ಭಾಗಮಂಡಲ, ಅ.30: ಭಾಗಮಂಡಲದಿಂದ ತಲೆಕಾವೇರಿಗೆ ತೆರಳುವ ರಸ್ತೆಯಲ್ಲಿ ವಾಹನಗಳಿಗೆ ಸುಂಕ ವಸೂಲಿ ಮಾಡುವ ಕ್ರಮವಿದೆ. ಈ ಸುಂಕ ವಸೂಲಾತಿಯಿಂದ ಸ್ಥಳೀಯರಿಗೆ ವಿನಾಯತಿ ಇದ್ದು, ಯಾರಿಂದಲೂ ಬಲತ್ಕಾರದಿಂದ ಶುಲ್ಕ ವಸೂಲಿ ಮಾಡುತ್ತಿಲ್ಲ, ಯಾವತ್ತೂ ಮಾಡಿಲ್ಲ ಎಂದು ಭಾಗಮಂಡಲ ಗ್ರಾಮ ಪಂಚಾಯತಿ ಅದ್ಯಕ್ಷರಾದ ಕಾಳನ ರವಿ ಸ್ಪಷ್ಟಪಡಿಸಿದ್ದಾರೆ.
ನಡುಬಾಡೆನ್ಯೂಸ್‌ನೊಂದಿಗೆ ಮಾತನಾಡಿದ ಅವರು, ಗ್ರಾಮ ಪಂಚಾಯತಿಯ ಆದಾಯ ಕ್ರೋಡೀಕರಣಕ್ಕಾಗಿ ರಸ್ತೆಯಲ್ಲಿ, ಟೋಲ್ ಸಂಗ್ರಹಕ್ಕೆ ಪ್ರತೀವರ್ಷ ಟೆಂಡರ್ ನೀಡಲಾಗುತ್ತದೆ. ಸ್ಥಳೀಯ ಭಕ್ತರಿಂದ ಟೋಲ್ ವಸೂಲಿ ಮಾಡದಂತೆ ಟೆಂಡರ್‌ದಾರರಿಗೆ ಸ್ಪಷ್ಟವಾಗಿ ನಿರ್ದೇಶನ ನೀಡಲಾಗಿದೆ. ಶುಲ್ಕ ವಸೂಲಾತಿಗೆ ನೇಮಿಸಲಾದ ಸಿಬ್ಬಂದಿಗಳು ಸಾಮಾನ್ಯವಾಗಿ ಎಲ್ಲಾ ವಾಹನಗಳನ್ನು ತಡೆಯುತ್ತಾರೆ. ಯಾಕೆಂದರೆ ಅವರಿಗೆ ಸ್ಥಳೀಯರು ಮತ್ತು ಪ್ರವಾಸಿಗರು ಯಾರು ಎನ್ನುವ ಅರಿವು ವಾಹನ ನೋಡಿದಾಕ್ಷಣ ತಿಳಿಯುವುದಿಲ್ಲ. ಆದರೆ ಸ್ಥಳೀಯ ಭಕ್ತರು, ನಾವು ಸ್ಥಳೀಯರು ಅನ್ನೋದನ್ನ ಸಿಬ್ಬಂದಿಗಳಿಗೆ ಮನದಟ್ಟು ಮಾಡಿದರೆ, ಅವರಿಂದ ಯಾವ ಕಾರಣಕ್ಕೂ ಶುಲ್ಕ ವಸೂಲಿ ಮಾಡುವುದಿಲ್ಲ ಎಂದರು.
ಇತ್ತೀಚಿನ ದಿಗಳಲ್ಲಿ ಸ್ಥಳೀಯರು ಮತ್ತು ಪ್ರವಾಸಿಗರನ್ನು ಅರಿಯುವುದೇ ಸವಾಲಾಗಿದೆ. ಕೆಲ ಸ್ಥಳೀಯ ಭಕ್ತರ ವೇಷಭೂಷಣ, ಮಾತುಗಳು ಪ್ರವಾಸಿಗರಂತೇ ಇರುತ್ತದೆ. ಅವರ ಹಾವ ಭಾವವನ್ನ ಕಂಡು ಸಿಬ್ಬಂದಿಗಳು ವಿಚಾರಿಸಿದರೆ, ಅವರು ತಮ್ಮತನವನ್ನು ತೋರಿಸುವ ಬದಲು, ಸಿಬ್ಬಂದಿಗಳನ್ನು ಅವಾಚ್ಚವಾಗಿ ನಿಂದಿಸಿ, ದರ್ಪ ಮೆರೆಯುತ್ತಾರೆ. ಇದರ ಬದಲು ತಾಯಿ ಕಾವೇರಿಯ ದರ್ಶನಕ್ಕೆ ಬರುವ ಭಕ್ತರು, ಸಂಯಮದಿಂದ ತಾವೂ ಸ್ಥಳೀಯರು ಅನ್ನೋದನ್ನ ತೋರ್ಪಡಿಸಿದರೆ, ಯಾವ ಗೊಂದಲವೂ ಇರುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದರು.
