https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಅರೆಭಾಷಿಕರ ಐನ್‍ಮನೆ ಕಾರ್ಯಕ್ರಮ ಮೇ, 17ರಂದು…

ಅರೆಭಾಷಿಕರ ಐನ್‍ಮನೆ ಕಾರ್ಯಕ್ರಮ ಮೇ, 17ರಂದು…

News, Informatin , Enteetinement and Advertisement
15/05/202515/05/2025nadubadenews@gmail.comLeave a Comment on ಅರೆಭಾಷಿಕರ ಐನ್‍ಮನೆ ಕಾರ್ಯಕ್ರಮ ಮೇ, 17ರಂದು…
Spread the love
ಅರೆಭಾಷಿಕರ ಐನ್‍ಮನೆ ಕಾರ್ಯಕ್ರಮ ಮೇ, 17ರಂದು…

     ಮಡಿಕೇರಿ ಮೇ.15(Nadubade news): ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಅರೆಭಾಷಿಕರ ಐನ್‍ಮನೆ ಕಾರ್ಯಕ್ರಮವು ಮಕ್ಕಂದೂರು ಗ್ರಾಮದ ಕುಂಭಗೌಡನ ಐನ್‍ಮನೆಯಲ್ಲಿ ಮೇ, 17 ರಂದು ಬೆಳಗ್ಗೆ 10.30 ಗಂಟೆಗೆ ನಡೆಯಲಿದೆ.

    ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿ, ಕುಂಭಗೌಡನ ಕುಟುಂಬದ ಪಟ್ಟೆದಾರರಾದ ಕೆ.ಕೆ.ಓಂಕಾರಪ್ಪ, ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಮಂತರ್‍ ಗೌಡ,  ಕರ್ನಾಟಕ ವಿಧಾನಪರಿಷತ್ ಮಾಜಿ ಸದಸ್ಯರಾದ ವೀಣಾ ಅಚ್ಚಯ್ಯ, ಮಕ್ಕಂದೂರು ಗ್ರಾ.ಪಂ.ಅಧ್ಯಕ್ಷರಾದ ಬಿ.ಎನ್.ರಮೇಶ್, ಮಕ್ಕಂದೂರು ವ್ಯವಸಾಯ ಸಹಕಾರ ಸಂಘದ ಅಧ್ಯಕ್ಷರಾದ ಶಾಂತೆಯಂಡ ರವಿಕುಶಾಲಪ್ಪ, ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷರಾದ ಆನಂದ ಕರಂದ್ಲಾಜೆ, ಕೊಡಗು ಏಲಕ್ಕಿ ಮಾರಾಟ ಸಹಕಾರ ಸಂಘದ ನಿರ್ದೇಶಕರಾದ ಕೋಳುಮುಡಿಯನ ಅನಂತ ಕುಮಾರ್, ಮಕ್ಕಂದೂರು ಗೌಡ ಸಮಾಜದ ಅಧ್ಯಕ್ಷರಾದ ಲಕ್ಕಪ್ಪನ ಕೆ.ಹರೀಶ, ಶಿವಮೊಗ್ಗ ಜಿಲ್ಲೆಯ ಅಬಕಾರಿ ಇಲಾಖೆಯ ಉಪ ಆಯುಕ್ತರಾದ ಸುಮಿತ ಕುಂಭಗೌಡನ ಕುಶಾಲಪ್ಪ-ನಂಗಾರು, ಪ್ರಗತಿಪರ ಕೃಷಿಕರಾದ ಸಂಪಾಜೆ ಇಂದಿರಾ ದೇವಿಪ್ರಸಾದ್ ಇತರರು ಪಾಲ್ಗೊಳ್ಳಲಿದ್ದಾರೆ. ಸುಳ್ಯದ ಸಾಹಿತಿ ಎ.ಕೆ.ಹಿಮಕರ ಅವರು ಅರೆಭಾಷೆ ಕುಟುಂಬಗಳ ಐನ್‍ಮನೆ ವಿಷಯ ಕುರಿತು ಉಪನ್ಯಾಸ ನೀಡಲಿದ್ದಾರೆ. ಅರವಿಂದ್ ಮಾಚಯ್ಯ ಕುಂಭಗೌಡನ ಅವರು ಕುಂಭಗೌಡನ ಐನ್‍ಮನೆ ನಡೆದು ಬಂದ ದಾರಿ ಕುರಿತು ಉಪನ್ಯಾಸ ನೀಡಲಿದ್ದಾರೆ.

   ಮೇ, 17 ರಂದು ಬೆಳಗ್ಗೆ 9.30 ಗಂಟೆಗೆ ಸುಳ್ಯ ಜಯಪ್ರಕಾಶ್ ಪೆರುಮುಂಡ ಮತ್ತು ತಂಡದವರಿಂದ ಅರೆಭಾಷೆ ಹಾಡುಗಳ ಕಲರವ, ಬೆಳಗ್ಗೆ 10 ಗಂಟೆಗೆ ಆರ್‍ಜೆ ತ್ರಿಶೂಲ್ ಕಂಬಳನೊಟ್ಟಿಗೆ ನೀವು, ಮಧ್ಯಾಹ್ನ 2.30ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

Post navigation

ಕೊಡವ ಒಕ್ಕಡೊಕ್ಕಡ ಮೊದಲ ವರ್ಷದ ತೋಕ್‌ನಮ್ಮೆ ಜೂನ್ 7 ರಂದು…
ಅಕ್ರಮವಾಗಿ ನಿಷೇಧಿತ ಮಾದಕ ವಸ್ತು ಎಂ.ಡಿ.ಎಂ.ಎ. ಮಾರಾಟ ಮಾಡುತ್ತಿದ್ದ ಆರೋಪಿ ಬಂಧನ…

Related Posts

ಮಡಿಕೇರಿ ನಗರದಲ್ಲಿ ನಿತ್ಯ ಕಸ ಸಂಗ್ರಹಕ್ಕೆ ನಿವಾಸಿಗಳ ಆಗ್ರಹ

ಮಡಿಕೇರಿ ನಗರದಲ್ಲಿ ನಿತ್ಯ ಕಸ ಸಂಗ್ರಹಕ್ಕೆ ನಿವಾಸಿಗಳ ಆಗ್ರಹ

11/07/202511/07/2025nadubadenews@gmail.com
ಉಚಿತ ಪ್ರಯಾಣಕ್ಕೆ ಬೇಕಿಲ್ಲಆಧಾರ್, ಬರಲಿದೆ  ಸ್ಮಾರ್ಟ್ ಕಾರ್ಡ್…

ಉಚಿತ ಪ್ರಯಾಣಕ್ಕೆ ಬೇಕಿಲ್ಲಆಧಾರ್, ಬರಲಿದೆ  ಸ್ಮಾರ್ಟ್ ಕಾರ್ಡ್…

18/04/202518/04/2025nadubadenews@gmail.com
ವಿರಾಜಪೇಟೆ ಪೌರಕಾರ್ಮಿಕರಿಗೆ ಉಣಬಡಿಸಿದ ಶಾಸಕ, ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ …

ವಿರಾಜಪೇಟೆ ಪೌರಕಾರ್ಮಿಕರಿಗೆ ಉಣಬಡಿಸಿದ ಶಾಸಕ, ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ …

02/06/202502/06/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version