https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ವಿವಿಧದತ್ತಿ ಪ್ರಶಸ್ತಿಗೆ ಭಾಜನರಾದ ಜಿಲ್ಲೆಯ ಪತ್ರಕರ್ತರು

ವಿವಿಧದತ್ತಿ ಪ್ರಶಸ್ತಿಗೆ ಭಾಜನರಾದ ಜಿಲ್ಲೆಯ ಪತ್ರಕರ್ತರು

News, Informatin , Enteetinement and Advertisement
10/06/202510/06/2025nadubadenews@gmail.comLeave a Comment on ವಿವಿಧದತ್ತಿ ಪ್ರಶಸ್ತಿಗೆ ಭಾಜನರಾದ ಜಿಲ್ಲೆಯ ಪತ್ರಕರ್ತರು
Spread the love
ವಿವಿಧದತ್ತಿ ಪ್ರಶಸ್ತಿಗೆ ಭಾಜನರಾದ ಜಿಲ್ಲೆಯ ಪತ್ರಕರ್ತರು

ಮಡಿಕೇರಿ, ಜೂನ್:‌ 10, (nadubadenews): ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ 2024 ನೇ ಸಾಲಿನ ವಾರ್ಷಿಕ ಪ್ರಶಸ್ತಿಯನ್ನು ಪ್ರಕಟ ಮಾಡಲಾಗಿದ್ದು ಈ ಕೆಳಗಿನ ಪತ್ರಕರ್ತರು ಪ್ರಶಸ್ತಿ ಪಡೆದುಕೊಂಡಿದ್ದಾರೆ.

1.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ನೀಡಲಾಗುವ ಪಂದ್ಯಂಡ ಬೆಳ್ಯಪ್ಪ ಸ್ಮರಣಾರ್ಥ ಅತ್ಯುತ್ತಮ ಗ್ರಾಮೀಣ ವರದಿಯ ಪ್ರಶಸ್ತಿಯನ್ನು  ಶಕ್ತಿ ಪತ್ರಿಕೆಯಲ್ಲಿ ಪ್ರಕಟವಾದ ”ಒಂದೇ ಊರು ಮೂರು ಚೆಕ್ ಡ್ಯಾಂ” ವರದಿಗೆ ಅಣ್ಣೀರ ಹರೀಶ್ ಮಾದಪ್ಪ  ಪಡೆದುಕೊಂಡಿದ್ದಾರೆ.

2. ಸಂಘದ ಮಾಜಿ ಅಧ್ಯಕ್ಷರಾದ ಕೆ.ಕೆ.ಶಶಿಧರ್ ಸ್ಮರಣಾರ್ಥ ಕ್ರೀಡಾ ವರದಿ ಪ್ರಶಸ್ತಿಯನ್ನು  ವಾರ್ತಾಭಾರತಿ   ಪತ್ರಿಕೆಯಲ್ಲಿ ಪ್ರಕಟವಾದ” ಕೊಡಗಿನ ಕ್ರೀಡಾಕಲಿಗಳಿಗೆ ಕಾಡುತ್ತಿರುವ ದೈಹಿಕ ಶಕ್ತಿ ಕೊರತೆ ” ವರದಿಗೆ ಇಸ್ಮಾಯಿಲ್ ಕಂಡಕೆರೆ ಪಡೆದುಕೊಂಡಿದ್ದಾರೆ.

3. ಸಂಘದ ಮಾಜಿ ಉಪಾಧ್ಯಕ್ಷರಾದ ಸಿ.ಎನ್.ಸುನಿಲ್ ಕುಮಾರ್ ಸ್ಮರಣಾರ್ಥ ಅತ್ಯುತ್ತಮ ವೀಡಿಯೋಗ್ರಫಿ ಪ್ರಶಸ್ತಿಯನ್ನು ವಿಸ್ತಾರ ಚಾನಲ್ ನಲ್ಲಿ ಪ್ರಸಾರವಾಗಿರುವ” ಹಸಿರ ಮನಸಿರಿಗೆ ಚಂದದ ಹೊದಿಕೆ”   ಸುದ್ದಿಯ ವೀಡಿಯೋಗ್ರಫಿಗೆ  ಮನೋಜ್ ಆರ್.ಆರ್. ಪಡೆದುಕೊಂಡಿದ್ದಾರೆ.