ಕೆಲ ಮುಖಂಡರು ಎನಿಸಿಕೊಂಡವರು ಇದನ್ನೇ ತಮ್ಮ ಪ್ರಚಾರದ ಸರಕಾಗಿ ಬಳಸಿಕೊಂಡು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಮಾದ್ಯಮಗಳಿಗೆ ಹೇಳಿಕೆ ನೀಡಿ, ಕಾವೇರಿ ಸನ್ನಿಧಿಗೆ ಬರುವ ಭಕ್ತರಲ್ಲಿ, ಭಕ್ತಿಯ ಬದಲು, ಭಯ ಮತ್ತು ಗೊಂದಲವನ್ನೇ ಮೂಡಿಸುತ್ತಿರುವುದು ವಿಷಾದನೀಯ. ಎಲ್ಲವನ್ನೂ ತಮ್ಮ ಮೂಗಿನ ನೇರಕ್ಕೆ ಮಾತನಾಡುವ, ಬರೆಯುವ ಬದಲು, ಜವಾಬ್ದಾರಿಯುತ ಸ್ಥಾನದಲ್ಲಿರುವವರು, ತಮ್ಮ ಜವಾಬ್ದಾರಿಯನ್ನು ಅರಿತು, ನೇರವಾಗಿ ಪಂಚಾಯತಿಯನ್ನು ಸಂಪರ್ಕಿಸಿದರೆ ಉತ್ತಮ ಎಂದರು.
ಈ ಟೋಲ್ ಸಂಗ್ರಹದ ವಿಚಾರ ಈಗಾಗಲೇ ನ್ಯಾಯಲಯದಲ್ಲೂ ಇದ್ದು, ಇದರ ವಿಚಾರಣೆಯೂ ನಡೆಯುತ್ತಿದೆ. ನ್ಯಾಯಲಯದ ಆದೇಶ ಏನಿರಲಿದೆಯೋ ಗೊತ್ತಿಲ್ಲ. ಆದರೆ ಗ್ರಾಮ ಪಂಚಾಯತಿಗೆ ಪ್ರವಾಸಿಗರಿಂದ ಟೋ,ಲ್ ವಸೂಲಿ ಮಾಡುವುದು ಅನಿವಾರ್ಯವಾಗಿದೆ. ಯಾಕೆಂದರೆ, ಪ್ರತಿನಿತ್ಯ ಉಭಯ ದೇವಾಲಯ ಮತ್ತು ಪಂಚಾಯತಿ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ತ್ಯಾಜವನ್ನು ಮೂರು ಟ್ಯಾಕ್ಟರ್‌ಗಳಲ್ಲಿ ವೀಲೇವಾರಿ ಮಾಡಬೇಕಿದೆ. ಸ್ವಚ್ಚತಾ ಕಾರ್ಮಿಕರಿಗೆ ವೇತನ ಪಾವತಿಸಬೇಕಿದೆ. ಮತ್ತು ಪಂಚಾಯತಿಯ ಇತರೆ ಸೀಬ್ಬಂದಿಗಳು ಮತ್ತಿತರ ಕರ್ಚುವೆಚ್ಚಗಳಿಗೆ ಆದಾಯದ ಮೂಲವೇ, ಪ್ರವಾಸಿಗರಿಂದ ಸಂಗ್ರಹವಾಗುವ ಶುಲ್ಕ. ಇದನ್ನು ಹೊರತು ಪಡಿಸಿದರೆ ಭಾಗಮಂಡಲ ಗ್ರಾಮ ಪಂಚಾಯತಿಯ ಒಟ್ಟು ವಾರ್ಷಿಕ ಆದಾಯ ಕೇವಲ ಎಂಟು ಲಕ್ಷ ಮಾತ್ರ. ಇದರಲ್ಲಿ ಎಲ್ಲವನ್ನೂ ನಿರ್ವಹಣೆ ಮಾಡುವುದು ಕಷ್ಟ ಸಾದ್ಯ ಆದ್ದರಿಂದ ಪ್ರವಾಸಿ ವಾಹನಗಳಿಂದ ಶುಲ್ಕ ವಸೂಲಾತಿ ಮಾಡಿತಿದ್ದೇವೆ ಎಂದರು.
