Nadubadenews, ನಾಪೋಕ್ಲು, ಅ.23: ಹಲವಾರು ಖ್ಯಾತ ಕ್ರೋಡಾಪಟುಗಲನ್ನು ದೇಶಕ್ಕೇ ನೀಡಿದ ಖ್ಯಾತಿಯ, ನಾಪೋಕ್ಲು ಸರ್ಕಾರಿ ಪ್ರಾಥಮಿಕ ಶಾಲಾ ಕ್ರೀಡಾಂಗಣ ಇತ್ತೀಚೆಗೆ ಗೋಮಾಳದಂತಾಗುವ ಜೊತೆಗೆ ಅನೈತಿಕ ಕೊಂಪೆಯಾಗುತ್ತಿದೆ ಎಂದು, ಕ್ರೀಡಾ ತರಭೇತುದಾರ ವಿನೋದ್ ಕುಮಾರ್ (JCB) ಅವರು ಅಸಮಧಾನ ಹೊರ ಹಾಕಿದ್ದಾರೆ.
ನಾಪೋಕ್ಲು ವ್ಯಾಪ್ತಿಯ, ಸರ್ಕಾರಿ ಪ್ರಾಥಮಿಕ ಶಾಲೆಯ ಮೈದಾನದಲ್ಲಿ, ಪ್ರತಿದಿನ ಹಲವಾರು ನಾಗರಿಕರು, ಶಾಲೆಯ ವಿದ್ಯಾರ್ಥಿಗಳು ಅಲ್ಲದೆ ಅಕ್ಕಪಕ್ಕದ ಶಾಲೆಯ ವಿದ್ಯಾರ್ಥಿಗಳು ಕ್ರೀಡಾ ತರಬೇತಿ ಹಾಗೂ ವ್ಯಾಯಾಮ ಮಾಡುತ್ತಾರೆ. ಕೊಡಗಿನ ಪ್ರತಿಷ್ಠಿತ ಕ್ಲಬ್ಗಳಲ್ಲಿ ಒಂದಾದ ಶಿವಾಜಿ ಸ್ಪೋರ್ಟ್ಸ್ಕ್ಲಬ್ನ ಸದಸ್ಯರು ಕೂಡ, ಹಾಕಿ ಅಭ್ಯಾಸವನ್ನು ಮಾಡುತ್ತಿರುತ್ತಾರೆ. ಸಾಕಷ್ಟು ಹೆಸರಾಂತ ಕ್ರೀಡಾಳುಗಳನ್ನು ತಯಾರಿಸಿದ ಕೀರ್ತಿಯೂ ಈ ಮೈದಾನಕ್ಕಿದೆ.
ಅದರೆ ಕೆಲವರು ಮೈದಾನದ ಮದ್ಯದಲ್ಲಿ ದನಕರುಗಳನ್ನು ಕಟ್ಟಿ ಮೇಯಲು ಬಿಡುತ್ತಿರುವುದರಿಂದ, ಮೈದಾನ ಸಂಪೂರ್ಣ ಸಗಣಿಯಿಂದ ಆವೃತವಾಗಿದ್ದು, ಆಟಗಾರರಿಗೆ ಅಭ್ಯಾಸ ಮಾಡಲು ಕಷ್ಟವಾಗುತಿದೆ. ಅಲ್ಲದೆ ಕೆಲವರು ಮದ್ಯ ಸೇವಿಸಿ ಕಾಲಿಯಾದ ಬಿಯರ್ ಬಾಟಲಿ ಮತ್ತು ಕಸವನ್ನು ಮೈದಾನದಲ್ಲೇ ಎಸೆಯುವ ಮೂಲಕ, ಪರಿಸರ ಮಾಲಿನ್ಯ ಮಾಡುತ್ತಿದ್ದು, ಸಂಬಂಧಿಸಿದ ಆಡಳಿತ ವರ್ಗ ಕ್ರಮ ತೆಗೆದುಕೊಳ್ಳುವ ಮೂಲಕ ನಾಪೋಕ್ಲು ವ್ಯಾಪ್ತಿಯ ಈ ಮೈದಾನ ವನ್ನು ಸಂರಕ್ಷಣೆ ಮಾಡಿ ಕ್ರೀಡಾ ಚಟುವಟಿಕೆಗೆ ಆವಕಾಶ ಮಾಡಿಕೊಡ ಬೇಕೆಂದು, ವಿನೋದ್ ಕುಮಾರ್ (JCB)ಅವರು ಆಗ್ರಹಿಸಿದ್ದಾರೆ.