ಚಿತ್ತಾರ ವಾಹಿನಿಯಲ್ಲಿ ಪ್ರಸಾರವಾದ ದಟ್ಟ ಅರಣ್ಯದೊಳಗೆ ಜಲಲ ಜಲಲ ಜಲಧಾರೆ ವರದಿಯ ವೀಡಿಯೋಗ್ರಫಿಗೆ ಸಂತೋಷ್ ರೈ ಪಡೆದುಕೊಂಡಿದ್ದಾರೆ.

4. ನಿವೃತ್ತ ವಾರ್ತಾಧಿಕಾರಿ ಪಳೆಯಂಡ ಪೊನ್ನಪ್ಪ ಸ್ಥಾಪಿಸಿದ ಅತ್ಯುತ್ತಮ ತನಿಖಾ ವರದಿ ಪ್ರಶಸ್ತಿಯನ್ನು ಶಕ್ತಿ ಪತ್ರಿಕೆಯಲ್ಲಿ ಪ್ರಕಟವಾದ, ಆನೆಚೌಕೂರು ಗಡಿ-ಅಕ್ರಮ ಸಾಗಾಟಕ್ಕೆ ರಾಜಮಾರ್ಗ ವರದಿಗೆ ಹೆಚ್​.ಕೆ.ಜಗದೀಶ್  ಪಡೆದುಕೊಂಡಿದ್ದಾರೆ

5.ರಾಜ್ಯ ಪತ್ರಕರ್ತರ ಸಂಘದ ಉಪಾಧ್ಯಕ್ಷರಾಗಿದ್ದ ಮಂಡಿಬೆಲೆ ರಾಜಣ್ಣ ತಮ್ಮ ತಂದೆ ಮಂಡಿಬೆಲೆ ಶಾಮಣ್ಣ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಅರಣ್ಯ ವನ್ಯಜೀವಿ  ಪ್ರಶಸ್ತಿಯನ್ನು  ಪ್ರಜಾಸತ್ಯಾ  ಪತ್ರಿಕೆಯಲ್ಲಿ ಪ್ರಕಟವಾದ ”ಹೊಟ್ಟೆಪಾಡಿಗಾಗಿ ಆನೆ-ಮಾನವ ಸಂಘರ್ಷ ವರದಿಗೆ ಹೆಚ್​.ಇ.ರವಿ   ಪಡೆದುಕೊಂಡಿದ್ದಾರೆ.

6.ಮರಗೋಡು ಹಾಲು ಉತ್ಪಾದಕರ ಸಹಕಾರ ಸಂಘದ ಸ್ಥಾಪಕಾಧ್ಯಕ್ಷರಾದ ಮಂದ್ರೀರ ಮೋಹನ್ ದಾಸ್ ಅವರು ಪ್ರಗತಿಪರ ಹಾಲು ಉತ್ಪಾದಕರಾಗಿದ್ದ ಉಳುವಾರನ ಶೇಷಗಿರಿ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಹೈನುಗಾರಿಕೆ ವರdi ಪ್ರಶಸ್ತಿಯನ್ನು ಪ್ರಜಾಸತ್ಯ ಪತ್ರಿಕೆಯಲ್ಲಿ ಪ್ರಕಟವಾದ ”ಹೈನುಗಾರಿಕೆಯಲ್ಲಿ ಯಶ ಕಂಡ ಸಹೋದರರು”ವರದಿಗೆ ಹೆಚ್.ಇ.ರವಿ ಪಡೆದುಕೊಂಡಿದ್ದಾರೆ.

7.ಸ್ವಸ್ಥ ಸಂಸ್ಥೆಯ ಮುಖ್ಯಸ್ಥೆ ಕಾಕಮಾಡ ಗಂಗಾ ಚಂಗಪ್ಪ  ತಮ್ಮ ಮಾವ ಕಾಕಮಾಡ ನಾಣಯ್ಯ ಹೆಸರಿನಲ್ಲಿ ಸ್ಥಾಪಿಸಿರುವ ಶೈಕ್ಷಣಿಕ ವರದಿ ಪ್ರಶಸ್ತಿಯನ್ನು  ವಿಜಯವಾಣಿ  ಪತ್ರಿಕೆಯಲ್ಲಿ ಪ್ರಕಟವಾದ ರಜೆಯಲ್ಲಿ ಮೈದಳೆದ ಈಜುಕೊಳ”ವರದಿಗೆ ದಿನೇಶ್ ಮಾಲಂಬಿ  ಪಡೆದುಕೊಂಡಿದ್ದಾರೆ.

