
ಮಡಿಕೇರಿ,ಜು.11; (nadubadenews): ಗುರು ಪೂರ್ಣೀಮೆಯ ಅಂಗವಾಗಿ ಕೊಡಗು ಜಿಲ್ಲಾ ಬಿಜೆಪಿ ಘಟಕದ ವತಿಯಿಂದ ಗುರುವಂದನಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ, ಮಡಿಕೇರಿ ನಗರದ ಯೋಗ ಗುರು ಕೆ.ಕೆ. ಮಹೇಶ್ ಅವರನ್ನು ಜಿಲ್ಲಾ ಬಿಜೆಪಿ ಪ್ರಮುಖರು ಹಾಗೂ ಯೋಗ ಪಟುಗಳು ಸೇರಿ ನಗರದ ಭಾರತೀಯ ವಿದ್ಯಾ ಭವನದಲ್ಲಿ ಸನ್ಮಾನಿಸಿದರು. ನಿವೃತ್ತ ಪ್ರಾಂಶುಪಾಲ ಟಿ. ಸಿ. ಮಾದಪ್ಪ ಜಾನಪದ ಕಲಾವಿದೆ ಬೈತಾಡ್ಕ ಜಾನಕ್ಕಿ ನಿವೃತ್ತ ಶಿಕ್ಷಕ ಗೋಪಾಲ ಕೃಷ್ಣ ಹೆಬ್ಬಾರ್ ಹಾಗೂ ಸಂಗೀತ ಶಿಕ್ಷಕಿ ಯಾಗಿ ನೂರಾರು ಮಕ್ಕಳಿಗೆ ತರಬೇತಿ ನೀಡುತಿರುವ ಸರೋಜ ಸುಧಾಕರ್ ಅವರನ್ನು ಅವರ ಮನೆ ಗಳಿಗೆ ತೆರಳಿ ಸನ್ಮಾನಿಸಿ ಗೌರವಿಸಲಾಯಿತು.
ಕೊಡಗು ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿ ಕಾಳಪ್ಪ ಮಾಜಿ ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ನಗರ ಸಭಾ ಅಧ್ಯಕ್ಷೆ ಕಲಾವತಿ ಕೊಡಗು ಉಪಾಧ್ಯಕ್ಷ ಮಹೇಶ್ ಜೈನಿ , ಮಡಿಕೇರಿ ನಗರ ಮಂಡಲ ಅಧ್ಯಕ್ಷ ಉಮೇಶ್ ಸುಬ್ರಮಣಿ, ಜಿಲ್ಲಾ ವಕ್ತಾರ ಅರುಣ್ ಕುಮಾರ ಬಿ. ಕೆ. ನಗರ ಮಂಡಲದ ಪ್ರದಾನ ಕಾರ್ಯ ದರ್ಶಿ ಕವನ್ ಕಾವೇರಪ್ಪ, ನಗರ ಸಭಾ ಸದಸ್ಯರಾದ ಸವಿತ ರಾಕೇಶ್ ಸಬೀತಾ ಯುವ ಮೋರ್ಚಾದ ಪೂಣಚ್ಚ, ಓ ಬಿ ಸಿ ಮೋರ್ಚಾದ ಅಧ್ಯಕ್ಷ ಗಜೇಂದ್ರ ಹಾಜರಿದ್ದರು