ವಿರಾಜಪೇಟೆ, ಮೇ.02: ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಕೊಡಗು ಜಿಲ್ಲೆಗೆ ಐದನೇ ಸ್ಥಾನ, ಎಸ್. ಎಸ್ ಎಲ್.ಸಿ ಫಲಿತಾಂಶ ಬೆಳಿಗ್ಗೆ 12:30 ಗಂಟೆಗೆ ಪ್ರಕಟಗೊಂಡಿದೆ. ಕೊಡಗು ಜಿಲ್ಲೆಗೆ 5 ನೇ ಸ್ಥಾನ ದೊರಕಿದೆ.
ಕಳೆದ ವರುಷ 2024ನೇ ಸಾಲಿನಲ್ಲಿ ಮೇ 9ರಂದು ಪ್ರಕಟವಾದ ಫಲಿತಾಂಶದಲ್ಲಿ ಕೊಡಗು ನಾಲ್ಕನೇ ಸ್ಥಾನವನ್ನು ಪಡೆದು ಶೇಕಡ 91.24 ರಷ್ಟು ವಿದ್ಯಾರ್ಥಿ ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದರು. ಈ ಬಾರಿ ಐದನೇ ಸ್ಥಾನವನ್ನು ಪಡೆದುಕೊಂಡಿದೆ. ಈ ಬಾರಿ 22 ವಿದ್ಯಾರ್ಥಿಗಳು 625 ಅಂಕಗಳಿಗೆ 625 ಪಡೆದು ಪ್ರಥಮ ಸ್ಥಾನವನ್ನು ಗಳಿಸಿದ್ದಾರೆ. ಈ ಬಾರಿ ರಾಜ್ಯದಲ್ಲಿ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ಪ್ರಥಮ ಸ್ಥಾನವನ್ನು ದಕ್ಷಿಣ ಕನ್ನಡ ಜಿಲ್ಲೆ ಪಡೆದುಕೊಂಡರೆ ದ್ವಿತೀಯ ಸ್ಥಾನವನ್ನು ಉಡುಪಿ ಜಿಲ್ಲೆ ತೃತೀಯ ಸ್ಥಾನವನ್ನು ಉತ್ತರ ಕನ್ನಡ ಜಿಲ್ಲೆ, ನಾಲ್ಕನೇ ಸ್ಥಾನವನ್ನು ಶಿವಮೊಗ್ಗ 5ನೇ ಸ್ಥಾನವನ್ನು ಕೊಡಗು ಜಿಲ್ಲೆ ಪಡೆದುಕೊಂಡರೆ ಕೊನೆ ಸ್ಥಾನವನ್ನು ಕಲ್ಬುರ್ಗಿ ಕೊನೆ ಸ್ಥಾನವನ್ನು ಪಡೆದುಕೊಂಡಿದೆ.