ವಿರಾಜಪೇಟೆ, ಅ.28: (ಮಾಹಿತಿ: ವಿನೋದ್ ಜೆಸಿಬಿ) ಮೈಸೂರಿನ ಮಾನಸಗಂಗೋತ್ರಿ ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕರಾದ ಕುಮಾರಿ ಸುಶ್ಮಿತ ಪಿ.ವಿಯವರು ಅವರಿಗೆ ಮೈಸೂರು ವಿಶ್ವವಿದ್ಯಾನಿಲಯ ಪಿಎಚ್.ಡಿ ಪಡೆದಿದ್ದಾರೆ.
ಪ್ರೋ.ಶಶಿಕಲಾ .ಎಸ್.ಡಿ. ಅವರ ಮಾರ್ಗದರ್ಶನದಲ್ಲಿ “ಎಚ್. ನಾಗವೇಣಿ ಅವರ ಸಾಹಿತ್ಯದ ಅಧ್ಯಯನ ” ಎಂಬ ವಿಷಯದ ಬಗ್ಗೆ ಸಂಶೋಧನೆ ಕೈಗೊಂಡು ಮಂಡಿಸಿದ ಮಹಾಪ್ರಬಂಧಕ್ಕೆ, ಮೈಸೂರು ವಿಶ್ವವಿದ್ಯಾನಿಲಯ ಪಿಎಚ್.ಡಿ ಪದವಿಯನ್ನು ನೀಡಿದೆ.
ಸುಶ್ಮಿತ .ಪಿ.ವಿ. ಅವರು ವಿರಾಜಪೇಟೆಯ ಕೆ.ಬೋಯಿಕೇರಿ ಗ್ರಾಮದ ನಿವಾಸಿಯಾದ, ಶ್ರೀ ವಸಂತ ಪಿ.ಎಸ್ ಮತ್ತು ಶಿವಮ್ಮ ದಪಂತಿಗಳ ಪುತ್ರಿಯಾಗಿದ್ದು, ಪ್ರಸುತ್ತ ಪೊನ್ನಂಪೇಟೆಯ ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಪಿ.ಯು.ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿಯಾಗಿ ಸೇವೆಸಲ್ಲಿಸುತ್ತಿದ್ದಾರೆ.