Nadubadenews, ಶಾಂತಳ್ಳಿ, ಅ.22:-ಸೋಮವಾರಪೇಟೆ ಉಪವಿಭಾಗದ ಶಾಂತಳ್ಳಿ ಶಾಖಾ ವ್ಯಾಪ್ತಿಗೆ ಒಳಪಡುವ ಎಫ್2-ಶಾಂತಳ್ಳಿ ಫೀಡರ್ನಲ್ಲಿ ಮಾರ್ಗನಿರ್ವಹಣೆ ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ ಅಕ್ಟೋಬರ್, 23 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಆದ್ದರಿಂದ ಯಡೂರು, ತಲ್ತಾರೆ ಶೆಟ್ಟಳ್ಳಿ, ಕಿರಗಂದೂರು, ತಾಕೇರಿ, ಗಿಜಗನಮನೆ, ತೊಳೂರು ಶೆಟ್ಟಳ್ಳಿ, ಕೂಲೆಹೊಸಬೀಡು, ಕಲ್ಕಂದೂರು, ಬಸವನಕಟ್ಟೆ ನಗರಳ್ಳಿ, ಹೆಮ್ಮನೆಗದ್ದೆ, ಶಾಂತಳ್ಳಿ, ಬೆಟ್ಟದಳ್ಳಿ, ಬೀದಳ್ಳಿ, ಕುಂದಳ್ಳಿ, ಹೆಗ್ಗಡಮನೆ, ಹರಗ, ಮಂಕ್ಯ, ಕಿಕ್ಕರಳ್ಳಿ, ಕುಂಬಾರಗಡಿಗೆ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿದ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕೋರಿದ್ದಾರೆ.