Nadubadenews, ವಿರಾಜಪೇಟೆ:ಸ.25 : (ವರದಿ: ಕಿಶೋರ್ ಶೆಟ್ಟಿ) : ಮಾನಸಿಕ ಕಾಯಿಲೆ, ಕುಟುಂಬದಲ್ಲಿ ಕಲಹ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವನು ನೇಣಿಗೆ ಶರಣಾದ ಘಟನೆ ವಿರಾಜಪೇಟೆ ಕೆ. ಬೋಯಿಕೇರಿ ಗ್ರಾಮದಲ್ಲಿ ನಡೆದಿದೆ.
ವಿರಾಜಪೇಟೆ ತಾಲ್ಲೂಕು ಕದನೂರು ಗ್ರಾಮ ಪಂಚಾಯತಿ ಕೆ. ಬೋಯಿಕೇರಿ,ಗ್ರಾಮದ ನಿವಾಸಿ ದಿವಂಗತ ಸಿದ್ಧಯ್ಯ ಅವರ ಪುತ್ರ ಸುಕ್ರು ದೇವಯ್ಯ ಪ್ರಾಯ ೫೫ ವರ್ಷ ನೇಣಿಗೆ ಶರಣಾದ ವ್ಯಕ್ತಿ.
ಮೃತ ಸುಕ್ರು ದೇವಯ್ಯ ಅಡುಗೆ ಭಟ್ಟರಾಗಿದ್ದು ಸಾಂದರ್ಭಿಕವಾಗಿ ಕೂಲಿ ಕೆಲಸಕ್ಕೆ ತೆರಳುತಿದ್ದರು. ಪತ್ನಿ ಸುನೀತಾ ಕೂಲಿ ಕಾರ್ಮಿಕರಾಗಿದ್ದಾರೆ. ಓರ್ವ ಮಗಳನ್ನು ಹೊಂದಿದ್ದು ಮಗಳು ವಿವಾಹವಾಗಿದ್ದಾರೆ. ಇಂದು ಮೃತರ ಪತ್ನಿ ಸುನೀತಾ ಎಂದಿನಂತೆ ನಗರದ ಹೊರಭಾಗದಲ್ಲಿ ಕೂಲಿ ಕೆಲಸಕ್ಕೆ ಎಂದು ತೆರಳಿದ್ದಾರೆ. ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆಯ ಕೋಣೆಯೋಂದರಲ್ಲಿ ನೇಣು ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಲಸಕ್ಕೆ ಎಂದು ತೆರಳಿದ ಪತ್ನಿ ಸುನೀತಾ ಮನೆಗೆ ಹಿಂದುರುಗಿದ್ದಾರೆ. ಮನೆಯ ಕೋಣೆಯಲ್ಲಿ ಪತಿ ನೇಣು ಬಿಗಿದ ಸ್ಥಿತಿಯಲ್ಲಿ ಗೋಚರಿಸಿದ್ದಾರೆ. ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪತ್ನಿ ಸುನೀತಾ ಅವರು ನೀಡಿದ ದೂರಿನ ಮೇರೆಗೆ ಆತ್ಮಹತ್ಯೆ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.