ಮುಜರಾಯಿ ಮತ್ತಿತರ ಇಲಾಖೆಯಿಂದ ಬರುವ ಅನುದಾನವನ್ನು ದೇವಾಸ್ಥಾನ ಹಾಗೂ ಇತರ ಮೂಲಭೂತ ಸೌಲಭ್ಯ ಅಭಿವೃದ್ದಿ ಕಾರ್ಯವನ್ನು, ಸಂಬಂಧಿಸಿದ ಇಲಾಖೆಗಳ ಮೂಲಕವೇ ಕೈಗೊಳ್ಳಲಾಗುತ್ತದೆ. ಆದೆರೆ ನಿರ್ವಹಣೆಯ ಹೊಣೆ ಗ್ರಾಮ ಪಂಚಾಯತಿಗೆ ಇದೆ. ಈ ಎಲ್ಲಾ ನಿರ್ವಹಣೆಗೆ ಆದಾಯ ಕ್ರೋಡೀಕರಣಕ್ಕೆ ಪ್ರವಾಸಿಗರಿಂದ ಶುಲ್ಕ ವಸೂಲಾತಿ ಅವಶ್ಯ ಎಂದರಲ್ಲದೆ, ಭಾಗಮಂಡಲ ಮತ್ತು ತಲೆಕಾವೇರಿಯಲ್ಲಿ ಪಾರ್ಕಿಂಗ್ ಶುಲ್ಕ ಯಾರಿಂದಲೂ ಪಡೆಯುತಿಲ್ಲ. ಕೇವಲ ಭಾಗಮಂಡಲದಿಂದ ತಲೆಕಾವೇರಿಗೆ ತೆರಳುವ ರಸ್ತೆಯಲ್ಲಿ ಒಂದು ಬಾರಿ ಮಾತ್ರ ಟೋಲ್ ವಸೂಲಾತಿ ನಡೆಯುತ್ತದೆ. ತಲೆಕಾವೇರಿಗೆ ತೆರಳದೆ, ಭಾಗಮಂಡಲದಿಂದ ಹಿಂದಿರುಗುವ ಪ್ರವಾಸಿಗರಿಗೂ ಯಾವುದೇ ಶುಲ್ಕ ವಸೂಲಿ ಇಲ್ಲ ಎಂದರು.
ಉತ್ಸವ ಸಂದರ್ಭದಲ್ಲಿ ಹಾಕುವ ಅಂಗಡಿ ಮುಂಗಟ್ಟುಗಳು, ಮತ್ತಿತರ ಕಾಮಗಾರಿಳನ್ನು ಹೊರಗಿನವರಿಗೆ ಕೊಡುತ್ತಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ, ಭಾಗಮಂಡಲ ಗ್ರಾಮ ಪಂಚಾಯತಿ ಅಧ್ಯಕ್ಷ ಕಾಳನ ರವಿ ಅವರು, ಈ ವ್ಯವಸ್ಥೆಯು ಸಂಪೂರ್ಣವಾಗಿ ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿ, ಜಿಲ್ಲಾಧಿಕಾರಿಗಳ ಮೇಲುಸ್ತುವಾರಿಯಲ್ಲಿ, ತೆರೆದ ಟೆಂಡರ್ ಮೂಲಕ ನೀಡಲಾಗುತ್ತದೆ. ಕಡಿಮೆ ಬಿಡ್ ಮಾಡಿದವರು ಹಕ್ಕು ಪಡೆಯುತ್ತಾರೆ. ಇದರಲ್ಲೂ ಪಂಚಾಯತಿಗೆ ಯಾವುದೇ ಅಧಿಕಾರ ಅಥವ ಹಸ್ತಕ್ಷೇಪ ಇರುವುದಿಲ್ಲ ಎಂದರು.
ಒಟ್ಟಿನಲ್ಲಿ ಸ್ಥಳೀಯರಿಂದ ಟೋಲ್ ವಸೂಲಿ ವಿಚಾರವಾಗಿ, ಸ್ವತಃ ಭಾಗಮಂಡಲ ಗ್ರಾಮ ಪಂಚಾಯತಿ ಅಧ್ಯಕ್ಷರಿಂದಲೇ ಸ್ಪಷ್ಟನೆ ಪಡೆಯುವ ಮೂಲಕ, ಈ ಕುರಿತು ವರ್ಷಗಳಿಂದ ಹಬ್ಬಿದ್ದ ಗಾಳಿಸುದ್ದಿಗೆ ತೆರೆ ಎಳೆಯುವ ಕಾರ್ಯವನ್ನು ನಡುಬಾಡೆ ನ್ಯೂಸ್ ಮಾಡಿದೆ. ಮುಂದಿನ ದಿನಗಳಲ್ಲಿ ನಾವೂ ಕೂಡ ಸ್ಥಳೀಯರ ಹಾಗೇ ಅದರಲ್ಲೂ, ತಾಯಿಯ ಭಕ್ತರ ಹಾಗೆ ತೆರಳಿದರೆ, ಶುಲ್ಕ ವಿನಾಯತಿ ಪಡೆಯಬಹುದು. ಎರಡು ಕೈ ಸೇರಿದೆ ಮಾತ್ರ ಚಪ್ಪಾಳೆ ಎಂಬುದನ್ನು ಅರಿತು ಶಾಂತ ಸ್ವಚ್ಚ ಸಮಾಜದತ್ತ ಒಗ್ಗೂಡುವ ಎಂದು ಆಶಿಸುತ್ತೇವೆ.