಅನಾವರಣ ಮಾಡಿದರು.
ನಾಗರಿಕ ಸಮಿತಿಯ ಸದಸ್ಯರಾದ ಎನ್.ಕೆ.ಶರೀಫ್ ಅವರು ಮಾತನಾಡಿ ರಾಜ್ಯ ಹಸಿ ಮೀನು ಮಾರಾಟ ಮಂಡಳಿ ಅವರು ಸುಸಜ್ಜಿತವಾದ ಕಟ್ಟಡ ನಿರ್ಮಾಣ ಮಾಡಿದ್ದಾರೆ. ಅದರೇ ಮೂಲಭೂತ ಸೌಕರ್ಯ ನೀಡಿರುವುದಿಲ್ಲ. ಮಾರುಕಟ್ಟೆಯಲ್ಲು ಕೆಲವು ಅಂಗಡಿ ಮಳಿಗೆಗಳು ಮಾತ್ರ ಕಾರ್ಯನಿರ್ವಹಿಸುತ್ತಿದೆ. ಹಾರಾಜು ಪ್ರಕ್ರಿಯೆಯಿಂದ ಮೀನಿನ ದರಗಳು ಗಗನಕ್ಕೆ ಏರಿದೆ. ಇದರಿಂದ ಬಂಡವಾಳಶಾಹಿಗಳ ಹೊಟ್ಟೆ ತುಂಬಿದೆ. ದಿನದಿತ್ಯ ಹಸಿ ಮೀನು ಕಡಿಮೆ ದರದಲ್ಲಿ ನಗರಕ್ಕೆ ಸರಬರಾಜಾಗುತ್ತದೆ ಆದರೆ ಇಲಲಿಯ ಮಾರಾಟ ದರ ಮಾತ್ರ ಗಗನಕ್ಕೇರಿದೆ. ಬಿಡಿ ಮೀನು ಮಾರಾಟಗಾರರಿಗೂ ಅವಕಾಶ ಮಾಡಿಕೊಟ್ಟಲ್ಲಿ ಹಸಿ ಮೀನಿನ ದರ ಕಡಿಮೆಯಾಗುತ್ತದೆ. ನಗರದಲ್ಲಿ ಅಲ್ಲಲ್ಲಿ ಕುರಿ ಮಾಂಸ ಮತ್ತು ಕೋಳಿ ಮಾಂಸದ ಅಂಗಡಿಗಳು ತಲೆಎತ್ತಿವೆ ಇದರಿಂದ ನಗರದಲ್ಲಿ ಶುಚಿತ್ವದ ಕೊರತೆ ಕಂಡಿದೆ. ಮೊದಲಿನಂತೆ ಕುರಿ ಮಾಂಸ ,ಕೋಳಿ ಮಾಂಸ ಮೀನು ಮತ್ತು ಒಣ ಮೀನುನ ಮಳಿಗೆಗಳ ಒಂದೇ ಸೂರಿನಡಿಯಲ್ಲಿ ಲಭ್ಯವಾಗಬೇಕು ಎಂದು ಆಗ್ರಹಿಸಿದರು.
ನಾಗರಿಕ ಸಮಿತಿಯ ಮತ್ತೋರ್ವ ಸದಸ್ಯರಾದ ಹೆಚ್.ಆರ್. ಶಿವಪ್ಪ ಅವರು ಮಾತನಾಡಿ ಪುರಸಭೆಯ ಕಛೇರಿಯಲ್ಲಿ ಫಾರಂ ನಂ 03 ನೀಡುವ ಸಮಯದಲ್ಲಿ ತಪ್ಪುಗಳಾದಲ್ಲಿ ಮರು ತಿದ್ದಲು 45 ದಿನಗಳ ಕಾಲಾವಕಾಶ ಕೇಳಲಾಗುತ್ತಿದೆ. ಸಿಬ್ಬಂದಿಗಳು ಲೋಪ ಮಾಡಿ ನಂತರ ಆರ್ಜಿದಾರರನ್ನು ಗುರಿಯಾಗಿಸಿ ಕಾಲಾವಕಾಶ ಕೇಳುವುದರಲ್ಲಿ ಆರ್ಥವಿಲ್ಲ. ವಿನಾಕಾರಣ ಆರ್ಜಿದಾರರನ್ನು ಸತಾಯಿಸುವುದು ದಿನನಿತ್ಯ ಕಾಯಕವಾಗಿದೆ. ಆರ್ಜಿದಾರರು ಸಲ್ಲಿಸುವ ಆರ್ಜಿಗಳು ಶೀಘ್ರಗತಿಯಲ್ಲಿ ವಿಲೆವಾರಿಯಾಗದೆ ಸಕಾಲದಲ್ಲಿ ಫಾರಂ ನಂ03 ಮತ್ತು ಇತರ ದಾಖಲೆಗಳು ದೊರಕುವುದು ಕಷ್ಟಕರವಾಗಿದೆ ಎಂದು ದೂರಿದರು. ಇದು ಹಣ ಮಾಡುವ ಉದ್ದೇಶದಿಂದ ಪದೆಪದೆ ಕಛೇರಿಗೆ ಅಲೆಸುವುದು ವಾಡಿಕೆಯಾಗಿದೆ ಎಂದೂ ಅರೋಪಿಸಿದರು.
ನಾಗರಿಕ ಸಮಿತಿ ವಿರಾಜಪೇಟೆ ವತಿಯಿಂದ ಸಮಿತಿಯ ಸದಸ್ಯರು ಮುಖ್ಯಾಧೀಕಾರಿಗಳನ್ನು ಭೇಟಿ ಮಾಡಿ ನಗರದ ಸಮಸ್ಯೆಗಳ ಬಗ್ಗೆ ತಿಳಿಯಪಡಿಸಿದ್ದು. ಸಮಸ್ಯೆ ಇತ್ಯರ್ಥ ಮಾಡಲು ಎರಡು ತಿಂಗಳ ಗಡವು ನೀಡಲಾಗಿದೆ. ಬಳಿಕ ನಗರದ ಸಾರ್ವಜನಿಕರೋಂದಿಗೆ ಬೀದಿಗಿಳಿದು ಹೋರಾಟ ಮಾಡುವುದಾಗಿ ಈ ಸಂಧರ್ಭದಲ್ಲಿ ಎಚ್ಚರಿಕೆ ನೀಡಿದರು.