ಪೊನ್ನಂಪೇಟೆ, ಮೆ.27 : (nadubadenews): ಕೊಡಗಿನಲ್ಲಿ ಸುರಿಯುತ್ತಿರುವ ಭಾರೀ ಮಳೆಗಾಳಿ ಅನಿರೀಕ್ಷತ ಆಪತ್ತು ತಂದೊಡ್ಡುತಿದ್ದು, ಇಂದು ಪೊನ್ನಂಪೇಟೆ ತಾಲೂಕು, ಪೊನ್ನಪ್ಪ ಸಂತೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಿಳೂರು ಗ್ರಾಮದ ಕೆ.ಸಿ. ಗಣಪತಿಯವರ ಮನೆಯ ಮೇಲೆ ತೆಂಗಿನ ಮರ ಬಿದ್ದು ಭಾಗಷಃ ಮನೆ ಜಕಂಗೊಡಿದ್ದು, ಅದೃಷ್ಟವಶಾತ್ ಪ್ರಾಣಹಾನಿ ಸಂಭವಿಸಿಲ್ಲ.
ಗಣಪತಿಯವರ ಹಲೀ ವಾಸದ ಮನೆ ಇದಾಗಿದ್ದು, ಎರಡು ದಿನದ ಹಿಂದೆ ಗಣಪತಿಯವರು ಪತ್ನಿ ಸಮೇತರಾಗಿ ತಮ್ಮ ಮಗಳ ಮನೆಗೆ ತೆರಳಿದ್ದರು. ಇಂದು ಸಂಜೆಯ ಹೊತ್ತಿಗೆ ಬೀಸಿದ ಭಾರೀ ಗಾಳಿಗೆ ತೆಂಗಿನ ಮರ ಮನೆಯ ಮದ್ಯಭಾಗಕ್ಕೆ ಬಿದ್ದಿದ್ದು ಲಕ್ಷಾಂತರ ಮೌಲ್ಯದ ಪೀಟೋಪಕರಣಗಳು ಸೇರಿದಂತೆ, ಮನೆಯ ಬಹುಪಾಲು ಭಾಗ ಹಾನಿಯಾಗಿದೆ. ಒಂದುವೇಳೆ ಮಗಳ ಮನೆಗೆ ತೆರಳದೇ ಇದ್ದಿದ್ದರೆ ವಯೋವೃದ್ದರಿಬ್ಬರೂ ಮನೆಯಲ್ಲೇ ಇದ್ದಿದ್ದರೆ ಭಾರೀ ಅನಾಹುತವೇ ನಡೆದು ಹೋಗುತಿತ್ತು ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ದಂದಾ ಅಧಿಕಾರಿಗಳು ಬೇಟಿ ನೀಡಿ ಮಹಜರು ನಡೆಸಿದ್ದಾರೆ.