ವಿಶ್ವ ಕೋಶದ ಅತ್ಯಂತ ಪ್ರಮುಖ ಅಂಗವಾಗಿರುವ ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ. ಇದು ಕೆಲವರಿಗೆ ಘೋಷವಾಕ್ಯ ಮಾತ್ರವಾದರೆ, ಕೆಲವರಿಗೆ ವಾಸ್ತವ ಅನಿವಾರ್ಯ. ಇಂದಿನ ನಮ್ಮ ಪರಿಸರದ ಸ್ಥಿತಿಗತಿಯನ್ನು ಗಮನಿಸಿದರೆ, ಇನ್ನು ಹೆಚ್ಚಿನ ಸಮಯ ನಾವು ಹಸಿರು ಭೂಮಿಯನ್ನ, ಅದರಲ್ಲೂ ಯೋಗ್ಯ ಗಾಳಿ ನೀರನ್ನ ಪಡೆಯಲು ಸಾಧ್ಯವೇ ಇಲ್ಲವೇನೋ ಎಂಬಲ್ಲಿಗೆ ತಂದು ನಿಲ್ಲಿಸಿದ್ದೇವೆ.
ಕೊಂದ ಪಾಪ ತಿಂದ್ ಪೋಂಡೂ, ಎನ್ನುವ ಕೊಡವ ಗಾದೆಯಂತೆ, ಒಂದಷ್ಟು ಜನ, ಸಂಘ ಸಂಸ್ಥೆಗಳು, ನಮ್ಮ ಪಾಪದ ಹೊರೆಯನ್ನು ತಗ್ಗಿಸಲು, ಪ್ರಯತ್ನಿಸುತ್ತಿದ್ದಾರೆ. ಅಂತವರ ಸಾಲಿಗೆ, ಸೇರುವ ಇಂದಿನ ನಮ್ಮ ಕಥೆಯ ಹೀರೋ ಕೂಡ ತನ್ನ ಬಾಲ್ಯದಿಂದಲೇ ಪರಿಸರ ಮತ್ತು ಭೂಮಿಯ ಉಳಿವಿನ ನಿಟ್ಟಿನಲ್ಲಿ, ತನ್ನನ್ನ ತೊಡಗಿಸಿಕೊಂಡು, ಪ್ರಕೃತಿಯ ವಿಷ್ಮಯಗಳ ಅಧ್ಯಯನದೊಂದಿಗೆ ಜಾಗೃತಿ ಮೂಡಿಸುತಿದ್ದಾನೆ.
ಬದಲಾವಣೆಯ ಕಾಳಜಿ ಎಂದರೆ, ಕೇವಲ ಬರಹ, ಭಾಷಣಗಳಿಗೆ ಸೀಮಿತವಲ್ಲ. ಬದಲಿಗೆ ನಾವೇ ಅದರ ಭಾಗವಾಗಬೇಕು. ಸ್ವತಹ ನಾವೇ ಅನುಭವಿಸುತ್ತಾ ಮಾಡುವ ಕಾರ್ಯ ಹೆಚ್ಚು ಯಶಸ್ಸು ಮತ್ತು ಅನುಭವ ಕೊಡುತ್ತದೆ. ಅದೇ ಕಾರ್ಯವನ್ನು ಮಾಡುತ್ತಾ ಸಾಗುತ್ತಿರುವ, ಈ ಯುವಕನ ನಡೆ ಇಂದಿನ ನವ ಪೀಳಿಗೆಗೆ ಮಾದರಿಯಾಗಿರುವುದು ಸುಳ್ಳಲ್ಲ.
ಮಡಿಕೇರಿ ತಾಲೂಕು, ಗಾಳಿಬೀಡು ಗ್ರಾಮದ ಪಾಂಡಿರ ಮಹೇಶ್ ಮತ್ತು ರಾಧ(ತಾಮನೆ: ಅಮ್ಮಾಟಂಡ) ದಂಪತಿಗಳ ದ್ವಿತೀಯ ಪುತ್ರ, ಪಾಂಡಿರ ಕೌಶಿಕ್ ಕಾವೇರಪ್ಪ ಇಂದಿನ ನಮ್ಮ ಕಥಾ ನಾಯಕ.
