nadubadenews, ವಿರಾಜಪೇಟೆ, ಅ.23: ಕರ್ನಾಟಕದ ಜಿಲ್ಲೆಯಾಗಿರುವ ಕೊಡಗು ಜಿಲ್ಲೆಗೆ ಸಂಬಂಧಿಸಿದ ಪತ್ರ ವ್ಯವಹಾರದಲ್ಲಿ, ರಾಜ್ಯಮಟ್ಟದ ಅಧಿಕಾರಿ ಪದೇ ಪದೇ ಮಡಿಕೇರಿ ಜಿಲ್ಲೆ ಎಂದು ನಮೂದಿಸುತಿದ್ದು, ಇದನ್ನು ಖಂಡಿಸುತ್ತಾ ಮುಂದೆ ಇಂತ ಉಲ್ಲೇಖಗಳು ಮರುಕಳಿಸದಂತೆ ಎಲ್ಲಾ ಇಲಾಖೆಗಳಿಗೂ ಸೂಚಿಸಬೇಕೆಂದು ಕರ್ನಾಟಕ ಸರ್ಕಾರದ ಮುಕ್ಯ ಕಾರ್ಯದರ್ಶಿಗಳಿಗೆ, ಕೊಡವಾಮೆರ ಕೊಂಡಾಟ ಸಂಘಟನೆ ಆಗ್ರಹಿಸಿದೆ.
ಈ ಕುರಿತು ಮುಖ್ಯ ಕಾರ್ಯದರ್ಶಿಗೆ ಪತ್ರ ರೆದಿರುವ ಸಂಘಟನೆಯು, ಕೊಡಗು ಕೇವಲ ಒಂದು ಜಿಲ್ಲೆಯ ಹೆಸರು ಮಾತ್ರವಲ್ಲ ಅದು ಇಲ್ಲಿಯ ಭಾವನಾತ್ಮಕ ಬೆಸಯಗೆ. ಆದರೆ ಸರ್ಕಾರಿ ಅಧಿಕಾರಿಗಳು ಪದೇ ಪದೇ ಕೊಡಗು ಜಿಲ್ಲೆ ಬದಲಾಗಿ, ಮಡಿಕೇರಿ ಜಿಲ್ಲೆ ಎಂದು ಉಲ್ಲೇಖಿಸುತ್ತಿರುವುದು ಖಂಡನಾರ್ಹ. ಈ ಕುರಿತು ಹಿಂದೆ ಕೂ ಸಾಕಷ್ಟು ಸಂಘಟನೆಗಳು, ವ್ಯಕ್ತಿಗಳು ಸರ್ಕಾರಕ್ಕೆ ಆಗ್ರಹಪಡಿಸಿದ್ದರೂ ಕೂಡ, ಇದೇ ಪ್ರಮಾದ ಮುಂದುವರೆಯುತ್ತಿರುದು ಸರಿಯಲ್ಲ.ಇದಕ್ಕೆ ಊದಹರಣೆಯಾಗಿದಿನಾಂಕ 22/10/24ರಂದು ಮಾನ್ಯ ಸಾರಿಗೆ ಆಯುಕ್ತರು ಹೊರಡಿಸಿರುವ ಆದೇಶವನ್ನು ತಾವು ಗಮನಿಸಬಹುದು. ಹಾಗಾಗಿ ತಾವು ಕೂಡಲೆ ಎಲ್ಲಾ ಇಲಾಖೆಯ ಮೇಲಾಧಿಕಾರಿಗಳಿಗೆ ಕೊಡಗು ಜಿಲ್ಲೆ ಎಂದೇ ಎಲ್ಲಾ ಸಂದರ್ಭಗಳಲ್ಲೂ ಉಲ್ಲೇಖಿಸುವಂತೆ ಆದೇಶಿಸಬೇಕೆಂದು ಮನವಿ ಮಾಡಿದೆ. ಸದರಿ ಮನವಿ ಪ್ರತಿಗಳನ್ನು ಮಾನ್ಯ ಉಸ್ತುವಾರಿ ಸಚಿವರು, ಶಾಸಕರು, ಸಂಸದರಿಗೂ ಕಳುಹಿಸಿದ್ದು ಶಾಸ್ವತ ಆದೇಶಕ್ಕೆ ಆಗ್ರಹಿಸಿದೆ.