ನಾಳೆ ಮಡಿಕೇರಿಯಲ್ಲಿ ಆಪರೇಷನ್ ಸಿಂಧೂರ ವಿಜಯೋತ್ಸವ…

 ಮಡಿಕೇರಿ ಮೇ.22 (Nadubade News): ಆಪರೇಷನ್ ಸಿಂಧೂರ ಯಶಸ್ವಿಯಾದ ಹಿನ್ನೆಲೆಯಲ್ಲಿ ನಾಳೆ ಮಡಿಕೇರಿ ನಗರದಲ್ಲಿ ಬೃಹತ್ ವಿಜಯೋತ್ಸವ ಮೆರವಣಿಗೆ ಮತ್ತು ತಿರಂಗ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಸಂಚಾಲಕ ಕೆ ಕೆ ದಿನೇಶ್ ಕುಮಾರ್ ತಿಳಿಸಿದ್ದಾರೆ.  ಈ ಹಿನ್ನೆಲೆಯಲ್ಲಿ ನಾಳೆ ಬೆಳಿಗ್ಗೆ 10:30 ಗಂಟೆಗೆ ಮಡಿಕೇರಿ ನಗರದ ಬನ್ನಿಮಂಟಪದಿಂದ ಗಾಂಧಿ ಮೈದಾನದವರೆಗೆ ಬೃಹತ್ ತಿರಂಗಾ ಯಾತ್ರೆ ಮತ್ತು ಗಾಂಧಿ ಮೈದಾನದಲ್ಲಿ ಸಭಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.    ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಕರ್ನಲ್ ಚೊಂದಮ್ಮ ಅವರು ವಹಿಸಲಿದ್ದು, […]

Continue Reading

ಐಇಸಿ ಚಟುವಟಿಕೆಗಳಿಗಾಗಿ ಸ್ವಸಹಾಯ ಗುಂಪು ಸದಸ್ಯರಿಂದ ಅರ್ಜಿ ಆಹ್ವಾನ

ಸೋಮವಾರಪೇಟೆ ಮೇ.22(Nadubade News): ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಕಾರ್ಯಾಲಯಕ್ಕೆ ಸ್ವಚ್ಚ ಭಾರತ್ ಮಿಷನ್ 2.0ರ ಅಡಿಯಲ್ಲಿ ಐಇಸಿ ಚಟುವಟಿಕೆಗಳನ್ನು ಕೈಗೊಳ್ಳಲು ಸ್ವಸಹಾಯ ಗುಂಪು (ಎಸ್‍ಎಚ್‍ಜಿ) ಸದಸ್ಯರ ನೇಮಕಾತಿಗಾಗಿ, ಆಸಕ್ತಿಯುಳ್ಳ ಸದಸ್ಯರಿಂದ ಅರ್ಜಿ ಆಹ್ವಾನಿಸಲಾಗಿದೆ.       ಈ ಮೂಲಕ 3 ವರ್ಷಗಳವರೆಗೆ ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಜೊತೆಗೆ ಪೂರ್ಣಾವಧಿಗೆ ಐಇಸಿ ಚಟುವಟಿಕೆಗಳನ್ನು ಕೈಗೊಳ್ಳಲು ನಲ್ಮ್-ಡೇ ಅಡಿಯಲ್ಲಿ ನೋಂದಾಯಿಸಿ ಎಸ್‍ಎಚ್‍ಜಿ  ಸದಸ್ಯರಿಂದ ಸೋಮವಾರಪೇಟೆ ಪಟ್ಟಣ ಪಂಚಾಯಿತಿಯು “ಆಸಕ್ತಿಯ ಅಭಿವ್ಯಕ್ತಿ”ಯನ್ನು ಆಹ್ವಾನಿಸುತ್ತದೆ. ಷರತ್ತುಗಳಿಗೊಳಪಟ್ಟ ಆಯ್ಕೆ ಪ್ರಕ್ರಿಯೆ ಮತ್ತು ವೇತನಕ್ಕೆ ಸಂಬಂಧಿಸಿದ ವಿವರಗಳನ್ನು […]

Continue Reading

“ನಮ್ಮ ಶಾಲೆ ನಮ್ಮ ಜವಾಬ್ದಾರಿ” ಕಾರ್ಯಕ್ರಮದಲ್ಲಿ, ಸರ್ಕಾರಿ ಶಾಲೆಗಳ ಬಲವರ್ಧನೆಗೆ ಸಹಕರಿಸಲು ಡಿಡಿಪಿಐ ಮನವಿ…

