ಸೋಮವಾರಪೇಟೆ ಮೇ.22(Nadubade News): ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಕಾರ್ಯಾಲಯಕ್ಕೆ ಸ್ವಚ್ಚ ಭಾರತ್ ಮಿಷನ್ 2.0ರ ಅಡಿಯಲ್ಲಿ ಐಇಸಿ ಚಟುವಟಿಕೆಗಳನ್ನು ಕೈಗೊಳ್ಳಲು ಸ್ವಸಹಾಯ ಗುಂಪು (ಎಸ್‍ಎಚ್‍ಜಿ) ಸದಸ್ಯರ ನೇಮಕಾತಿಗಾಗಿ, ಆಸಕ್ತಿಯುಳ್ಳ ಸದಸ್ಯರಿಂದ ಅರ್ಜಿ ಆಹ್ವಾನಿಸಲಾಗಿದೆ.
ಈ ಮೂಲಕ 3 ವರ್ಷಗಳವರೆಗೆ ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಜೊತೆಗೆ ಪೂರ್ಣಾವಧಿಗೆ ಐಇಸಿ ಚಟುವಟಿಕೆಗಳನ್ನು ಕೈಗೊಳ್ಳಲು ನಲ್ಮ್-ಡೇ ಅಡಿಯಲ್ಲಿ ನೋಂದಾಯಿಸಿ ಎಸ್‍ಎಚ್‍ಜಿ ಸದಸ್ಯರಿಂದ ಸೋಮವಾರಪೇಟೆ ಪಟ್ಟಣ ಪಂಚಾಯಿತಿಯು “ಆಸಕ್ತಿಯ ಅಭಿವ್ಯಕ್ತಿ”ಯನ್ನು ಆಹ್ವಾನಿಸುತ್ತದೆ. ಷರತ್ತುಗಳಿಗೊಳಪಟ್ಟ ಆಯ್ಕೆ ಪ್ರಕ್ರಿಯೆ ಮತ್ತು ವೇತನಕ್ಕೆ ಸಂಬಂಧಿಸಿದ ವಿವರಗಳನ್ನು www.somwarpettown.mrc.gov.in/ ವೆಬ್‍ಸೈಟ್‍ನಲ್ಲಿ ಲಭ್ಯವಿದೆ.
ನಲ್ಮ್-ಡೇ ಯೊಂದಿಗೆ ನೋಂದಾಯಿಸಿಕೊಂಡ ಆಸಕ್ತ ಸ್ವಸಹಾಯ ಗುಂಪು ಸದಸ್ಯರು ತಮ್ಮ ಆಸಕ್ತಿಯ ಅಭಿವ್ಯಕ್ತಿಯನ್ನು ನಲ್ಮ್-ಡೇ ಯ ಹಿಂಬರಹದೊಂದಿಗೆ ಮೇಲೆ ತಿಳಿಸಲಾದ ವೆಬ್‍ಸೈಟ್‍ನಲ್ಲಿ ಲಭ್ಯವಿರುವ ನಿಗದಿತ ನಮೂನೆಯಲ್ಲಿ ಮೇ, 29 ರ ಸಂಜೆ 5 ಗಂಟೆಯ ಒಳಗಾಗಿ itstaff_ulb_somwarpet@yahoo.com./ ka.somwarpet.tp@gmail.com ಗೆ ಅಥವಾ ಕಚೇರಿಯ ವೇಳೆಯಲ್ಲಿ ಖುದ್ದಾಗಿ ತಲುಪಿಸಬಹುದಾಗಿದೆ, ಕಾಲ ಮೀರಿ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಆಸಕ್ತಿಯುಳ್ಳ ಎಸ್‍ಎಚ್‍ಜಿ ಸದಸ್ಯರು ಗುರುತಿನ ಪುರಾವೆ, ವಿಳಾಸದ ಪುರಾವೆ, ಅರ್ಹತಾ ಪಟ್ಟಿಯಲ್ಲಿ ನೋಂದಾಯಿಸಿಕೊಂಡಿರುವುದಕ್ಕೆ(ಎಂಪಾನೆಲ್) ದಾಖಲೆಗೂ, ಶೈಕ್ಷಣಿಕ ಅರ್ಹತೆ, ನಲ್ಮ್-ಡೇ ಯಿಂದ ಹಿಂಬರಹ ನಮೂನೆ. ಆಯ್ಕೆಯಾದ ಅಭ್ಯರ್ಥಿಗಳನ್ನು ಈ ವಿಷಯದ ಕುರಿತು ಅವರ ತಿಳುವಳಿಕೆಯನ್ನು ನಿರ್ಣಯಿಸಲು ಮೇ, 31 ರಂದು ಅಥವಾ ಸೂಚಿಸಿದ ದಿನಾಂಕದಂದು ಸಂದರ್ಶನಕ್ಕೆ ಕರೆಯಲಾಗುವುದು ಎಂದು ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಅವರು ತಿಳಿಸಿದ್ದಾರೆ.