
ಪೊನ್ನಂಪೇಟೆ; ಜು.31;(nadubadenews): ಕರ್ನಾಟಕ ರಾಜ್ಯ ಮಕ್ಕಳಸಾಹಿತ್ಯ ಪರಿಷತ್ ಕೊಡಗು ಜಿಲ್ಲಾಘಟಕದ ಪೊನ್ನಂಪೇಟೆ ತಾಲೂಕು ಅಧ್ಯಕ್ಷರಾಗಿ ಯುವ ಸಾಹಿತಿ ವಿನೋದ್ ಮೂಡಗದ್ದೆ ಅವರನ್ನು ಆಯ್ಕೆಮಾಡಲಾಗಿದೆ.
ಹಾಲಿ ಅಧ್ಯಕ್ಷೆಯಾಗಿದ್ದ ಬೊಳ್ಳೆರ ಸುಮನ್ ಸೀತಮ್ಮ ಅವರ ಆರೋಗ್ಯ ಮತ್ತು ವಯುಕ್ತಿಕ ಕಾರಣಕ್ಕಾಗಿ ಅಧ್ಯಕ್ಷ ಸ್ಥಾನ ತೊರೆದಿದ್ದು, ಸದಸ್ಯರಾಗಿ ಮುಂದುವರೆಯಲಿದ್ದಾರೆ. ತೆರವಾದ ಸ್ಥಾನಕ್ಕೆ ವಿನೋದ್ ಮೂಡಗದ್ದೆ ಅವರಮನ್ನು ನೇಮಕಮಾಡಿ ಜಿಲ್ಲಾಧ್ಯಕ್ಷರಾದ ಚಾಮೆರ ದಿನೇಶ್ಬೆಳ್ಯಪ್ಪ ಅವರು ಆದೇಶಿಸಿದ್ದಾರೆ.