ಕುಶಾಲನಗರ, ಮೇ, 22(Nadubade News) (ಟಿ.ಜಿ. ಪ್ರೇಮ್‌ಕುಮಾರ್): ಸರ್ಕಾರಿ ಶಾಲೆಗಳ ಶೈಕ್ಷಣಿಕ ಪ್ರಗತಿ, ಶಾಲಾ ಅಭಿವೃದ್ಧಿ ಹಾಗೂ ಬಲವರ್ಧನೆಗಾಗಿ ಸರ್ಕಾರ ರೂಪಿಸಿರುವ “ನಮ್ಮ ಶಾಲೆ ನಮ್ಮ ಜವಾಬ್ದಾರಿ”  ಎಂಬ ವಿನೂತನ ಪರಿಕಲ್ಪನೆಯ ಕಾರ್ಯಕ್ರಮದಡಿ  ಸರ್ಕಾರಿ ಶಾಲೆಗಳ ಅಭಿವೃದ್ಧಿ ಹಾಗೂ ಶ್ರೋಯೋಭಿವೃದ್ಧಿಗಾಗಿ   ಶಾಲೆಯಲ್ಲಿ ಕಲಿತ ಹಿರಿಯ ವಿದ್ಯಾರ್ಥಿಗಳು, ಪೋಷಕರು, ನಾಗರಿಕರು  ಹಾಗೂ ದಾನಿಗಳು ಹೆಚ್ಚಿನ ಸಹಕಾರ ಮತ್ತು ಪ್ರೋತ್ಸಾಹ ನೀಡಬೇಕು ಎಂದು ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ( ಅಭಿವೃದ್ಧಿ ) ಸಿ.ರಂಗಧಾಮಪ್ಪ ಮನವಿ ಮಾಡಿದ್ದಾರೆ. […]

Continue Reading

ರಾಜ್ಯಮಟ್ಟದ ಮೊಗೇರ ಕ್ರಿಕೆಟ್ ಕಪ್  ಡೋಮಿನೇಟರ್ ಇಲೆವೆನ್ ಮಾರ್ಗೋಲ್ಲಿ ಚಾಂಪಿಯನ್…

ಮಡಿಕೇರಿ, ಮೇ 22(Nadubade News): ಮಡಿಕೇರಿಯಲ್ಲಿ ಅಮೃತ ಯುವ ಮೊಗೇರ ಅಮ್ಮತಿ ಹೋಬಳಿ ಸಿದ್ದಾಪುರ (ರಿ) ಇವರ ವತಿಯಿಂದ 3ನೇ ವರ್ಷದ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯದಲ್ಲಿ ಡೋಮಿನೇಟರ್ ಇಲೆವೆನ್ ಮಾರ್ಗೋಳ್ಳಿ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದರೆ ಫ್ರೆಂಡ್ಸ್ ಇಲೆವೆನ್ ಉಡುಪಿ ರನ್ನರ್ಸ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು, ನಗರದ ಮ್ಯಾನ್ಸ್ ಕಾಂಪೌಂಡ್ ಮೈದಾನದಲ್ಲಿ ನಡೆದ ರಾಜ್ಯ ಮಟ್ಟದ ಮೊಗೇರ ಕ್ರಿಕೆಟ್ ಪಂದ್ಯಾಟದಲ್ಲಿ ಒಟ್ಟು 36 ತಂಡಗಳು ಚಾಂಪಿಯನ್ ಟ್ರೋಫಿಗಾಗಿ ಸೆಣಸಾಡಿದವು.  ಮೊದಲ ಸೆಮಿ ಫೈನಲ್ ಪಂದ್ಯವು ಡೋಮಿನೇಟರ್ […]

Continue Reading

ಕಾಡಾನೆ ಸೆರೆಗೆ ಅನುಮತಿ ನೀಡುವಂತೆ  ಮುಖ್ಯಮಂತ್ರಿಗೆ ಶಾಸಕ ಪೊನ್ನಣ್ಣ ಮನವಿ ಸಂಕೇತ್ ಪೂವಯ್ಯ ಹೇಳಿಕೆ…

