ಎರಡು ದಶಕಗಳಿಂದ ಸಮಾಜಸೇವೆಯೊಂದಿಗೆ, ಶೈಕ್ಷಣಿಕ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ, ವಿರಾಜಪೇಟೆ ಪುರಸಭೆಯ ನಾಮನಿರದೇಶಿತ ಸದಸ್ಯ, ಶಭರೀಶ್ ಶೆಟ್ಟಿ ಅವರಿಗೆ ಧಾರವಾಡದ ಚೇತನಾ ಫೌಂಡೇಶನ್ ಕರ್ನಾಟಕ ಸೇವಾ ರ್ತ ಬಿರುದು ನೀಡಿ ಗೌರವಿಸಿದೆ. ಇತ್ತೀಚೆಗೆ ಧಾರವಾಡದ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ನಡೆದ, ಅಖಿಲ ಕರ್ನಾಟಕ ಶಿಕ್ಷಕರ ಸಮ್ಮೇಳನದಲ್ಲಿ ಶಭರೀಶ್ ಶೆಟ್ಟಿ ಅವರು ಗಣ್ಯರಿಂದ ಪ್ರಶಸ್ತಿ ಸ್ವೀಕರಿಸಿದರು.
ಇವರು, 1998 ರಿಂದ ವಿರಾಜಪೇಟೆ ಸರ್ವೋದಯ ಶಿಕ್ಷಣ ಮಹಾವಿದ್ಯಾಲಯದ ಶಿಕ್ಷಣ ಸಂಸ್ಥೆಗಳಲ್ಲಿ ದೈಹಿಕ ಶಿಕ್ಷಕನಾಗಿ ಸೇವೆ ಪ್ರಾರಂಭ ಏಳು ವರ್ಷಗಳ ಕಾಲ ನಿರಂತರ ಸೇವೆ, 1999 ಕೊಡಗು ಜಿಲ್ಲಾ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯಲ್ಲಿ ತರಬೇತಿ ಹೊಂದಿ ಸ್ಕೌಟ್ ಮಾಸ್ಟರ್ ಆಗಿ ತರಬೇತುದಾರನಾಗಿ ಸೇವೆ ರಾಜ್ಯ ಪುರಸ್ಕಾರ ರಾಷ್ಟ್ರಪತಿ ಪುರಸ್ಕಾರ ತರಬೇತಿ ಶಿಬಿರಗಳಲ್ಲಿ ಭಾಗಿ, ದಿವಂಗತ ಚಿಣ್ಣಪ್ಪ ನವರೊಂದಿಗೆ ನಾವಿಕೋಡ್ ನೇತೃತ್ವದ ಹುಲಿ ಸಂರಕ್ಷಣಾ ಜಾಗೃತಿ ಜಾಥ ದಲ್ಲಿ ಸ್ವಯಂಪ್ರೇರಿತ ಸೇವೆ, ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಮಂಡಳಿಯ ತರಬೇತಿ ಹೊಂದಿದ ಸಾಮಾಜಿಕ ಜಾಗೃತಿ ಕಾರ್ಯಕ್ರಮದ ಸದಸ್ಯ ನಾಗಿ ಸೇವೆ, ಶೈಕ್ಷಣಿಕವಾಗಿ ಮುಂದುವರೆದ ಆರ್ಥಿಕವಾಗಿ ಬಹಳ ತೊಂದರೆಯಲ್ಲಿ ಇರತಕ್ಕಂತಹ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ದಾನಿಗಳ ಸಹಾಯದಿಂದ ಹಾಗೂ ವೈಯಕ್ತಿಕವಾಗಿ ಅವರಿಗೆ ಎಲ್ಲಾ ರೀತಿಯ ಸವಲತ್ತನ್ನು ಒದಗಿಸಲು ಪ್ರಯತ್ನ ಪಟ್ಟದ್ದು, ಕ್ರೀಡೆಯಲ್ಲಿ ಸಾಧನೆ ತೋರಿದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ಹಾಗೂ ಕ್ರೀಡಾ ಸಾಮಗ್ರಿ ವಿತರಣೆಗೆ ಸಹಕಾರ ನೀಡಿರುವುದು, ಕೋವಿಡ್ ಮಹಾಮಾರಿ ಸಂಧರ್ಭದಲ್ಲಿ ವಿರಾಜಪೇಟೆ ನಗರ ವ್ಯಾಪ್ತಿಯಲ್ಲಿ ಹಲವು ಕೋವಿಡ್ ಸಂತ್ರಸ್ತರಿಗೆ ಔಷದಿ ಹಾಗೂ ಆಹಾರ ಪದಾರ್ಥಗಳ ವಿತರಣೆ ಕೋವಿಡ್ ಮಹಾಮಾರಿಯಿಂದ ಸಾವನ್ನಪ್ಪಿದ ವ್ಯಕ್ತಿಗಳ ಅಂತ್ಯಸಂಸ್ಕಾರಕ್ಕೆ ಸಕಲ ನೆರವನ್ನು ಒದಗಿಸಿ ಖುದ್ದಾಗಿ ಸ್ನೇಹಿತರ ಒಡಗೂಡಿ ಸುಮಾರು 12 ಅಂತ್ಯ ಸಂಸ್ಕಾರವನ್ನು ನಡೆಸಲು ಸಹಕಾರವನ್ನು ನೀಡಿದ್ದು, 2006 ವಿರಾಜಪೇಟೆ ಸರಕಾರಿ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯ ನಾಮ ನಿರ್ದೇಶಕ ಸದಸ್ಯ , 2005 ಸರಕಾರಿ ಪದವಿ ಪೂರ್ವ ಕಾಲೇಜು ಆಡಳಿತ ಮಂಡಳಿಯ ಸದಸ್ಯ, 2007ರಿಂಧ 2015 ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ಥಾಪಕ ಕಾಲೇಜು ಅಭಿವೃದ್ಧಿ ಮಂಡಳಿಯ ಸದಸ್ಯ, ವಿರಾಜಪೇಟೆ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಮೆರವಣಿಗೆ ಸಮಿತಿಯ ಸಂಚಾಲಕನಾಗಿ ಮಾಡಿದ ಕಾರ್ಯ, 2021 ರಿಂದ ವಿರಾಜಪೇಟೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧಿಕಾರಿಯಾಗಿ ಸೇವೆ, 2017 ರಿಂದ ವಿರಾಜಪೇಟೆ ಜಾಗೃತ ನಾಗರಿಕರ ವೇದಿಕೆಯ ಸಂಚಾಲಕ, ವಡೋದರರದ ಸರದಾರ್ ವಲ್ಲಭಭಾಯಿ ಪಟೇಲರ ಐಕ್ಯತಾ ಪ್ರತಿಮೆಯ ಸ್ಥಾಪನೆಗೆ ಮುಂಚಿತವಾಗಿ ನಡೆದ ಕೊಡಗು ಜಿಲ್ಲಾ ಲೋಹ ಮತ್ತು ಮಣ್ಣು ಸಂಗ್ರಹ ಅಭಿಯಾನದ ಸಹ ಸಂಚಾಲಕ, 2021ರಿಂದ ಮಾನ್ಯ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಎ. ಎಸ್. ಪೊನ್ನಣ್ಣನವರ ಅಧ್ಯಕ್ಷತೆಯ ವಿರಾಜಪೇಟೆಯ 22 ಗಣೇಶ ಉತ್ಸವ ಸಮಿತಿಗಳನ್ನೊಳಗೊಂಡ ವಿರಾಜಪೇಟೆ ಐತಿಹಾಸಿಕ ಜನೋತ್ಸವ ಸಮಿತಿಯ ಕಾರ್ಯಾಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದಾರೆ.
ಹಲವು ಸಂಘ ಸಂಸ್ಥೆಗಳಲ್ಲಿ ಉತ್ಸವ ಸಮಿತಿಗಳಲ್ಲಿ ವಿರಾಜಪೇಟೆಯ ಪ್ರತಿಷ್ಠಿತ ಬ್ಯಾಂಕುಗಳಲ್ಲಿ ಕರ್ನಾಟಕ ಸಂಘದಲ್ಲಿಯೂ ಸದಸ್ಯನಾಗಿ ಗೌರವದ ಸೇವೆ. 2001 ರಲ್ಲಿ ಶ್ರೀ ಕೆ ಎಸ್. ದೇವಯ್ಯನವರ ಒಡನಾಟದಲ್ಲಿ ಹೊಸನಗರ ರಾಘವೇಶ್ವರ ಭಾರತಿ ಸ್ವಾಮೀಜಿಗಳ ಅಧ್ಯಕ್ಷತೆಯ ಕೊಡಗು ಜಿಲ್ಲಾ ಸೀಮಾ ಪರಿಷತ್ನನ ಸಂಚಾಲಕನಾಗಿ ಸೇವೆ, 1999-2005 ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕರ್ನಾಟಕ ಸಂಘದ ಸ್ಥಾಪಕ ಅಧ್ಯಕ್ಷ ದಿ. ಡಿಜೆ ಪದ್ಮನಾಭನವರ ಅಧ್ಯಕ್ಷತೆಯ ದೇವರಾಜ್ ಅರಸ್ ಕನ್ನಡ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ. 1999 ವಿರಾಜಪೇಟೆ ಪೊಲೀಸ್ ಇಲಾಖೆ, ಪಟ್ಟಣ ಪಂಚಾಯಿತಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಆಟೋ ಚಾಲಕರು ವಾಹನ ಚಾಲಕರ ಸಂಘ ಸಂಸ್ಥೆ ರೋಟರಿ ಸಂಸ್ಥೆ ದೇವರಾಜು ಅರಸು ಕನ್ನಡ ಸಂಘದ ವತಿಯಿಂದ ವಿರಾಜಪೇಟೆಯಲ್ಲಿ ಮಾದಕ ವಸ್ತು ವಿರೋಧಿ ಆಂದೋಲನ ಜಾಗೃತಿ ಜಾಥಾ ವನ್ನು ಏರ್ಪಡಿಸಿದ್ದು ಹಲವಾರು ಬಾರಿ ತುರ್ತು ಸಂದರ್ಭದಲ್ಲಿ ಅಗತ್ಯ ಇರುವ ವ್ಯಕ್ತಿಗಳಿಗೆ ರಕ್ತದಾನವನ್ನು ಮಾಡಿದ್ದು, ಅಲ್ಲದೆ ರಕ್ತದಾನ ಶಿಬಿರಗಳನ್ನ ಏರ್ಪಡಿಸಿದ್ದಾರೆ.
