
ರಾಜ್ಯ ಸರ್ಕಾರ ಮಂಡಿಸಿರುವ ಆಯವ್ಯಯವು ನಾವಂದುಕೊಂಡಂತೆ ಠೊಳ್ಳಾಗಿದೆ ಎಂದು ಬಿಜೆ ರಾಜ್ಯ ಕಾರ್ಯಕಾರಿಣಿ ಸದಸ್ಯ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಅಸಮಧಾನ ಹೊರಹಾಕಿದ್ದಾರೆ. ನಡುಬಾಡೆನ್ಯೂಸ್ನೊಂದಿಗೆ ಮಾತನಾಡಿದ ಅವರು, ಕೊಡಗು ಜಿಲ್ಲೆ ಪ್ರಕೃತಿ ಸೂಕ್ಷ್ಮ ಪ್ರದೇಶವಾಗಿದ್ದು, ಇಲ್ಲಿನ ನೈಸರ್ಗಿಕ ಅವಲಂಬನೆಗೆ ಪೂರಕ ಬಡ್ಜೆಟ್ ನಿರೀಕ್ಷೆ ಮಾಡಲಾಗಿತ್ತು. ಆದರೆ ಈ ಸರ್ಕಾರ ಕೊಡಿಗೆ ಮೋಸ ಮಾಡಿದೆ. ಕೊಡವ ಅಭಿವೃದ್ದಿ ನಿಗಮ ಸ್ವಾಗತಾರ್ಹವೇ ಆದರೂ, ಇದಕ್ಕೆ ಪೂರಕ ಅನುದಾನ ಮತ್ತಿತರ ಯೋಜನೆಯ ಸ್ಟಷ್ಟತೆ ಇಲ್ಲ. ವಿರಾಜಪೇಟೆಗೆ ಕ್ರೀಡಾ ವಸತಿ ನಿಲಯ ಸ್ವಾಗತಾರ್ಹವೇ. ಆದರೆ, ಕೊಡಗಿಗೆ ಹಿಂದಿನ ಸರ್ಕಾರಗಳು ನೀಡುತಿದ್ದ ವಿಶೇಷ ಪ್ಯಾಕೇಜ್ ಇಲ್ಲದಿರುವುದು, ಸರ್ಕಾರದಲ್ಲಿ ಅನುದಾನವೇ ಇಲ್ಲ ಎನ್ನುವುದನ್ನು ಧೃಡಪಡಿಸುತ್ತದೆ. ಒಟ್ಟಿನಲ್ಲಿ ನಾವು ನಿರೀಕ್ಷಸಿದಂತೆ ನಿರಾಸದಾಯಕ ಬಡ್ಜೆಟ್ ಎಂದು ಟೀಕಿಸಿದ್ದಾರೆ.




