
ನಾಪೋಕ್ಲು, ಜೂ.30(nadubadenews): ನಾಪೋಕ್ಲು ಸಮೀಪದ ಎಮ್ಮೆಮಾಡು ಗ್ರಾಮ ಪಂಚಾಯಿತಿಯ ಸುಧಾರಿತ ಆಡಳಿತ ಮತ್ತು ಅಂಗನವಾಡಿ ಪೋಷಣ ಅಭಿಯಾನದ ಉತ್ತಮ ಪ್ರಗತಿಯನ್ನು ಗುರುತಿಸಿ ಅಸ್ಸಾಂ ರಾಜ್ಯ ಜನಪ್ರತಿನಿಧಿಗಳು ಭೇಟಿ ನೀಡಿದರು. ಅಸ್ಸಾಂ ಸರ್ಕಾರದ ಪ್ರತಿನಿಧಿಗಳಾಗಿ ಸಾಬೀತಾ ರಾಥೋಡ್, ಮಲ್ಲಿಕಾ, ಪದ್ಮಜಾ ಅವರುಗಳು ಎಮ್ಮೆಮಾಡು ಗ್ರಾಮ ಪಂಚಾಯಿತಿ ಗೆ ಭೇಟಿ ನೀಡಿ ಗ್ರಾಮ ಪಂಚಾಯಿತಿಯ ಆಡಳಿತ ಸುಧಾರಣೆ ಮತ್ತು ಬಾಪೂಜಿ ಸೇವಾ ಕೇಂದ್ರದಿಂದ ಸಾರ್ವಜನಿಕರಿಗೆ ಸಿಗುವ ಸೌಲಭ್ಯಗಳ ವಿವರ ಮತ್ತು ಗ್ರಾಮ ಪಂಚಾಯಿತಿಯ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಪೋಷಣ ಅಭಿಯಾನ ಸಂಬಂಧಪಟ್ಟವರಿಂದ ಮಾಹಿತಿ ಪಡೆದರು.