   ಮಡಿಕೇರಿ,ಮೇ.22(Nadubade News): ಗೋಣಿಕೊಪ್ಪಲು ಬಳಿಯ ದೇವರಪುರದಲ್ಲಿ ವ್ಯಕ್ತಿಯೋರ್ವರನ್ನು ಕಾಡಾನೆ ಬಲಿ ಪಡೆದ ದುರ್ಘಟನೆಯನ್ನು ಶಾಸಕ ಎ.ಎಸ್.ಪೊನ್ನಣ್ಣ ಅವರು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದು, ಕಾಡಾನೆ ಸೆರೆಗೆ ಕೂಡಲೇ ಅನುಮತಿ ನೀಡುವಂತೆ ಮನವಿ ಮಾಡಿದ್ದಾರೆಂದು ರಾಜ್ಯ ವನ್ಯಜೀವಿ ಮಂಡಳಿ ಸದಸ್ಯರಾದ ಸಂಕೇತ್ ಪೂವಯ್ಯ ತಿಳಿಸಿದ್ದಾರೆ.    ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಂಕೇತ್ ಪೂವಯ್ಯ ರಾಜ್ಯದ ಏಳೆಂಟು ಜಿಲ್ಲೆಗಳಲ್ಲಿ ಮಾನವ ವನ್ಯಜೀವಿ ಸಂಘರ್ಷವಿದೆ, ಕಾಡಾನೆ ಹಾವಳಿಯಿಂದ ರಾಜ್ಯದಲ್ಲೇ ಅತಿಹೆಚ್ಚು ಜೀವಹಾನಿ ಕೊಡಗು ಜಿಲ್ಲೆಯಲ್ಲಿ ಆಗುತ್ತಿದೆ. ಕಾಡಿನಲ್ಲಿರುವ ಆನೆಗಳಿಂದ ಹೆಚ್ಚಾಗಿ […]

Continue Reading

ಎಂಸಿಸಿ ಫುಟ್ಬಾಲ್ ತರಬೇತಿ ಶಿಬಿರ ಸಮಾರೋಪ…

ಮಡಿಕೇರಿ ಮೇ.21(Nadubade News): ಮಡಿಕೇರಿಯ ಮ್ಯಾನ್ಸ್ ಕಾಂಪೌಂಡ್ ಕ್ಲಬ್ (ಎಂಸಿಸಿ) ವತಿಯಿಂದ ಜಿಲ್ಲಾ ಫುಟ್ಬಾಲ್ ಮೈದಾನದಲ್ಲಿ ಏರ್ಪಡಿಸಲಾಗಿದ್ದ ಫುಟ್ಬಾಲ್ ತರಬೇತಿ ಶಿಬಿರ  ಸಮಾರೋಪಗೊಂಡಿತು.   ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಎಂಸಿಸಿ ಹಿರಿಯ ಆಟಗಾರರು, ಪೋಷಕರೂ ಆಗಿರುವ ಚಿನ್ನಪ್ಪ ಅವರು ಮಾತನಾಡಿ ಮಕ್ಕಳು ಮೊಬೈಲ್ ಬಳಕೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ ಮೈದಾನಕ್ಕಿಳಿದು ಆಟವಾಡಬೇಕು. ಕ್ರೀಡೆಯಲ್ಲಿ ಸಾಕಷ್ಟು ಅವಕಾಶಗಳಿದ್ದು, ಅದನ್ನು ಬಳಸಿಕೊಳ್ಳಬೇಕು. ತರಬೇತಿ ಶಿಬಿರದಲ್ಲಿ ಕಲಿತದ್ದನ್ನು ನಿರಂತರ ಅಭ್ಯಾಸ ಮಾಡಬೇಕೆಂದು ಕರೆ ನೀಡಿದರು.   ಮತ್ತೋರ್ವ ಅತಿಥಿ, ಹಿರಿಯ […]

Continue Reading

ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆಸ್ಪತ್ರೆ ಆವರಣದಲ್ಲಿ ಇಂದಿರಾ ಕ್ಯಾಂಟಿನ್…

ಮಡಿಕೇರಿ ಮೇ.21(Nadubade news): ನಗರದ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆಸ್ಪತ್ರೆ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಇಂದಿರಾ ಕ್ಯಾಂಟೀನನ್ನು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ಅವರು ಇಂದು ಉದ್ಘಾಟಿಸಿದರು.         ಸಾರ್ವಜನಿಕರಿಗೆ ಒಳಿತಾಗುವ ನಿಟ್ಟಿನಲ್ಲಿ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆಸ್ಪತ್ರೆ ಆವರಣದಲ್ಲಿ ಇಂದಿರಾ ಕ್ಯಾಂಟಿನ್ ಆರಂಭಿಸಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತಾಗಬೇಕು ಎಂದು ಶಾಸಕರು ಸಲಹೆ ಮಾಡಿದರು. ಹಲವು ವರ್ಷಗಳಿಂದ ಆಸ್ಪತ್ರೆ ಆವರಣದಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಬೇಕಿತ್ತು. ಆದರೆ ಈಗ ಚಾಲನೆ ನೀಡಲಾಗಿದೆ, […]