8.ಬೆಳೆಗಾರ ಅಜ್ಜಮಾಡ ಕಟ್ಟಿ ಮಂದಯ್ಯ ತಮ್ಮ ತಂದೆ ತಾಯಿ ಅಜ್ಜಮಾಡ ಸುಬ್ಬಯ್ಯ ಬೊಳ್ಳಮ್ಮ ಹೆಸರಿನಲ್ಲಿ ಸ್ಥಾಪಿಸಿರುವ ತೋಟಗಾರಿಕಾ ಪ್ರಶಸ್ತಿಯನ್ನು ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟವಾದ ”ಕೃಷಿಯಲ್ಲಿ ಸಹೋದರರ ಕಮಾಲ್”ವರದಿಗೆ ದಿನೇಶ್ ಮಾಲಂಬಿ  ಪಡೆದುಕೊಂಡಿದ್ದಾರೆ.

9.ಕೋವರ್ ಕೊಲ್ಲಿ ಇಂದ್ರೇಶ್ ತಮ್ಮ ತಂದೆ ಚಂದ್ರಶೇಖರ್ ಅವರ ಹೆಸರಿನಲ್ಲಿ ಸ್ಥಾಪಿಸಿದ  ಮಾನವೀಯ ವರದಿ ಪ್ರಶಸ್ತಿಯನ್ನು ವಿಜಯಕರ್ನಾಟಕ  ಪತ್ರಿಕೆಯಲ್ಲಿ ಪ್ರಕಟವಾದ ”ರಾಸುಗಳಿಗೆ ಉರುಳು ಕಂಟಕ”ವರದಿಗೆ  ಜಗದೀಶ್ ಜೋಡುಬೀಟಿ  ಪಡೆದುಕೊಂಡಿದ್ದಾರೆ.

10.ಮಂಡಿಬೆಲೆ ರಾಜಣ್ಣ ತಮ್ಮ ತಾಯಿ ದ್ಯಾವಮ್ಮ ಶ್ಯಾಮಣ್ಣ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಅರಣ್ಯ ವನ್ಯಜೀವಿ ದೃಶ್ಯಮಾಧ್ಯಮ ವರದಿ ಪ್ರಶಸ್ತಿಯನ್ನು  ಟಿವಿ9 ನಲ್ಲಿ  ಪ್ರಸಾರವಾದ ”ಟಿಂಬರ್ ಮಾಫಿಯಾ ಅರಣ್ಯಕ್ಕೆ ಕೊಳ್ಳಿ ”ವರದಿಗೆ  ಐಮಂಡ ಗೋಪಾಲ್ ಸೋಮಯ್ಯ  ಪಡೆದುಕೊಂಡಿದ್ದಾರೆ.

11.ತೇನನ ರಾಜೇಶ್ ಅವರು ತಮ್ಮ ತಂದೆ ದಿವಂಗತ ತೇನನ ಸೋಮಣ್ಣ ಹೆಸರಿನಲ್ಲಿ ಸ್ಥಾಪಿಸಿರುವ  ಸೇನೆಗೆ ಸಂಬಂಧಿಸಿದ ದೃಶ್ಯ ಮಾಧ್ಯಮ ವರದಿ ಪ್ರಶಸ್ತಿಯನ್ನು ರಿಪಬ್ಲಿಕ್ ಕನ್ನಡ ಚಾನಲ್ ನಲ್ಲಿ ಪ್ರಸಾರವಾದ ”ತಂದೆಗೆ ತಕ್ಕ ಮಗ ನಂದಾ ಕಾರ್ಯಪ್ಪ ವರದಿಗೆ” ಬಾಚರಣಿಯಂಡ ಅನುಕಾರ್ಯಪ್ಪ ಪಡೆದುಕೊಂಡಿದ್ದಾರೆ.

