https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
   ಆನೆದಾಳಿಗೆ ಬಾಳೆ ನಷ್ಟ;  ಮುಂದಾಗುವ ಅನಾಹುತಕ್ಕೆ ಇಲಾಖೆಯೇ ಹೊನೆ ರೈತ ಆಕ್ರೋಷ

   ಆನೆದಾಳಿಗೆ ಬಾಳೆ ನಷ್ಟ;  ಮುಂದಾಗುವ ಅನಾಹುತಕ್ಕೆ ಇಲಾಖೆಯೇ ಹೊನೆ ರೈತ ಆಕ್ರೋಷ

News, Informatin , Enteetinement and Advertisement
30/07/202530/07/2025nadubadenews@gmail.comLeave a Comment on    ಆನೆದಾಳಿಗೆ ಬಾಳೆ ನಷ್ಟ;  ಮುಂದಾಗುವ ಅನಾಹುತಕ್ಕೆ ಇಲಾಖೆಯೇ ಹೊನೆ ರೈತ ಆಕ್ರೋಷ
Spread the love
   ಆನೆದಾಳಿಗೆ ಬಾಳೆ ನಷ್ಟ;  ಮುಂದಾಗುವ ಅನಾಹುತಕ್ಕೆ ಇಲಾಖೆಯೇ ಹೊನೆ ರೈತ ಆಕ್ರೋಷ

     ಚೆಂಬೆಬೆಳ್ಳೂರ್‌, ಜು.30; (nadubadenews):   ವಿರಾಜಪೇಟೆ ವಲಯದ ಚೆಂಬೆಬೆಳ್ಳೂರ್‌ ಸುತ್ತ ಮುತ್ತ ಕಳೆದ ಹಲವು ದಿನಗಳಿಂದ ಬೀಡು ಬಿಟ್ಟಿರುವ  ಕಾಡಾನೆಯೊಂದು, ದಿನ ನಿತ್ಯ ದಾಂದಲೆ ನಡೆಸುತಿದ್ದು, ಇತ್ತೀಚೆಗೆ ಬೆಳೆಗಾರ ಮಂಡೆಪಂಡ ರಿಶು ಕಾರ್ಯಪ್ಪ ಅವರ ಕಾಫಿ ತೋಟಕ್ಕೆ ನುಗ್ಗಿ ಸುಮಾರು 70ಕ್ಕೂ ಹೆಚ್ಚು ಫಸಲಿಗೆ ತಯಾರಾಗಿದ್ದ ಬಾಳೆಕಂದುಗಳನ್ನು ನಾಶಮಾಡಿದ್ದು, ಕಾಫಿ ಗಿಡಗಳೂ ಹಾನಿಗೊಳಗಾಗಿವೆ.

  

        ಕಳೆದ ಹಲವು ತಿಂಗಳಿನಿಂದಲೇ   ಒಂಟಿ ಕಾಡಾನೆಯು ಈ ಭಾಗದಲ್ಲಿ ಬೀಡುಬಿಟ್ಟಿದ್ದು, ಅರಣ್ಯ ಇಲಾಖೆ ಇಲ್ಲಿಂದ ಓಡಿಸಿದರೆ. ಒಂಟಿಯಂಗಡಿ ಅಮ್ಮತ್ತಿ ಭಾಗಕ್ಕೆ ತೆರಳುತ್ತದೆ ಅಲ್ಲಿಂದ ಓಡಿಸಿದರೆ ಮತ್ತೆ ಇಲ್ಲಿಗೆ ಬರುತ್ತದೆ. ಅತ್ತಿಂದಿತ್ತ ಓಡಿಸುವುದಲ್ಲದೆ  ಶಾಸ್ವತವಾಗಿ ಅರಣ್ಯಕ್ಕೆ ಓಡಿಸಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ  ವ್ಯಕ್ತಪಡಿಸಿರುವ ರಿಶುಕಾರ್ಯಪ್ಪ ಅವರು, ಅರಣ್ಯ ಇಲಾಖೆ ಕೂಡಲೆ  ರೈತರಿಗೆ ಸೂಕ್ತ ಪರಿಹಾರ ನೀಡುವುದಲ್ಲದೆ, ಆನೆಯನ್ನು ತಕ್ಷಣ ಕಾಡಿಗಟ್ಟಲು ಕ್ರಮ ಕೈಗೊಳ್ಳಬೇಕು. ಇಲ್ಲದೇ ಹೋದರೆ ಮುಂದಾಗುವ ಎಲ್ಲಾ ಅನಾಹುತಗಳಿಗೂ ಸರ್ಕಾರವೇ ಹೊಣೆಯಾಗಬೇಕೆಂದು ಎಚ್ಚರಿದ್ದಾರೆ.

Post navigation

ಕೊಡಗಿನ ಅಭಿವೃದ್ದಿಗೆ ಸರ್ಕಾರ ಕಟಿಬದ್ದವಾಗಿದೆ; ಶಾಸಕರ ಸಭೆಯಲ್ಲಿ  ಮುಖ್ಯಮಂತ್ರಿ ಅಭಯ
ರಾಜ್ಯ   ಕಾಂಗ್ರೆಸ್‌  ಪ್ರಚಾರ ಸಮಿತಿ, ಉಪಾಧ್ಯಕ್ಷರಾಗಿ ವೀಣಾ ಅಚ್ಚಯ್ಯ

Related Posts

ಕೊಡಗು ಪೊಲೀಸರಿಗೆ ಸಾರ್ವಜನಿಕ ಸಲಾಂ…

ಕೊಡಗು ಪೊಲೀಸರಿಗೆ ಸಾರ್ವಜನಿಕ ಸಲಾಂ…

04/03/202604/03/2026nadubadenews@gmail.com
ಮುದ್ದಂಡ ಹಾಕಿ ನಮ್ಮೆ, ನಾಳೆಯಿಂದ ಮಹಿಳಾ ಕಾಳಗ…

ಮುದ್ದಂಡ ಹಾಕಿ ನಮ್ಮೆ, ನಾಳೆಯಿಂದ ಮಹಿಳಾ ಕಾಳಗ…

20/04/202520/04/2025nadubadenews@gmail.com
ನಾಟಿಕೋಳಿ ಮರಿ ವಿತರಿಸಿದ ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣ…

ನಾಟಿಕೋಳಿ ಮರಿ ವಿತರಿಸಿದ ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣ…

24/02/202524/02/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version