ಪಾಂಡಿರ ಕೌಶಿಕ್ ಎಲ್ಲರಂತೆ ಬೆಳೆಯಲಿಲ್ಲ. ಈತನಿಗೆ ಕೇವಲ 05 ವರ್ಷ ವಯಸ್ಸಿದ್ದಾಗ, ಮನೆಯ ಆಧಾರ ಸ್ಥಂಬವಾಗಿದ್ದ ತಂದೆ, ಹೃದಯಾಘಾತದಿಂದ ಇಹಲೋಕ ತ್ಯಜಿಸುತ್ತಾರೆ. ಎಲ್ಲಲ್ಲಿಯೂ ನಡೆಯುವಂತೆ ಇಲ್ಲಿಯೂ ಕೂಡ, ಬೇರು ಇಲ್ಲದ ಬಳ್ಳಿಗಳಿಗೆ ಆಶ್ರಯ ಕೊಡುವ ಬದಲು, ಅದೇ ನಿಂದನೆ, ಧೂಷಣೆಗಳು ಬಂದಾಗ, ವಿಧಿಯಿಲ್ಲದೆ ತಾಯಿ ರಾಧ, ತನ್ನಿಬ್ಬರು ಮಕ್ಕಳೊಂದಿಗೆ ಗಾಳೀಬೀಡು ತೊರೆದು, ಮಡಿಕೇರಿ ನಗರಕ್ಕೆ ಬಂದು ಬಾಡಿಗೆ ಮನೆ ಪಡೆದು, ಖಾಸಗಿ ಅಂಗಡಿಯಲ್ಲಿ ಕೆಲಸಕ್ಕೆ ಸೇರಿ ಮಕ್ಕಳಿಗೆ ವಿಧ್ಯಾಭ್ಯಾಸ ನೀಡಿ, ಮಕ್ಕಳನ್ನೇ ಆಸ್ತಿ ಮಾಡಿ ಸಮಾಜಕ್ಕೇ ಮತ್ತೊಬ್ಬ ಮಾಧರೀ ಹೆಮ್ಮೆಯ ತಾಯಿಯಾಗುತ್ತಾರೆ. ಹೀಗೆ ಅಪ್ಪನಿಲ್ಲದೆ ತಾಯಿಯ ಗರಡಿಯಲ್ಲಿ ಬೆಳೆದ ಇಬ್ಬರು ಮಕ್ಕಳಲ್ಲಿ ಹಿರಿಯವ, ಪಾಂಡಿರ ಸಂತೋಷ್, ಓದು ಮುಗಿಸಿ ಶಾಲಾಶಿಕ್ಷನಾಗಿ ದುಡಿಯುತ್ತಿದ್ದರೆ, ಕಿರಿಯವ ಪಾಂಡಿರ ಕೌಷಿಕ್ ಕಾವೇರಪ್ಪ ಓದಿನ ಜೊತೆಗೆ ಹೊಸ ಕನಸಿನ ಹಿಂದೆ ಹೊರಡುತ್ತಾನೆ.