2024 ಜನವರಿಯಿಂದ ಸಮಾಜ ಸೇವಾ ಕ್ಷೇತ್ರದಿಂದ ವಿರಾಜಪೇಟೆ ಪುರಸಭೆಗೆ ಕರ್ನಾಟಕ ಸರ್ಕಾರದಿಂದ ನಾಮ ನಿರ್ದೇಶಕ ಸದಸ್ಯನಾಗಿ ಆಯ್ಕೆ ಹಾಲಿ ಪುರಸಭಾ ಸದಸ್ಯ. ಬಾಲಕಾರ್ಮಿಕ ಪದ್ಧತಿಯ ನಿರ್ಮೂಲನೆಗಾಗಿ ಜಾಗೃತಿ ಮೂಡಿಸಿದ್ದು, ಶಾಲೆಯಿಂದ ಹೊರಗುಳಿದ ಬಾಲ್ಯದ ವಿದ್ಯಾರ್ಥಿಗಳನ್ನು ಮರಳಿ ಶಾಲೆಗೆ ಸೇರಿಸಲು ಸಂಬಂಧಪಟ್ಟ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಿಗೆ ಸಹಕಾರವನ್ನು ನೀಡಿದ್ದು. 1999 ಅಪರಾಧ ತಡೆ ಮಸಾಚರಣೆಗೆ ಸಹಕರಿಸಿದ್ದಕ್ಕಾಗಿ ಆಗಿನ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಂದ ಪ್ರಶಂಸೆ. ವಿಧವಾ ವೇತನ ವೃದ್ಧಾಪ್ಯ ವೇತನ ಹಿರಿಯ ನಾಗರಿಕರಿಗೆ ಹಾಗೂ ದಿವ್ಯಂಗರಿಗೆ ಸಲ್ಲಬೇಕಾದ ಸವಲತ್ತುಗಳನ್ನು ಕೊಡಿಸಲು ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ತುಳು ಮಾತನಾಡುವ 12 ತುಳುಭಾಷಿಕರ ಒಕ್ಕೂಟದ ವಿರಾಜಪೇಟೆ ತಾಲೂಕು ಅಧ್ಯಕ್ಷನಾಗಿ ಪ್ರಸಕ್ತ ಸೇವೆಸಲ್ಲಿಸಿದಲ್ಲದೆ, ಹಲವಾರು ಕ್ರೀಡಾ ಕ್ಲಬ್ ಗಳ ಪರವಾಗಿ ಆಟವಾಡಿದ್ದು ಅಲ್ಲದೆ ತರಬೇತಿ ನೀಡಿದ್ದು ಅಲ್ಲದೆ ಸಕ್ರಿಯವಾಗಿ ಭಾಗವಹಿಸುವುವ ಜೊತೆಗೆ, ರಾಜ್ಯಮಟ್ಟದ ತೀರ್ಪುಗಾರ, ತರಬೇತಿದಾರನಾಗಿಯೂ ಸಲ್ಲಿಸಿರುವ ಸೇವೆಯನ್ನು ಪರಿಗಣೀಸಿ ಚೇತನಾ ಫೌಂಡೇಷನ್ ಶಭರೀಶ್ ಶೆಟ್ಟಿ ಅವರಿಗೆ ಕರ್ನಾಟಕ ಸೇವಾ ರತ್ನ ಬಿರುದು ನೀಡಿ ಗೌರವಿಸಿದೆ.