12.ವಕೀಲರಾದ ಪಿ.ಕೃಷ್ಣಮೂರ್ತಿ ಅವರು ತಮ್ಮ ತಂದೆ ದಿವಂಗತ ಟಿ.ಕೆ.ಸುಬ್ರಹ್ಮಣ್ಯ ಭಟ್ ಪಂಜಿತ್ತಡ್ಕ ಅವರ ಸ್ಮರಣಾರ್ಥ ಸ್ಥಾಪಿಸಿರುವ ದೃಶ್ಯ ಮಾಧ್ಯಮದಲ್ಲಿ ಪ್ರಸಾರವಾಗುವ ಮಾನವೀಯ ವರದಿ ಪ್ರಶಸ್ತಿಯನ್ನು  ಚಿತ್ತಾರ ವಾಹಿನಿಯಲ್ಲಿ ಪ್ರಸಾರವಾದ ” ಅಮ್ಮಾ ನಿನ್ನ ಬಿಸಿ ಅಪ್ಪುಗೆಯಲ್ಲಿ”ವರದಿಗೆ ಶಿವರಾಜ್  ಪಡೆದುಕೊಂಡಿದ್ದಾರೆ.

13.ಆಪ್ತ ಸಮಾಲೋಚಕಿ ತೇಲಪಂಡ ಆರತಿ ಸೋಮಯ್ಯ ತಮ್ಮ ಅಜ್ಜ ಕೋಟೆರ ಮುತ್ತಣ್ಣ ಹೆಸರಿನಲ್ಲಿ ಸ್ಥಾಪಿಸಿರುವ ಆರೋಗ್ಯ ವರದಿ ಪ್ರಶಸ್ತಿಯನ್ನು ವಿಜಯಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ ಕಾರೆಕಂಡಿ ಹಾಡಿಯಲ್ಲಿ ಶತಾಯುಷಿಗಳು  ವರದಿಗೆ ಜಗದೀಶ್ ಜೋಡುಬೀಟಿ ಪಡೆದುಕೊಂಡಿದ್ದಾರೆ. 14.ಶಕ್ತಿ ಸಲಹಾ ಸಂಪಾದಕರಾಗಿರುವ ಬಿ.ಜಿ.ಅನಂತಶಯನ ತಮ್ಮ ಹೋಂಸ್ಟೇ ಆಲ್ಫೆನ್ ಗ್ಲೋ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಸುದ್ದಿ ಛಾಯಾ ಚಿತ್ರ ಪ್ರಶಸ್ತಿಯನ್ನು ಸ್ಟಾರ್ ಆಫ್ ಮೈಸೂರು  ಪತ್ರಿಕೆಯಲ್ಲಿ ಪ್ರಕಟವಾದ ;ತಂಗ್​ಕಾ  ವರದಿಯ ಚಿತ್ರಕ್ಕೆ ಪಿ.ವಿ.ಅಕ್ಷಯ್ ಪಡೆದುಕೊಂಡಿದ್ದಾರೆ.

15.ಇಂದಿರಾ ಸತ್ಯನಾರಾಯಣ ಅವರು ತಮ್ಮ ತಂದೆ ಸಾಹಿತಿ ದಿವಂಗತ ಡಿ.ಕೃಷ್ಣಯ್ಯ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಸಾಂಸ್ಕೃತಿಕ ವರದಿ ಪ್ರಶಸ್ತಿಯನ್ನು ಶಕ್ತಿ ಪತ್ರಿಕೆಯಲ್ಲಿ ಪ್ರಕಟವಾದ ;ಸಿನಿಮಾಗೀತೆಗೆ ಧ್ವನಿಯಾದ ಕೊಡಗಿನ ಕಾಡುಮಕ್ಕಳು; ವರದಿಗೆ ಹೆಚ್.ಜೆ,ರಾಕೇಶ್  ಪಡೆದುಕೊಂಡಿದ್ದಾರೆ.

16.ಕೈಬುಲೀರ ಪಾವರ್ತಿ ಬೋಪಯ್ಯ ತಮ್ಮ ತಂದೆ-ತಾಯಿ ಉತ್ತಯ್ಯ-ಸುಬ್ಬಮ್ಮ ಹೆಸರಿನಲ್ಲಿ ಸ್ಥಾಪಿಸಿರುವ ಪರಿಸರ ಮತ್ತು ನೈರ್ಮಲ್ಯ ವರದಿ ಪ್ರಶಸ್ತಿಯನ್ನು ಶಕ್ತಿ ಪತ್ರಿಕೆಯಲ್ಲಿ ಪ್ರಕಟವಾದ ಸರಕಾರಗಳಿಗೆ ಕೇಳಿಸದಾಯಿತೇ ಕಾವೇರಿ ಕೂಗು ವರದಿಗೆ ಎಂ.ಎನ್.ಚಂದ್ರಮೋಹನ್ ಪಡೆದುಕೊಂಡಿದ್ದಾರೆ.

