https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಗೆ ಹೆಸರು ನೋಂದಾಯಿಸಲು  ಕೋರಿಕೆ

ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಗೆ ಹೆಸರು ನೋಂದಾಯಿಸಲು  ಕೋರಿಕೆ

News, Informatin , Enteetinement and Advertisement
02/07/202502/07/2025nadubadenews@gmail.comLeave a Comment on ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಗೆ ಹೆಸರು ನೋಂದಾಯಿಸಲು  ಕೋರಿಕೆ
Spread the love
ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಗೆ ಹೆಸರು ನೋಂದಾಯಿಸಲು  ಕೋರಿಕೆ

ಮಡಿಕೇರಿ ಜು.02(nadubadenews):- ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯು 2025-26ನೇ ಸಾಲಿನಲ್ಲಿಯೂ ಜಾರಿಯಲ್ಲಿದೆ. ಅತಿವೃಷ್ಟಿ, ಅನಾವೃಷ್ಟಿ, ಅಕಾಲಿಕ ಮಳೆ, ಮುಂತಾದ ಪ್ರಾಕೃತಿಕ ವಿಕೋಪ ಸೇರಿದಂತೆ ಹಲವಾರು ಕಾರಣಗಳಿಂದ ಬೆಳೆ ನಷ್ಟ ಉಂಟಾದಾಗ ರೈತರಿಗೆ ವಿಮಾ ರಕ್ಷಣೆ ಮತ್ತು ಆರ್ಥಿಕ ಬೆಂಬಲ ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಈ ಯೋಜನೆಯಡಿಯಲ್ಲಿ ರೈತರ ವಿಮಾ ಕಂತನ್ನು ಆಹಾರ ಮತ್ತು ಎಣ್ಣೆಕಾಳು ಬೆಳೆಗಳಿಗೆ ಮುಂಗಾರು ಹಂಗಾಮಿಗೆ ಶೇ.2 ಎಂದು ಪರಿಗಣಿಸಲಾಗಿದೆ. ಮುಖ್ಯ ಬೆಳೆಗಳಿಗೆ ಯೋಜನೆಯನ್ನು ಗ್ರಾಮ ಪಂಚಾಯಿತಿ ಮಟ್ಟಕ್ಕೆ ಅಳವಡಿಸಲಾಗುತ್ತದೆ.  ಈ ಯೋಜನೆಯು ಸಾಲ ಪಡೆದ ಹಾಗೂ ಸಾಲ ಪಡೆಯದ ರೈತರಿಗೆ ಐಚ್ಛಿಕವಾಗಿದ್ದು, ವಿಮಾ ಮೊತ್ತವು ಒಂದೇ ಆಗಿದೆ. ಬಿತ್ತನೆ ಅಥವಾ ನಾಟಿ ಕಾಲಕ್ಕೆ ಆಗುವ ನಷ್ಟ, ಬೆಳವಣಿಗೆ ಹಂತದಲ್ಲಿ ಆಗುವ ನಷ್ಟ ಹಾಗೂ ಕಟಾವಿನ ನಂತರದ ನಷ್ಟವನ್ನು ಸಹ ಪರಿಗಣಿಸಲಾಗುತ್ತದೆ. 

ಪ್ರಸಕ್ತ ಸಾಲಿನಲ್ಲಿ ಕೊಡಗು ಜಿಲ್ಲೆಗೆ ಸಂಬಂಧಿಸಿದಂತೆ, ಓರಿಯಂಟಲ್ ಜನರಲ್ ಇನ್ಶುರೆನ್ಸ್ ಕಂಪನಿ ವಿಮಾ ಕಂಪನಿಯನ್ನು ಬೆಳೆ ವಿಮೆ ಕಾರ್ಯಕ್ಕೆ ಆಯ್ಕೆ ಮಾಡಲಾಗಿದೆ. ವಿಮಾ ಅರ್ಜಿಗಳು ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಲಭ್ಯವಿದ್ದು, ಈ ಯೋಜನೆಯಡಿ ಅರ್ಜಿಯನ್ನು ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಸಲ್ಲಿಸಿ ನೋಂದಾಯಿಸಿಕೊಳ್ಳಬಹುದು.

2024ನೇ ಸಾಲಿನ ಮುಂಗಾರು ಹಂಗಾಮಿನ ವಿಮಾ ಮೊತ್ತ ಮತ್ತು ರೈತರ ವಿಮಾ ಕಂತಿನ ವಿವರ ಇಂತಿದೆ. ಭತ್ತ(ನೀರಾವರಿ) ಬೆಳೆ ಸಾಮಾನ್ಯ ವಿಮಾ(ಪ್ರತಿ ಹೆಕ್ಟೇರ್‍ಗೆ) ವಿಮಾ ಮೊತ್ತ 93250, ರೈತರ ವಿಮಾ ಕಂತು (ಶೇ.2), ರೈತರ ವಿಮಾ ಮೊತ್ತ ರೂ.1865, ರೈತರ ವಿಮಾ ವಂತಿಕೆ (ಪ್ರತಿ ಎಕರೆಗೆ) 746 ಆಗಿರುತ್ತದೆ. ನೋಂದಾಯಿಸಿಕೊಳ್ಳಲು ಆಗಸ್ಟ್, 16  ಕೊನೆಯ ದಿನವಾಗಿದೆ.