ದ್ವಿತೀಯ ಪಿಯುಸಿವರೆಗೂ ಮಡಿಕೇರಿಯಲ್ಲಿ ಓದುವ ಕೌಸಿಕ್ ಕಾವೇರಪ್ಪ, ನಂತರ ಬೆಂಗಳೂರಿನಲ್ಲಿ ಬಯೋಟೆಕ್ನಾಲಜಿಯಲ್ಲಿ ಎಂಜಿನಿಯರ್ (ಬಿಇ) ಮುಗಿಸುತ್ತಾನೆ. ಇದೇ ಸಂದರ್ಭ 2018ರಲ್ಲಿ ಕೊಡಗಿನಲ್ಲಿ ಸಂಭಂವಿಸಿದ ಭಾರಿ ಭೂಕುಸಿತದ ಪರಿಣಾಮವನ್ನು ಅವಲೋಕಿಸಿದ ಕೌಶಿಕ್, ಬೆಂಗಳೂರಿನಿಂದ ಬಂದು ಏಕಾಂಗಿಯಾಗಿ, ತನ್ನ, ಸೈಕಲ್ ಮತ್ತು ಕಾಲ್ನಡಿಗೆಯಲ್ಲೂ ಭೂಕುಶಿತ ಪ್ರದೇಶಗಳಿಗೆ ಭೇಟಿ ನೀಡಿ, ಅಲ್ಲಿಯ ಪರಿಸ್ಥಿತಿ ಮತ್ತು ಅದಕ್ಕೆ ಕಾರಣಗಳನ್ನು ಅವಲೋಕಸಿ, ತಾನು ಸಂದರ್ಶಿಸಿದ ಸ್ಥಳೀಯರಿಗೆ, ಆತ್ಮ ಸ್ಥೈರ್ಯ ತುಂಬುವ ಜೊತೆಗೆ, ಪರಿಸರದ ಮೇಲಾದ ಒತ್ತಡ ಮತ್ತು ಅದರ ಪರಿಹಾರದ ಕುರಿತು ಅರಿವನ್ನು ನೀಡುತ್ತಾ, ಭವಿಷ್ಯದ ಕೊಡಗಿಗೆ ಪರಿಸರ ಕಾಳಜಿಯ ಸಂಕಲ್ಪ ಮಾಡುತ್ತಾನೆ.
ಓದಿನಲ್ಲಿಯೂ ಉನ್ನತ ಶ್ರೇಣಿಯೊಂದಿಗೆ ತೇರ್ಗಡೆಯಾಗುವ ಕೌಷಿಕ್ ಚಿನ್ನದ ಪದಕ ಸೇರಿದಂತೆ ಹಲವಾರು, ಪ್ರಶಸ್ತಿಗಳನ್ನು ಪಡೆಯುತ್ತಾ, ಇಂಜಿನಿಯರ್ ಪದವಿಯ ಜೊತೆಗೆ, The Wonders of Birds, hosted by Early Bird, August 2024. Basic Course in Ornithology, January – April 2024. Environment management course Sep – Dec 2022. Nanotechnology in Agriculture February – April 2022. ಕೋರ್ಸ್ಗಳನ್ನೂ ಮಾಡುತ್ತಾ, Presented and won second prize in Model Exhibition Competition at the National e-conference on “Impact of Multipronged approaches Biotechnology on Mankind (IMABM)” organized by Department of biotechnology, Dayananda Sagar University, Bangalore on 29 September 2021.
Successfully participated in National level Student’s Technical Symposium organized by Siddaganaga Institute of Technology, Tumakuru on 23rd June 2022 by presenting “Analysis of Catastrophe at Kodagu and conservation of its biodiversity using Biotechnological tools”. Presented and won “Sahyadri Young Ecologist” award in “Lake 2022: Conservation of Wetlands: Ecosystem – based Adaptation of Climate Change” hosted by Dr. TV Ramachandra, EWRG, CES, IISc, Bangalore – 12. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಮ್ಮೇಳನಗಳಲ್ಲಿ ಭಾಗವಹಿಸಿ, ಹಲವು ಬಹುಮಾನಗಳಜೊತೆಗೆ, ಅಪಾರ ಅನುಭವವನ್ನು ಪಡೆದು, ಕೊಡಗಿಗೆ ಮತ್ತೆ ಹಿಂದಿರುಗುತ್ತಾನೆ.
