ಮುಖವಾಡ(Mask)ಗಳನ್ನು ಧರಿಸುವುದು, ಮಾರಾಟ ಮಾಡುವುದು, ಕರ್ಕಶ ಶಬ್ದವನ್ನು ಹೊರ ಹಾಕುವ ಪೀಪಿ/ತುತ್ತೂರಿಯ ಬಳಕೆ ಹಾಗೂ ಮಾರಾಟ ಮಾಡುವುದು ನಿಷೇಧ.
ಮೈಸೂರ್ ದಸರದಷ್ಟೇ ಮಹತ್ವ ಮತ್ತು ಹಿನ್ನಲೆಯನ್ನು ಹೊಂದಿರುವ ಮಡಿಕೇರಿ ದಸರವನ್ನ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬಾರದಂತೆ, ಯಾವುದೇಅಹಿತಕರ ಘಟನೆಳಿಲ್ಲದೆ, ಮಹಿಳೆಯರು, ಮಕ್ಕಳು, ವಯಸ್ಕರು, ಅಸಾಯಕರೂ ಸೇರಿದಂತೆ ಸಾರ್ವಜನಿಕರು, ನಿರ್ಭಯವಾಗಿ ದಸರವನ್ನ ಆಸ್ವಾಧಿಸಲು ಅನುವಾಗುವಂತೆ ಕೊಡಗು ಪೊಲೀಸ್ ಹಲವಾರು ಕ್ರಮಗಳನ್ನು ಕೈಗೊಂಡಿದೆ.
ದಿನಾಂಕ: 12-10-2024 ರಂದು ನಡೆಯಲಿರುವ ವಿಶ್ವ ವಿಖ್ಯಾತ ಮಡಿಕೇರಿ ದಸರಾ ಅಂಗವಾಗಿ ಸಾರ್ವಜನಿಕರ ಸುರಕ್ಷತೆ, ಕಾನೂನು & ಸುವ್ಯವಸ್ಥೆ ಹಾಗೂ ಸುಗಮ ಸಂಚಾರದ ಹಿತದೃಷ್ಟಿಯಿಂದ ಈ ಕೆಳಕಂಡ ಸಿದ್ಧತೆಗಳನ್ನು ಕೊಡಗು ಜಿಲ್ಲಾ ಪೊಲೀಸ್ ವತಿಯಿಂದ ಮಾಡಲಾಗಿರುತ್ತದೆ.
ಮಡಿಕೇರಿ ದಸರಾದ ದಶಮಂಟಪಗಳ ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳುವ ಮಹಿಳೆಯರು, ಮಕ್ಕಳು ಹಿರಿಯ ನಾಗರಿಕರು, ವಿಶೇಷ ಚೇತನರ ಸುರಕ್ಷತೆಯ ಹಿತದೃಷ್ಟಿಯಿಂದ ಈ ಕೆಳಕಂಡ ಕ್ರಮಗಳನ್ನು ಕೈಗೊಳ್ಳಲಾಗಿರುತ್ತದೆ.
ಒಬ್ಬರು ಸಬ್ ಇನ್ಸ್ಪೆಕ್ಟರ್ ನೇತೃತ್ವದಲ್ಲಿ 15 ಜನ ಸಿಬ್ಬಂದಿಗಳನ್ನು ಒಳಗೊಂಡಿರುವ 8 ಜಂಬೋ ತಂಡಗಳನ್ನು (Jumbo Team) ರಚಿಸಲಾಗಿದ್ದು, ಈ ತಂಡವು ಹೆಣ್ಣುಮಕ್ಕಳನ್ನು ಚುಡಾಯಿಸುವ, ಸಾರ್ವಜನಿಕರ ಸುಗಮ ಸಂಚಾರಕ್ಕೆ ತೊಂದರೆ ನೀಡುವ, ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುವ ಕಿಡಿಗೇಡಿಗಳ ಬಗ್ಗೆ ನಿಗಾ ಇಟ್ಟು ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತಾರೆ.