ಭತ್ತ (ಮಳೆಯಾಶ್ರಿತ) ಸಾಮಾನ್ಯ ವಿಮಾ (ಪ್ರತಿ ಹೆಕ್ಟೇರ್ಗೆ) ವಿಮಾ ಮೊತ್ತ ರೂ.63750, ರೈತರ ವಿಮಾ ಕಂತು ಶೇ.2 ರೈತರ ವಿಮಾ ಕಂತು ಮೊತ್ತ ರೂ.1275, ರೈತರ ವಿಮಾ ವಂತಿಕೆ (ಪ್ರತಿ ಎಕರೆಗೆ)  ರೂ.510 ಆಗಿದೆ. ನೋಂದಾಯಿಸಿಕೊಳ್ಳಲು ಆಗಸ್ಟ್, 16 ಕೊನೆಯ ದಿನವಾಗಿದೆ. 

ಮುಸುಕಿನ ಜೋಳ (ಮಳೆಯಾಶ್ರಿತ) ಸಾಮಾನ್ಯ ವಿಮಾ (ಪ್ರತಿ ಹೆಕ್ಟೇರ್ಗೆ) ವಿಮಾ ಮೊತ್ತ ರೂ.56500, ರೈತರ ವಿಮಾ ಕಂತು ಶೇ.2, ರೈತರ ವಿಮಾ ಕಂತು ಮೊತ್ತ ರೂ.1130 ರೈತರ ವಿಮಾ ವಂತಿಕೆ (ಪ್ರತಿ ಎಕರೆಗೆ) ರೂ.452 ಆಗಿದೆ. ನೊಂದಾಯಿಸಿಕೊಳ್ಳಲು ಜುಲೈ, 31 ಕೊನೆಯ ದಿನವಾಗಿದೆ.

ಈ ಯೋಜನೆಯಲ್ಲಿ ರೈತರು ಅರ್ಜಿಯೊಂದಿಗೆ ಪಹಣಿ, ಬ್ಯಾಂಕ್ ಪಾಸ್ ಪುಸ್ತಕ ಮತ್ತು ಆಧಾರ್ ಸಂಖ್ಯೆಯನ್ನು ನೀಡಿ ನೋಂದಾಯಿಸಿಕೊಳ್ಳಬೇಕು. ಯೋಜನೆಯ ಮಾಹಿತಿಯನ್ನು ಸಂರಕ್ಷಣೆ ತಂತ್ರಾಂಶದಲ್ಲಿ ಪಡೆಯಬಹುದು. (http://www.samrakshane.karnataka.gov.in) ಹೆಚ್ಚಿನ ಮಾಹಿತಿಗೆ ಹೋಬಳಿಯ ರೈತ ಸಂಪರ್ಕ ಕೇಂದ್ರ, ಹಾಗೂ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಭೇಟಿ ನೀಡಬಹುದಾಗಿದೆ. ಈ ಯೋಜನೆಯನ್ನು ಕೊಡಗು ಜಿಲ್ಲೆಯಲ್ಲಿ ಹೆಚ್ಚಿನ ರೈತರು ಸದುಪಯೋಗ ಪಡಿಸಿಕೊಳ್ಳುವಂತೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಚಂದ್ರಶೇಖರ್ ಅವರು ತಿಳಿಸಿದ್ದಾರೆ.

Post navigation

     ಹೃದಾಯಘಾತ ತಡೆಯಲು ಎಲ್ಲಾ ತಾಲೂಕು ಆಸ್ಪತ್ರೆಗಳಿಗೂ ಸ್ಟೆಮಿ ಯೋಜನೆ ಸರ್ಕಾರದ ಆದೇಶ
ಪ್ರಕೃತಿ ವಿಕೋಪದವಾದರೆ ನಮ್ಮೊಂದಿಗೆ ಸಹಕರಿಸಿ ; ಎಸ್ಪಿ ಮನವಿ

Related Posts

ಓಡಿಯಂಡ ರೋಹಿಣಿ ದೇಚಮ್ಮಂಗ್‌ ನಲ್ಲಾಮೆ

31/05/202501/06/2025nadubadenews@gmail.com
ಕೊಡವ ಸಮಾಜತ್‌ ಚುನಾವಣೆ ಬೋಂಡುವಾ..?! ಬೋಂಡವಾ…?! ಅಂದಕ ನಂಗಡ ಮೇನತೆಂತ..?!

ಕೊಡವ ಸಮಾಜತ್‌ ಚುನಾವಣೆ ಬೋಂಡುವಾ..?! ಬೋಂಡವಾ…?! ಅಂದಕ ನಂಗಡ ಮೇನತೆಂತ..?!

14/03/202514/03/2025nadubadenews@gmail.com
ಮೀತಲತಂಡ ಇಸ್ಮಾಯಿಲ್ ಅವರಿಗೆ ‘ಶ್ರೀಕೃಷ್ಣರಾಜ ಒಡೆಯರ್ ಸದ್ಭಾವನಾ’ ಪ್ರಶಸ್ತಿ

ಮೀತಲತಂಡ ಇಸ್ಮಾಯಿಲ್ ಅವರಿಗೆ ‘ಶ್ರೀಕೃಷ್ಣರಾಜ ಒಡೆಯರ್ ಸದ್ಭಾವನಾ’ ಪ್ರಶಸ್ತಿ

14/02/202514/02/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version