https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಕೊಡಗಿನಲ್ಲಿ ಎಂವಿಎಸ್ ಕುಡಿಯುವ ನೀರಿನ ಸಮಸ್ಯೆ ನೀಗಿಸಲು, ಸಂಸದ ಯಧುವೀರ್‌ ಮನವಿ

ಕೊಡಗಿನಲ್ಲಿ ಎಂವಿಎಸ್ ಕುಡಿಯುವ ನೀರಿನ ಸಮಸ್ಯೆ ನೀಗಿಸಲು, ಸಂಸದ ಯಧುವೀರ್‌ ಮನವಿ

News, Informatin , Enteetinement and Advertisement
19/06/202519/06/2025nadubadenews@gmail.comLeave a Comment on ಕೊಡಗಿನಲ್ಲಿ ಎಂವಿಎಸ್ ಕುಡಿಯುವ ನೀರಿನ ಸಮಸ್ಯೆ ನೀಗಿಸಲು, ಸಂಸದ ಯಧುವೀರ್‌ ಮನವಿ
Spread the love
ಕೊಡಗಿನಲ್ಲಿ ಎಂವಿಎಸ್ ಕುಡಿಯುವ ನೀರಿನ ಸಮಸ್ಯೆ ನೀಗಿಸಲು, ಸಂಸದ ಯಧುವೀರ್‌ ಮನವಿ

 ದೆಹಲಿ, ಜೂ.19: (nadubadenews): ಕೊಡಗು ಜಿಲ್ಲೆಯಲ್ಲಿ ಕುಡಿಯುವ ನೀರಿಗಾಗಿ ಬಹು ಗ್ರಾಮ ಸ್ಕೀಮ್‌ (ಎಂವಿಎಸ್)ಗಳನ್ನು ತ್ವರಿತವಾಗಿ ಅನುಮೋದನೆ ಮಾಡಬೇಕು ಎಂದು ಕೇಂದ್ರ ಜಲಶಕ್ತಿ ಸಚಿವ ಸಿ.ಆರ್‌ ಪಾಟೀಲ್‌ ಅವರಿಗೆ ಮನವಿ ಮಾಡಲಾಗಿದೆ ಎಂದು ಮೈಸೂರು-ಕೊಡಗು ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ತಿಳಿಸಿದ್ದಾರೆ. ನವದೆಹಲಿಯಲ್ಲಿ ಕೇಂದ್ರ ಸಚಿವರನ್ನು ಭೇಟಿ ಮಾಡಿ, ಮನವಿ ಪತ್ರ ಸಲ್ಲಿಸಿದ ನಂತರ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಒದಗಿಸಲು ಎಂವಿಎಸ್‌ಗೆ ತ್ವರಿತ ಅನುಮೋದನೆ ನೀಡಬೇಕಾಗಿದೆ ಎಂದು ಮಡಿಕೇರಿ ವಿಭಾಗದ ಗ್ರಾಮೀಣ ಕುಡಿಯುವ ನೀರು ಮತ್ತು ಒಳಚರಂಡಿ ವಿಭಾಗದ ಅಧಿಕಾರಿಗಳು ನನಗೆ ಮಾಹಿತಿ ನೀಡಿದ್ದರು ಎಂದು ಸಂಸದರು ವಿವರಿಸಿದ್ದಾರೆ.

ಈ ಸಂಬಂಧ ಕೊಡಗು ಜಿಲ್ಲೆಯವರ ನೀರಿನ ಸಮಸ್ಯೆ ನೀಗಿಸಲು ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇನೆ. ಅತಿ ಶೀಘ್ರದಲ್ಲೇ ಇದಕ್ಕೆ ಅನುಮೋದನೆ ನೀಡುವ ಭರವಸೆ ನೀಡಿದ್ದಾರೆ.

ಮನವಿ ಸ್ವೀಕರಿಸಿದ ಸಚಿವರು, ಸಂಬಂಧಪಟ್ಟ ಅಧಿಕಾರಿಗಳಿಗೆ ಕೂಡಲೇ ಮಾತನಾಡಿ, ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ಸಂಸದರು ತಿಳಿಸಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಅತಿ ಶೀಘ್ರದಲ್ಲೇ ಪರಿಹಾರವಾಗಲಿದೆ ಎಂದು ಸಂಸದ ಯದುವೀರ್‌ ಒಡೆಯರ್‌ ಸ್ಪಷ್ಟಪಡಿಸಿದ್ದಾರೆ.

Post navigation

ಪ್ರತೀ ಬೂಧವಾರ ಕೊಡಗು ವೈದ್ಯಕೀಯ ಆಸ್ಪತ್ರೆಯಲ್ಲಿ  ನೆಫ್ರೋಲಜಿ ತಜ್ಞ ವೈದ್ಯರು ಲಭ್ಯ
ನಿವೃತ್ತ ಸರ್ಕಾರಿ ನೌಕರರಿಗೆ ಆರೋಗ್ಯ ಸಂಜೀವಿನಿ ಸೌಲಭ್ಯಕ್ಕೆ ಒತ್ತಾಯ.

Related Posts

  ನಾಳೆ ಪೊನ್ನಂಪೇಟೆಯ ರಾಮಕೃಷ್ಣ ಆಶ್ರಮದಲ್ಲಿ ಯೋಗದಿನಾಚರಣೆ  

  ನಾಳೆ ಪೊನ್ನಂಪೇಟೆಯ ರಾಮಕೃಷ್ಣ ಆಶ್ರಮದಲ್ಲಿ ಯೋಗದಿನಾಚರಣೆ  

20/06/202520/06/2025nadubadenews@gmail.com
ಮುದ್ದಂಡ ಕಪ್ ಹಾಕಿ ನಮ್ಮೆ : ಇಂದಿನ ವಿಜಯಯಾತ್ರೆ…

ಮುದ್ದಂಡ ಕಪ್ ಹಾಕಿ ನಮ್ಮೆ : ಇಂದಿನ ವಿಜಯಯಾತ್ರೆ…

20/04/202520/04/2025nadubadenews@gmail.com
ಪೇಟೆ ಸಮಾಜ ಬಾಡೆಲ್‌ 23ಕ್‌ ಬಣ್ಣೆ ಕಣ್ಣ್‌ ಪರೀಕ್ಷೆ

ಪೇಟೆ ಸಮಾಜ ಬಾಡೆಲ್‌ 23ಕ್‌ ಬಣ್ಣೆ ಕಣ್ಣ್‌ ಪರೀಕ್ಷೆ

18/06/202518/06/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version