ಬೆಂಗಳೂರು, ಅ.04: ಬಡ ಮಕ್ಕಳ ವಿಧ್ಯಾಬ್ಯಾಸದ ಅನುಕೂಲತೆಗಾಗಿ, ಕೊಡಗು ಜಿಲ್ಲೆಯ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ, ಸಂಪಾಜೆ, ಅಮ್ಮತ್ತಿ, ಹುದಿಕೇರಿ ಹೋಬಳಿಗಳಲ್ಲಿ ವಸತಿ ಶಾಲೆ ಆರಂಭಕ್ಕೆ ಆದೇಶ ಹೊರಡಿಸಲಾಗಿದೆ. ಶಾಸಕರು ಹಾಗೂ ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಪೊನ್ನಣ್ಣ ಅವರ ಕೋರಿಕೆ ಮೇರೆಗೆ ಫಲವಾಗಿ ಈ ಮಂಜೂರಾತಿ ಆಗಿದೆ.
ಕರ್ನಾಟಕ ಸರ್ಕಾರದ ಬಡ್ಜೆಟ್ನಲ್ಲಿ ಘೋಷಿಸಿದ್ದತಂತೆ ವಸತಿ ಶಾಲೆ ಇಲ್ಲದ ಹೋಬಳಿಗಳ ಪೈಕಿ ರಾಜ್ಯವ್ಯಾಪಿ ಒಟ್ಟು 20 ಹೋಬಳಿಗಳಿಗೆ ಸರ್ಕಾರಿ ವಸತಿ ಶಾಲೆಗಳನ್ನು ಮಂಜೂರು ಮಾಡಿದ್ದು ಇದರಲ್ಲಿ ಕೊಡಗು ಜಿಲ್ಲೆಯ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ, ಸಂಪಾಜೆ, ಅಮ್ಮತ್ತಿ, ಹುದಿಕೇರಿ ಹೋಬಳಿಗಳಲ್ಲಿ ನಿಯಮಾನುಸಾರ ವಸತಿ ಶಾಲೆಗಳನ್ನು ಆರಂಭಿಸಲು ಆದೇಶ ಹೊರಡಿಸಲಾಗಿದೆ.