
ಈ ಭಾರಿಯ ಬಡ್ಜೆಟ್‌ನಲ್ಲಿ ಸಹಜವಾಗಿ ನಿರೀಕ್ಷೆಗಳಿದ್ದವು, ಅದೂ ಕೊಡಗು ಜಿಲ್ಲೆಗೆ ವಿಷೇಶ ಪ್ಯಾಕೇಜ್ ನೀಡುವ ನಿರೀಕ್ಷೆ ಇತ್ತು ಆದ್ರೆ ಸರ್ಕಾರ ಇವೆಲ್ಲವನ್ನೂ ಹುಸಿಗೊಳಿಸಿದೆ ಎಂದು ಬಿ.ಜಿ.ಪಿ ಮಂಗಳೂರು ಪ್ರಭಾರಿ ಬಿ.ಬಿ. ಭಾರತೀಶ್ ಹೇಳಿದರು. ಕೊಡವ ಅಭಿವೃದ್ದಿ ನಿಗಮ ಘೋಷಣೆಯಾಗಿದೆ ಆದರೆ ಅದರ ರೂಪುರೇಶೆಗಳ ಮಾಹಿತಿ ಇಲ್ಲ. ಇದರೊಂದಿಗೆ ಪಾರಂಪರಿಕ ಮತ್ತು ಭಕ್ತಿಯ ತಾಣಗಳಾಗಿರುವ ಕೊಡವ ಐನ್‌ಮನೆಗಳ ಪುನಶ್ಚೇತಕ್ಕೆ ಯೋಜನೆ ಹಾಕಬಹುದಿತ್ತು ಯಾವುದೂ ಸ್ಪಷ್ಟತೆ ಇಲ್ಲ. ವಿರಾಜಪೇಟೆಗೆ ಕ್ರೀಡಾ ವಸತಿ ನಿಲಯ ಸ್ಥಾಪನೆ ಸ್ವಾಗತಾರ್, ಅದು ಬಿಟ್ಟರೆ ಅತಿ ಹೆಚ್ಚು ಮಳೆಯಾಗುವ ಕೊಡಗು ಜಿಲ್ಲೆಯ ಮೂಲಭೂತ ಸೌಕರ್ಯಗಳ ಅಭಿವೃದ್ದಿಗೆ ಶೂನ್ಯ ಘೋಷಣೆಯಾಗಿದೆ ಎಂದರು.