Continue Reading

ಮೇ.23 ರಿಂದ 26 ಮಡಿಕೇರಿಯಲ್ಲಿ ಹಲಸು ಮತ್ತು ಮಾವಿನ ಹಬ್ಬ…

ಮಡಿಕೇರಿ ಮೇ,21(Nadubade News):  ಕೊಡಗು ಜಿಲ್ಲಾ ಹಾಪ್ ಕಾಮ್ಸ್ ಹಾಗೂ ತೋಟಗಾರಿಕೆ ಇಲಾಖೆಯ ಸಹಯೋಗದೊಂದಿಗೆ ಮೇ.೨೩ ರಿಂದ ೨೬ರ ವರೆಗೆ ಮಾವು ಮತ್ತು ಹಲಸು ಹಣ್ಣಿನ ಮೇಳ ನಡೆಯಲಿದೆ ಎಂದು ಕೊಡಗು ಜಿಲ್ಲಾ ಹಾಪ್ ಕಾಮ್ಸ್ ಅಧ್ಯಕ್ಷ ಬಿದ್ದಾಟಂಡ ರಮೇಶ್‌ ಚಂಗಪ್ಪ ತಿಳಿಸಿದರು.   ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಕೊಡಗು ಜಿಲ್ಲಾ ಹಾಪ್ ಕಾಮ್ಸ್‌ ಮುಖ್ಯ ಕಚೇರಿಯ ಆವರಣದಲ್ಲಿ ಅತ್ಯಪರೂಪದ ವಿವಿಧ ಬಗೆಯ ಮಾವು ಮತ್ತು ಹಲಸಿನ ಹಣ್ಣಿನ ಮೇಳ ನಡೆಯಲಿದೆ. ಬೆಳೆಗಾರರಿಗೆ ತಾವು ಬೆಳೆದ […]

Continue Reading

ಕೊಡಗಿನಲ್ಲಿ ಭೂಕುಸಿತ ಸಾಧ್ಯತೆ ಬಗ್ಗೆ ತಜ್ಞರಿಂದ ಎಚ್ಚರಿಕೆ…

ಮಡಿಕೇರಿ, ಮೇ 21(Nadubade News): 2018 ರಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪ ಕೊಡಗಿನ ಜನತೆಯನ್ನು ಅಕ್ಷರಶಃ ನಡುಗುವಂತೆ ಮಾಡಿದ್ದು, ಸಣ್ಣ ಗಾಳಿ ಮಳೆ  ಗುಡುಗು ಬಂದರೂ ಜನ ಹೆದರುವಂತೆ ಮಾಡಿದೆ. ಕಳೆದ ಎರಡು ವರ್ಷಗಳಲ್ಲಿ ಅಂತಹ ಭಾರಿ ಸಮಸ್ಯೆ ಏನೂ ಆಗಿಲ್ಲವಾದರೂ,  ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಆತಂಕಕ್ಕೆ ಕಾರಣವಾದ ತಜ್ಞರ ವರದಿ   ಭಾರತೀಯ ಭೂಗರ್ಭ ಶಾಸ್ತ್ರಜ್ಞರು ಸರ್ಕಾರಕ್ಕೆ ಒಂದು ವರದಿ ಸಲ್ಲಿಸಿದ್ದು, ಇದು ಕೂಡ […]

Continue Reading

23ರಂದು ಕಾವೇರಿ ಉದಯ ಅವರ ನೀಲಾ ನಿಲಯ ಕಾದಂಬರಿ ಲೋಕಾರ್ಪಣೆ…

ಪೊನ್ನಂಪೇಟೆ, ಮೇ.20 (Nadubade News): ಕೊಡಗು ಪತ್ರಕರ್ತರ ಸಂಘ ಪೊನ್ನಂಪೇಟೆ ಘಟಕದ ಸಹಯೋಗದಲ್ಲಿ ಬಹುಭಾಷಾ ಸಾಹಿತಿ ಉಳುವಂಗಡ ಕಾವೇರಿ ಉದಯ ರಚಿಸಿರುವ ನೀಲಾ ನಿಲಯ ಕಾದಂಬರಿ ಬಿಡುಗಡೆ ಕಾರ್ಯಕ್ರಮ 23/5/2025 ರಂದು ಪೊನ್ನಂಪೇಟೆಯ ಪತ್ರಿಕಾ ಭವನದಲ್ಲಿ ಪೂರ್ವಾಹ್ನ 10.30 ಗಂಟೆಗೆ ಪತ್ರಕರ್ತರ ಸಂಘ ಪೊನ್ನಂಪೇಟೆ ಘಟಕದ ಅಧ್ಯಕ್ಷರಾದ ಕಿರಿಯಮಾಡ ರಾಜಕುಶಾಲಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಪುಸ್ತಕ ದಾನಿಗಳಾದ ಶ್ರೀಮತಿ ಕಂಗಂಡ ಶಶಿ ಮಂದಣ್ಣ   ಶ್ರೀಮತಿ ಅಪ್ಪಚಂಗಡ ಲಲಿತಾ ಮೋಟಯ್ಯ , ಶ್ರೀಮತಿ ವಿದ್ಯಾ ನಾರಾಯಣ ಇವರುಗಳು ಕೃತಿಯನ್ನು […]

Continue Reading