https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button

ಮುಂಗಾರುವಿನಲ್ಲಿ  ಹೆಚ್ಚಿನ ಎಚ್ಚರ ವಹಿಸಲು ಶಾಸಕ ಡಾ.ಮಂತರ್ ಗೌಡ ಸೂಚನೆ…

News, Informatin , Enteetinement and Advertisement
23/05/202523/05/2025nadubadenews@gmail.comLeave a Comment on ಮುಂಗಾರುವಿನಲ್ಲಿ  ಹೆಚ್ಚಿನ ಎಚ್ಚರ ವಹಿಸಲು ಶಾಸಕ ಡಾ.ಮಂತರ್ ಗೌಡ ಸೂಚನೆ…
Spread the love

 ಮಡಿಕೇರಿ ಮೇ.23(Nadubade News): ಮುಂಗಾರು ಸಂದರ್ಭ ಮಡಿಕೇರಿ ನಗರದಲ್ಲಿ ಹೆಚ್ಚಿನ ಎಚ್ಚರ ವಹಿಸುವಂತೆ ಶಾಸಕರಾದ ಡಾ.ಮಂತರ್‌ಗೌಡ ಅವರು ಸಲಹೆ ಮಾಡಿದ್ದಾರೆ.  

      ನಗರದ ನಗರಸಭೆ ಸಭಾಂಗಣದಲ್ಲಿ ಬುಧವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ನಗರದ ವಿವಿಧ ಪ್ರದೇಶಗಳಲ್ಲಿ ಹೆಚ್ಚಿನ ಮಳೆ ಸಂದರ್ಭದಲ್ಲಿ ಕಾಳಜಿ ವಹಿಸಬೇಕು. ಯಾವುದೇ ರೀತಿಯ ತೊಂದರೆ ಆಗದಂತೆ ಮುನ್ನೆಚ್ಚರ ವಹಿಸಬೇಕು ಎಂದರು.  

      ಪರಿಸರ ಶುಚಿತ್ವಕ್ಕೆ ಹೆಚ್ಚಿನ ಒತ್ತು ನೀಡಬೇಕು. ಮಳೆ ನೀರು ಸರಾಗವಾಗಿ ಹರಿಯುವಂತೆ ಮಾಡಬೇಕು. ರಾಜ ಕಾಲುವೆಯಲ್ಲಿ ಕಸ ಕಡ್ಡಿ ಸೇರದಂತೆ ಕಾಲ ಕಾಲಕ್ಕೆ ಸ್ವಚ್ಚಗೊಳಿಸಬೇಕು. ಸಹಾಯವಾಣಿ ಆರಂಭ ಹೀಗೆ ಮುಂಗಾರು ಸಂಬಂಧ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ತಿಳಿಸಿದರು.

    ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವಂತಾಗಬೇಕು. ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು. ರಾಜಾಸೀಟು ಮತ್ತು ಜನರಲ್ ತಿಮ್ಮಯ್ಯ ಮುಖ್ಯರಸ್ತೆ ಅಭಿವೃದ್ಧಿ ಪಡಿಸಲು ಮುಂದಾಗಲಾಗಿದೆ. ಆ ನಿಟ್ಟಿನಲ್ಲಿ ಪಾದಚಾರಿ ದಾರಿ, ಚರಂಡಿ, ವಾಹನಗಳ ಪಾರ್ಕಿಂಗ್ ಹೀಗೆ ಎಲ್ಲವನ್ನೂ ಒಳಗೊಂಡ ರಸ್ತೆ ಅಭಿವೃದ್ಧಿ ಪಡಿಸಲು ಮುಂದಾಗಲಾಗಿದೆ ಎಂದು ಶಾಸಕರು ತಿಳಿಸಿದರು.

     ಫಾರ್ಮ್ ನಂ.3 ನ್ನು ಸರಿಯಾಗಿ ನಿರ್ವಹಣೆ ಮಾಡುವಂತೆ ಶಾಸಕರು ಸೂಚಿಸಿದರು. ನಗರಸಭೆ ಕೆಲಸಗಳ ಸಂಬಂಧ ಪಟ್ಟಿ ಮಾಡಿ ನಾಮಫಲಕದಲ್ಲಿ ಅಳವಡಿಸುವಂತೆ ಶಾಸಕರು ಸಲಹೆ ನೀಡಿದರು.