ಈ ಎಲ್ಲದರ ಜೊತೆಗೆ, ಮಲೆನಾಡ ಕೂಗು ಎನ್ನುವ ಸ್ವಯಂಸೇವಾ ಸಂಸ್ಥೆಯನ್ನು ಸ್ಥಾಪಿಸಿ, ಅದರ ಮೂಲಕ ಪರಿಸರ ಪೂರಕ ಕಾರ್ಯ ಚಟುವಟಿಕೆಯನ್ನು ಏಕಾಂಗಿಯಾಗಿ ಪ್ರಾರಂಬಿಸುತ್ತಾನೆ. ಜೊತೆಗೆ ತನ್ನ ಕಲಿಕೆಯನ್ನೂ ಮುಂದುವರೆಸಲು, ಮತ್ತು ವೃತ್ತಿಗಾಗಿ, ಬೆಂಗಳೂರಿನ IISC(ಭಾರತೀಯ ವಿಜ್ಞಾನ ಸಂಸ್ಥೆ)ಯಲ್ಲಿ ಡಾ. ಟಿ.ವಿ.ರಾಮಚಂದ್ರ ಅವರಲ್ಲಿ, ಯೋಜನಾ ಸಹಾಯಕನಾಗಿ ಕೆಲಸಕ್ಕೆ ಸೇರುವ ಕೌಶಿಕ್, ಬೆಂಗಳೂರು ಮತ್ತು ಕೊಡಗಿನ ಪರಿಸರಗಳ ನಡುವಿನ ಸಂಭಂದ, ವ್ಯತ್ಯಾಸ, ಬದಲಾವಣೆ, ರಕ್ಷಣೆಯ ಕುರಿತು ಅಧ್ಯಯನ ಮಾಡಿ, ಮತ್ತೆ ಕೊಡಗಿಗೆ ಬಂದು, ಕೊಡಗಿನ ನಾನಾ ಶಾಲೆಗಳಲ್ಲಿ ಕೊಡಗಿನ ಪರಿಸರದ ಕುರಿತ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸುತ್ತಾನೆ. ಗಾಳಿಬೀಡು ಪಂಚಾಯತಿ ವ್ಯಾಪ್ತಿಯ, ಹೆಬ್ಬಟಗೇರಿಯಲ್ಲಿ ಸುಮಾರು 100+ ವಿವಿಧ ಹಣ್ಣಿನ ಗಿಡಗಳನ್ನು ನೆಡುವ ಮೂಲಕ, ಸ್ಥಳೀಯ ಪ್ರಭೇದದ ಅರಣ್ಯೀಕರಣಕ್ಕೆ ತನ್ನ ಸೇವೆಯನ್ನು ಮುಂದುವರೆಸುತ್ತಾನೆ.
ಪರಿಸರದ ನಾನಾ ಕೋನಗಳಲ್ಲಿ ಅವಲೋಕನ ಮಾಡುತ್ತಾ ವಿಷೇಶ ಸಸ್ಯ ಪ್ರಭೇದವಾದ ಕೊಡಗಿನ ಆರ್ಕಿಡ್(ಕಾಡ್ ಪೂವು)ಗಳ ಕುರಿತು ಆಳವಾದ ಅದ್ಯಯನದೊಂದಿಗೆ, ಅದರ ದಾಖಲೀಕರಣಮಾಡುತ್ತಾ ಸಾಗಿ, ಕೊನೇಗೆ ಈ ಕುರಿತು ಡಾಕ್ಯುಮೆಂಟರಿ ತಯಾರಿಸಿ, ಇತ್ತೀಚೆಗೆ ಮೂಡಬಿದ್ರೆಯ ಆಳ್ವಾಸ್ ಕಾಲೇಜಿನಲ್ಲಿ ಡಾ. ಟಿ.ವಿ. ರಾಮಚಂದ್ರ ಅವರು ಆಯೋಜಿಸಿದ “ಕೆರೆ ಸಮ್ಮೇಳನ2024”ರ, ಪರಿಸರ ಜಾಗೃತಿ ಸಮ್ಮೇಳನದಲ್ಲಿ ಪ್ರದರ್ಶಿಸುತ್ತಾನೆ.