ಸದರಿ ಜಂಬೋ ತಂಡವನ್ನು ಅತೀ ಹೆಚ್ಚು ಜನಸಂದಣಿ ಸೇರುವ ಈ ಕೆಳಕಂಡ ಆಯಕಟ್ಟಿನ ಸ್ಥಳಗಳಲ್ಲಿ ನಿಯೋಜಿಸಲಾಗುವುದು.
1. ರಾಜಾ ಸೀಟ್ನಿಂದ ಗಾಂಧಿ ಮೈದಾನದವರೆಗೆ.
2.ಎಂ.ಎಂ. ವೃತ್ತ
3.ಜಿ.ಟಿ. ವೃತ್ತ
4.ಜನತಾ ಬಜಾರ್ ನಿಂದ ಅಂಚೆ ಕಛೇರಿಯವರೆಗೆ.
5. ಹಳೇ ಖಾಸಗಿ ಬಸ್ ನಿಲ್ದಾಣ.
6. ಐ.ಜಿ.ವೃತ್ತ
7. ಎಸ್.ಬಿ.ಐ. ಜಂಕ್ಷನ್ನಿಂದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದವರೆಗೆ.
8. ಮಾರ್ಕೆಟ್ ಜಂಕ್ಷನ್, ಮಹದೇವಪೇಟೆ ರಸ್ತೆ.
ದಶಮಂಟಪಗಳ ಶೋಭಾಯಾತ್ರೆಯ ಮಾರ್ಗದಲ್ಲಿ ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ಈಗಾಗಲೇ ನಗರದಲ್ಲಿ ಅಳವಡಿಸಲಾಗಿರುವ ಸಿ.ಸಿಟಿ.ವಿಗಳ ಜೊತೆಗೆ ಹೆಚ್ಚುವರಿಯಾಗಿ ಆಯಕಟ್ಟಿನ ಸ್ಥಳಗಳಲ್ಲಿ ಸಿ.ಸಿ ಟಿವಿಯನ್ನು ಅಳವಡಿಸಿ ಸದರಿ ಸಿ.ಸಿಟಿವಿಗಳ ಮೇಲ್ವಿಚಾರಣೆಗಾಗಿ ಕಮ್ಯಾಂಡ್ & ಕಂಟ್ರೋಲ್ ಕೊಠಡಿಯನ್ನು ನಗರ ಪೊಲೀಸ್ ಠಾಣೆಯಲ್ಲಿ ತೆರೆದು ಪುಂಡಾಟ, ಕಿಡಿಗೇಡಿತನ, ಅಸಭ್ಯವರ್ತನೆ ನಡೆಸುವವರ ವಿರುದ್ಧ ಕಣ್ಣಾವಲು ಇಡಲಾಗುವುದು. ಇದರೊಂದಿಗೆ ಸಾರ್ವಜನಿಕ ಸುರಕ್ಷತಾ ಕಾಯ್ದೆ ಅಡಿಯಲ್ಲಿ
ನಗರದ ವಾಣಿಜ್ಯ-ವ್ಯವಹಾರ ಕೇಂದ್ರಗಳಲ್ಲಿ ಅಳವಡಿಸಿಕೊಂಡಿರುವ ಸುಮಾರು 800ಕ್ಕೂ ಹೆಚ್ಚು ಸಿಸಿಟಿವಿಗಳನ್ನು ಕಣ್ಗಾವಲಿಗಾಗಿ ಬಳಸಿಕೊಳ್ಳಲಾಗುವುದು.