17.ಸಂಘದ ಸದಸ್ಯರಾಗಿದ್ದ ಎಸ್.ಎ.ಮುರುಳೀಧರ್ ತಮ್ಮ ತಾಯಿ ಪಾರ್ವತಮ್ಮ ಅಪ್ಪಸ್ವಾಮಿ ಹೆಸರಿನಲ್ಲಿ ಸ್ಥಾಪಿಸಿರುವ ಕೃಷಿ ವರದಿ ಪ್ರಶಸ್ತಿಯನ್ನು ಶಕ್ತಿ ಪತ್ರಿಕೆಯಲ್ಲಿ ಪ್ರಕಟವಾದ ಮೂರು ತಲೆಮಾರಿನ ದೇಶಿಯ ನಾಟಿ ಪದ್ದತಿ ವರದಿಗೆ ಕಿಶೋರ್ ಕುಮಾರ್ ಶೆಟ್ಟಿ ಪಡೆದುಕೊಂಡಿದ್ದಾರೆ.

18.ಸಮಾಜಸೇವಕ ಮೇರಿಯಂಡ ಸಂಕೇತ್ ಪೂವಯ್ಯ ತಮ್ಮ ತಂದೆ ಮೇರಿಯಂಡ ಪೂವಯ್ಯ ಹೆಸರಿನಲ್ಲಿ ಸ್ಥಾಪಿಸಿರುವ ಹುಲಿ ಸಂರಕ್ಷಣೆ ಕುರಿತಾದ ವರದಿ ಪ್ರಶಸ್ತಿಯನ್ನು ವಿಜಯಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ ದಕ್ಷಿಣ ಕೊಡಗಿನಲ್ಲಿ ತಪ್ಪದ ಹುಲಿ ಭೀತಿ ವರದಿಗೆ ಜಗದೀಶ್ ಜೋಡುಬೀಟಿ ಪಡೆದುಕೊಂಡಿದ್ದಾರೆ.

ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ನೀಡಲಾಗುವ ಈ ಎಲ್ಲಾ ಪ್ರಶಸ್ತಿಗಳನ್ನು ಸಂಘದ ವಾರ್ಷಿಕ ಮಹಾಸಭೆ ನಡೆಯುವ ದಿನದಂದು ನೀಡಿ ಗೌರವಿಸಲಾಗುವುದು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಬಾಚರಣಿಯಂಡ ಅನುಕಾರ್ಯಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Post navigation

ನಗರ ಪುನರ್ವಸತಿ ಮತ್ತು ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆಗೆ ಅರ್ಜಿ ಆಹ್ವಾನ…
ಬೆಂಗಳೂರ್‌ ಸಮಾಜ 7 ಏಕ್ರೆಕ್‌, ಒಟ್ಟು ಓರ್‌ ಕೋಟಿ, ಏಳ್‌ಲಕ್ಷತ ಪತ್ತಾಯಿರ ಮಾತ್ರ

Related Posts

​ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ…

​ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ…

15/09/202515/09/2025nadubadenews@gmail.com
ಕೊಡಗು ಜಿಲ್ಲಾ ಬಿಜೆಪಿ ವತಿಯಿಂದ ನಡೆದ ಗುರುವಂದನ ಕಾರ್ಯಕ್ರಮ

ಕೊಡಗು ಜಿಲ್ಲಾ ಬಿಜೆಪಿ ವತಿಯಿಂದ ನಡೆದ ಗುರುವಂದನ ಕಾರ್ಯಕ್ರಮ

11/07/202511/07/2025nadubadenews@gmail.com
ಜಲ್ಲಿ ಚಾಕೋಲೆಟ್‌ ಒಳಗೆ ಗಾಂಜಾ ರಸ

ಜಲ್ಲಿ ಚಾಕೋಲೆಟ್‌ ಒಳಗೆ ಗಾಂಜಾ ರಸ

27/06/202527/06/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version