ಕೊಡಗಿನ ಆರ್ಕಿಡ್ಗಳ ಕುರಿತ ದಾಖಲೀಕರಣ ಇಡೀ ಭಾರತದಲ್ಲೇ ವಿಭಿನ್ನ ಎಂಬ ಹೆಗ್ಗಳಿಕೆಗೆ ಪಾತ್ರನಾಗುತ್ತಾನೆ. ಈ ದಾಖಲೀಕರಣದ ವೀಡಿಯೋ ಚಿತ್ರಣ ಮಲೆನಾಡ ಕೂಗು ಎಂಬ ಯೂಟ್ಯೂಬ್ ಚಾನೆಲ್ನಲ್ಲಿ ಲಭ್ಯವಿದ್ದು, ಎಲ್ಲರೂ ನೋಡಿ ಅರಿತುಕೊಳ್ಳುವ ಜೊತೆಗೆ ಉತ್ತೇಜನ ಕೊಡಬೇಕಿದೆ. ಇದರ ಮತಷ್ಟು ಪರೀಷ್ಕೃತ ವೀಡಿಯೋ ಮಡಿಕೇರಿಯಲ್ಲಿ ಬಿಡುಗಡೆಯಾಗಲಿದ್ದು, ಕೊಡವ ಸಂಪ್ರದಾಯ ಮತ್ತು ಬುಡಕಟ್ಟು ಸಂಸ್ಕೃತಿಯೊಂದಿಗೆ ಅವಿನಾಭಾವ ಸಂಬಂಧ ಇರುವ ಆರ್ಕಿಡ್ (ಕಾಡ್ ಪೂವು) ಸಸ್ಯಗಳ ಕುರಿತು ಮತ್ತಷ್ಟು ಸವಿಸ್ತಾರವಾದ ದಾಖಲಾತಿಯನ್ನು ಕೊಡವ ತಕ್ಕ್ನಲ್ಲಿ ತಯಾರಾಗುತಿದ್ದು, ಇದೂ ಕೂಡ ಸದ್ಯದಲ್ಲಿಯೇ ಬಿಡುಗಡೆಯಾಗಲಿದೆ.
ಇದರ ಜೊತೆಗೆ ಕೊಡಗಿನ ಉಳಿವು ಮತ್ತು ಭವಿಷ್ಯಕ್ಕಾಗಿ, ತನ್ನ ಮಲೆನಾಡ ಕೂಗು ಸಂಸ್ಥೆಯ ಮೂಲಕ ಜಾಗೃತಗೊಳಿಸಲು, ಪ್ಲಾಸ್ಟಿಕ್, ಕಾಗದ ಮತ್ತಿತರ ಅಪಾಯಕಾರಿ ವಸ್ತುಗಳ ಕಡಿಮೆ ಬಳಕೆ, ಮತ್ತು ಪುನರ್ಬಳಸಬಹುದಾದ, ಪರಿಸರ ಸ್ನೇಹಿ ಯೋಜನೆಯನ್ನು ಜಾಗೃತಗೊಳಿಸುವುದು, ಪರಿಸರಕ್ಕೆ ಪೂರಕವಾದ ಅರಣ್ಯೀಕರಣಕ್ಕೆ, ಸ್ಥಳೀಯ ಪ್ರಭೇದದ ಸಸ್ಯ ಸಂವರ್ಧನೆಯ ಮೂಲಕ ಉತ್ತೇಜಿಸುವುದು, ಔಷಧೀಯ ಗಿಡಗಳನ್ನು ಬೆಳೆಸುವ ಪೂಲಕ ಪರಿಸರ ಪ್ರಿಯ ತೋಟಗಾರಿಕೆಗೆ ಉತ್ತೇಜನ ಕೊಡುವುದು, ಬೀದಿ ಬದಿಯಲ್ಲಿ ಅಲೆಯುವ ಹಸು, ನಾಯಿ ಮತ್ತು ಅಸಹಾಯಕ ಪ್ರಾಣಿಗಳಿಗೆ ಪುನರ್ವಸತಿ ಕಲ್ಪಿಸುವುದು, ಭವಿಷ್ಯದ ಬೆನ್ನೆಲುಬಾದ ಯುವ ಪೀಳಿಗೆಯನ್ನು ಪರಿಸರ ಕಾಳಜಿ ಮತ್ತು ಸಂರಕ್ಷಣೆಗೆ ಪ್ರೇರೇಪಿಸಲು, ನಿರಂತರ ಕಮ್ಮಟಗಳನ್ನು ಆಯೋಜಿಸುವ ಮೂಲಕ, ಉತ್ತೇಜಿಸುವ ಗುರಿಯನ್ನು ಹೊಂದಿದ್ದಾನೆ.