     ನಗರಸಭೆ ಅಧ್ಯಕ್ಷರಾದ ಪಿ.ಕಲಾವತಿ, ಉಪಾಧ್ಯಕ್ಷರಾದ ಮಹೇಶ್ ಜೈನಿ ಅವರು ಹಲವು ವಿಚಾರಗಳ ಕುರಿತು ಪ್ರಸ್ತಾಪಿಸಿದರು.      

     ಸದಸ್ಯರಾದ ರಾಜೇಶ್ ಯಲ್ಲಪ್ಪ, ಬಿ.ಪಿ.ಚಿತ್ರಾವತಿ, ಸತೀಶ್, ಸವಿತಾ ರಾಕೇಶ್ ಬಶೀರ್ ಅಹ್ಮದ್, ಪಿ.ಚಂದ್ರಶೇಖರ್, ಕೆ.ಎಂ.ಅಪ್ಪಣ್ಣ, ಸಬಿತಾ, ಮೇರಿ ವೇಗಸ್, ಕೆ.ಎಸ್.ರಮೇಶ್, ಮುಸ್ತಾಪ ಎಂ.ಎ., ಮಂಜುಳಾ ಸಿ.ಕೆ, ಅರುಣ್ ಶೆಟ್ಟಿ, ಅನಿತಾ ಎನ್.ಪಿ,, ಎಂ.ಕೆ.ಮನ್ಸೂರ್ ಅಲಿ, ನೀಮಾ ಆರ್ಶದ್, ಶ್ವೇತಾ ವೈ.ಡಿ., ನಾಮ ನಿರ್ದೇಶಿತ ಸದಸ್ಯರಾದ ಸದಾ ಮುದ್ದಪ್ಪ, ಜಿ.ಸಿ.ಜಗದೀಶ್, ಜುಲೈಕಾಬಿ, ಮುದ್ದುರಾಜ್ ಬಿ.ಎನ್. ಇತರರು ಹಲವು ವಿಚಾರಗಳ ಕುರಿತು ಗಮನ ಸೆಳೆದರು.

Post navigation

ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಗೆ  ಅರ್ಜಿ ಆಹ್ವಾನ…
ಕುಶಾಲನಗರದಲ್ಲಿ ನ್ಯಾಯಾಧೀಶರಿಗೆ ಬೀಳ್ಕೊಡುಗೆ ಸಮಾರಂಭ…

Related Posts

ಜಿಲ್ಲೆಯ ಸಮಸ್ಯೆಗಳನ್ನು ಪರಿಶೀಲಿಸಿ ಕೂಡಲೇ ಸರಿಪಡಿಸಲು ಸಂಸದ ಯದುವೀರ್ ಒಡೆಯರ್‌ ಸೂಚನೆ…

ಜಿಲ್ಲೆಯ ಸಮಸ್ಯೆಗಳನ್ನು ಪರಿಶೀಲಿಸಿ ಕೂಡಲೇ ಸರಿಪಡಿಸಲು ಸಂಸದ ಯದುವೀರ್ ಒಡೆಯರ್‌ ಸೂಚನೆ…

08/05/202508/05/2025nadubadenews@gmail.com
ನಿಂಗಡ ಕಾರ್ಬಾರ್‌ರ ಊಟೋಪಚಾರ ನಂಗ ಮಾಡಿತಪ್ಪ…

ನಿಂಗಡ ಕಾರ್ಬಾರ್‌ರ ಊಟೋಪಚಾರ ನಂಗ ಮಾಡಿತಪ್ಪ…

16/05/202516/05/2025nadubadenews@gmail.com
ಕೊಡಗಿನಲ್ಲಿ ರಿವರ್ ರ್ಯಾಪ್ಟಿಂಗ್, ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ(ಜೇತ್ನ)ಯಿಂದ ಪ್ರಮಾಣ ಪತ್ರ ಕಡ್ಡಾಯ…

ಕೊಡಗಿನಲ್ಲಿ ರಿವರ್ ರ್ಯಾಪ್ಟಿಂಗ್, ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ(ಜೇತ್ನ)ಯಿಂದ ಪ್ರಮಾಣ ಪತ್ರ ಕಡ್ಡಾಯ…

13/06/202513/06/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version