ದಶಮಂಟಪಗಳ ಶೋಭಾಯಾತ್ರೆ ವೀಕ್ಷಿಸಲು ಆಗಮಿಸುವ ಸಾರ್ವಜನಿಕರ ಸುರಕ್ಷತೆಗಾಗಿ ವಿಧ್ವಂಸಕ ಕೃತ್ಯ ಪತ್ತೆ ತಂಡ (ASC Team) ಹಾಗೂ ಶ್ವಾನ ದಳದಿಂದ ವಿಧ್ವಂಸಕ ಕೃತ್ಯಗಳ ಚಟುವಟಿಕೆಗಳ ಪರಿಶೀಲನೆಯನ್ನು ನಡೆಸಲಾಗುವುದು. ನಗರದ ಆಯಕಟ್ಟಿನ ಸ್ಥಳಗಳಲ್ಲಿ ಸ್ಟ್-ಸೆಂಟ್ರಿ ಕರ್ತವ್ಯಕ್ಕೆ ಸಿಬ್ಬಂದಿಗಳನ್ನು ನಿಯೋಜಿಸಿ, ಅಕ್ರಮ ಚಟುವಟಿಕೆಗಳ ಬಗ್ಗೆ ನಿಗಾ ಇಡಲಾಗುವುದು. ಇದಕ್ಕಾಗಿ ನೈಟ್ ವಿಜನ್ ಬೈನಾಕ್ಯುಲರ್ ಗಳನ್ನು ಹಾಗೂ ಸಾಕಷ್ಟು ಸಂಖ್ಯೆಯ ವೀಡಿಯೋ ಕ್ಯಾಮರಗಳನ್ನು ಬಳಸಲಾಗುವುದು.
ನಿರ್ಜನ ಪ್ರದೇಶಗಳಲ್ಲಿ ಅಪರಾಧ ಚಟುವಟಿಕೆಗಳನ್ನು ತಡೆಗಟ್ಟಲು ಪೊಲೀಸ್ ಗಸ್ತನ್ನು ಏರ್ಪಾಡುಮಾಡಿದ್ದು, ಇದಕ್ಕಾಗಿ ಇಲಾಖಾ ಜೀಪ್ ಹಾಗೂ ಚೀತಾ ಬೈಕ್ಗಳನ್ನು ಬಳಸಲಾಗುವುದು. ನಗರದಲ್ಲಿ ನಡೆಯುವ ಚಟುವಟಿಕೆಗಳ ಬಗ್ಗೆ ಡೋನ್ ಕ್ಯಾಮರಾ ಬಳಸಿ ನಿಗಾ ಇಡಲಾಗುವುದು.
ಶೋಭಾ ಯಾತ್ರೆಗೆ ಆಗಮಿಸುವ ಸಾರ್ವಜನಿಕರು ಶೋಭಯಾತ್ರೆಯನ್ನು ವೀಕ್ಷಿಸಲು ಹಳೆಯ ಮತ್ತು ಸುರಕ್ಷಿತವಲ್ಲದ ಕಟ್ಟಡವನ್ನು ಏರಬಾರದಾಗಿ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ. ಈ ಬಗ್ಗೆ ಕಟ್ಟಡಗಳ ಮಾಲೀಕರು ಸೂಕ್ತ ಕ್ರಮ ಕೈಗೊಳ್ಳಲು ಕೋರಿದೆ.
ದಸರಾ ವೀಕ್ಷಿಸಲು ಆಗಮಿಸುವ ಸಾರ್ವಜನಿಕರ ಅನುಕೂಲಕ್ಕಾಗಿ, ಪೊಲೀಸ್ ಸಹಾಯವಾಣಿ ಕೇಂದ್ರಗಳನ್ನು ನಗರದ ಈ ಕೆಳಕಂಡ ಆಯಕಟ್ಟಿನ ಸ್ಥಳಗಳಲ್ಲಿ ತೆರೆಯಲಾಗುವುದು.
1. ಗಾಂಧಿ ಮೈದಾನ.
2. ಜಿ.ಟಿ ವೃತ್ತ.
3. ನಗರ ಪೊಲೀಸ್ ಠಾಣೆ.
4. ಹಳೇ ಖಾಸಗಿ ಬಸ್ಸು ನಿಲ್ದಾಣ.
ಮೇಲ್ಕಂಡ ಪೊಲೀಸ್ ಸಹಾಯವಾಣಿ ಕೇಂದ್ರಗಳನ್ನು ಸಾರ್ವಜನಿಕರು ತುರ್ತು ಸ್ಪಂದನೆಗಾಗಿ ಸಂಪರ್ಕಿಸಬಹುದು. ಎಂದು ಜಿಲ್ಲಾ ಪೊಲೀಸ್ ಪ್ರಕಟಣೆ ತಿಳಿಸಿದೆ.