ಬಯೋಡೈವರ್ಸಿಟಿಯ ಹೃದಯದಂತಿರುವ ಕೊಡಗಿನ, ವಿಭಿನ್ನ ಮತ್ತು ವಿಶಿಷ್ಠ ಪರಿಸರವನ್ನು ಉಳಿಸುವ ಕಾಳಜಿಯ ಸಂಕಲ್ಪದೊಂದಿಗೆ, ನೈಸರ್ಗಿಕ ಅರಣ್ಯೀಕರಣದ ಜೊತೆಗೆ ಸ್ಥಳೀಯ ಪರಿಸರದೊಂದಿಗೆ ನಿರಂತರವಾಗಿ ಭಾವನಾತ್ಮಕ ಬೆಸುಗೆಯನ್ನು ಹೊಂದಿರುವ, ಯುವ ಪರಿಸರವಾದಿ ಸಂಶೋಧಕ ಪಾಂಡಿರ ಕೌಶಿಕ್ ಕಾವೇರಪ್ಪ, ತನ್ನ ವೈಯುಕ್ತಿಕ ಬದುಕಿಗಿಂತ, ಕೊಡಗಿನ ಪರಿಸರ ಮತ್ತು ಭವಿಷ್ಯದ ಚಿಂತನೆಯ ಮಾತುಗಳನ್ನೇ ಆಡುತ್ತಾನೆ.
ಓದು, ಉದ್ಯೋಗ, ಮನೆ, ಕಾರು, ಪ್ರವಾಸ, ಮೋಜು, ಮಸ್ತಿಯಷ್ಟೇ ಯೌವನ ಎಂಬಂತಿರುವ ಬಹುಪಾಲು ಯುವಕರೆದುರು, ತನ್ನ ತಂದೆಯ ಅಕಾಲಿಕ ಸಾವಿನ ನಂತರ, ಮನೆಯೂ ಇಲ್ಲದೆ ಬಂದು, ಬಾಡಿಗೆ ಮನೆಯಲ್ಲಿ ಇಂದಿಗೂ ವಾಸಿಸುತ್ತಾ, ತನ್ನ ಅಭಿವೃದ್ದಿ ಸಂಪಾದನೆಗೂ ಮುನ್ನ, ನನ್ನ ಪರಿಸರ ಮತ್ತು ಈ ಪವಿತ್ರ ಕೊಡಗಿನ ಉಳಿವು ಅನಿವಾರ್ಯ ಎಂದು ದುಡಿಯುತ್ತಿರುವ, ಪಾಂಡಿರ ಕೌಶಿಕ್ ಕಾವೇರಪ್ಪ, ಶಿವಮೊಗ್ಗದ ಶಂಕರಘಟ್ಟದಲ್ಲಿರುವ ಕುವೆಂಪು ವಿಶ್ವ ವಿದ್ಯಾಲಯದಲ್ಲಿ, Wildlife and Management ಕುರಿತ ಹೆಚ್ಚಿನ ಅಧ್ಯಯನಕ್ಕಾಗಿ, ಮುಂದಿನ ತಿಂಗಳು ತೆರಳುತಿದ್ದಾನೆ.
ಪಾಂಡಿರ ಕೌಶಿಕ್ನ ಶಕ್ತಿ ಇಮ್ಮಡಿಯಾಗಿ, ಆತ ಬಯಸಿದೆಲ್ಲವೂ ನೆರವೇರಿಸುವ ಶಕ್ತಿಯನ್ನು, ಗುರುಕಾರೋಣರೂ, ಮಾತಾಯಿ, ಮಾದೇವರೂ ಕರುಣಿಸಲಿ, ಜನತೆಯ ಸಹಕಾರದೊಂದಿಗೆ ಆತನ ಯೋಜಿತ ಗುರಿ ತಲುಪಲಿ, ಎಂಬುದು ನಡುಬಾಡೆ ಬಳಗದ ನಿಷ್ಕಲ್ಮಷ ಹಾರೈಕೆ.