https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಮೇ1 ರಂದು ಮೂರ್ನಾಡಿನಲ್ಲಿ ಕೊಡಗು ಹೆಗ್ಗಡೆ ಸಮಾಜ ಕ್ರೀಡೋತ್ಸವಕ್ಕೆ ಚಾಲನೆ…

ಮೇ1 ರಂದು ಮೂರ್ನಾಡಿನಲ್ಲಿ ಕೊಡಗು ಹೆಗ್ಗಡೆ ಸಮಾಜ ಕ್ರೀಡೋತ್ಸವಕ್ಕೆ ಚಾಲನೆ…

News, Informatin , Enteetinement and Advertisement
25/04/202525/04/2025nadubadenews@gmail.comLeave a Comment on ಮೇ1 ರಂದು ಮೂರ್ನಾಡಿನಲ್ಲಿ ಕೊಡಗು ಹೆಗ್ಗಡೆ ಸಮಾಜ ಕ್ರೀಡೋತ್ಸವಕ್ಕೆ ಚಾಲನೆ…
Spread the love
ಮೇ1 ರಂದು ಮೂರ್ನಾಡಿನಲ್ಲಿ ಕೊಡಗು ಹೆಗ್ಗಡೆ ಸಮಾಜ ಕ್ರೀಡೋತ್ಸವಕ್ಕೆ ಚಾಲನೆ…

ಬುಟ್ಟಂಗಾಲ, ಏ.25: ಕೊಡಗು ಹೆಗ್ಗಡೆ ಸಮಾಜದ ಕ್ರೀಡೋತ್ಸವವು ಮೇ 1ರಿಂದ 3 ರವರಗೆ  ಜೂನಿಯರ್ ಕಾಲೇಜ್ ಮೂರ್ನಾಡಿನ ಬಾಚೆಟ್ಟಿರ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ  ನಡೆಯಲಿದ್ದು ಮೂರು ದಿನ ನಡೆಯುವ  ಈ ಕ್ರೀಡಾಕೂಟದಲ್ಲಿ ಕ್ರಿಕೆಟ್, ಪುರಷರು ಮತ್ತು ಮಹಿಳಾ ವಿಭಾಗಕ್ಕೆ ಪ್ರತ್ಯೇಕ ಹಗ್ಗ ಜಗ್ಗಾಟ,ಮಹಿಳೆಯರಿಗೆ ಥ್ರೋಬಾಲ್ ಪಂದ್ಯಗಳು ನಡೆಯಲಿದೆ.

     ಮೇ 1 ರಂದು ಪೂರ್ವಾಹ್ನ 10.30ಗಂಟೆಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಮತ್ತು ಶಾಸಕರಾದ ಅಜ್ಜಿಕುಟ್ಟೀರ ಪೂನ್ನಣನವರು ಚಾಲನೆ ನೀಡಲಿದ್ದು ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅಥಿತಿಗಳಾಗಿ ವಿಶ್ರಾಂತ ಕುಲಪತಿಗಳಾದ ಡಾ.ಪಡಿಞಾರಂಡ ಚಂಗಪ್ಪನವರು ಭಾಗವಹಿಸುತಿದ್ದು  ಅಧ್ಯಕ್ಷತೆಯನ್ನು ಕೊಡಗು ಹೆಗ್ಗಡೆ ಸಮಾಜದ ಅಧ್ಯಕ್ಷರಾದ  ಕೊರಕುಟ್ಟೀರ ಸರಾ ಚಂಗಪ್ಪನವರು ವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಪೋಲೀಸ್ ಇಲಾಖೆಯಲ್ಲಿ ಉತ್ತಮ ಸೇವೆಗೆ ಮುಖ್ಯಮಂತ್ರಿಗಳ ಪದಕ ಪಡೆದ ಇಬ್ಬರು ಪೋಲಿಸ್ ಸಬ್ ಇನ್ಸ್‌ಪೆಕ್ಟರ್‌ ತುದಿಮಾಡ ಸವಿ ಲೋಕೇಶ್ ಮತ್ತು ಚಂಗಚಂಡ ನಿತಿನ್ ಮಾಚಯ್ಯ ನವರನ್ನು ಹಾಗು ಅಗ್ನಿ ಶಾಮಕ ದಳದಲ್ಲಿ ವಿಪ್ಪತ್ತು ನಿರ್ವಾಹಣಾ ಸೇವೆಯಲ್ಲಿನ ಅಪ್ರತಿಮ ಶೌರ್ಯಕ್ಕೆ ಮುಖ್ಯಮಂತ್ರಿಗಳ ಪದಕ ಪಡೆದ  ಮಚ್ಚಂಡ ನಂಜಪ್ಪನವರನ್ನು ಸನ್ಮಾನಿಸಲಾಗುವುದು. ಕ್ರೀಡೋತ್ಸವದ ಫೖನಲ್ ಪಂದ್ಯಗಳು ಮೇ 3ರಂದು ಅಪರಾಹ್ನ 2.30 ಕ್ಕೆ ನಡೆಯಲಿದೆ.

      ಸಮಾರೋಪ ಸಮಾರಂಭದಲ್ಲಿ ಕರಾಟೆಪಟು ಮಾಜಿ ವಿಧಾನಪರಿಷತ್ ಸದಸ್ಯರಾದ ಚೆಪ್ಪುಡೀರ ಅರುಣ್ ಮಾಚಯ್ಯ, ಕೊಡಗು ಹೆಗ್ಗಡೆ ಸಮಾಜದ ಮಾಜಿ ಅಧ್ಯಕ್ಷರಾದ ಪಡಿಞರಂಡ ಅಯ್ಯಪ್ಪ, ಕ್ರಿಕೆಟ್ ವಿಜೇತ ತಂಡಕ್ಕೆ ಟ್ರೋಪಿ ಪ್ರಯೋಜಕರಾದ  ಕೊಪ್ಪಡ ಪಟ್ಟು ಪಳಂಗಪ್ಪ, ಕೊಡಗು ಹೆಗ್ಗಡೆ ಸಮಾಜದ ಕಾರ್ಯದರ್ಶಿ ಪಡಿಞರಂಡ ಪ್ರಭುಕುಮಾರ್‌ರವರು ಉಪಸ್ಥಿತರಿರಲಿದ್ದು, ಕೊಡಗು ಹೆಗ್ಗಡೆ ಸಮಾಜದ ಅಧ್ಯಕ್ಷರಾದ ಕೊರಕುಟ್ಟೀರ ಸರ ಚಂಗಪ್ಪನವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಕ್ರೀಡಾಕೂಟ ತಾಂತ್ರಿಕ ಮುಖ್ಯಸ್ಥರಾದ ಪಂದಿಕಂಡ ನಾಗೇಶ್ ರವರೊಂದಿಗೆ ಸಮಾಜದ ಉಪಾದ್ಯಕ್ಷರಾದ ಚರ್ಮಂಡ ಪೂವಯ್ಯ, ಕೊಂಗೆಪ್ಪಂಡ ಕುಟ್ಟಪ್ಪ, ಪಂದಿಕಂಡ ಸುನಂಧ,ತೊರೇರ ಉಮೇಶ್, ಚಂಗಚಂಡ ಶಮಿ, ಪಡಿಞರಂಡ ರಾಖೇಶ್,  ,ಕೊಂಗೆಪಂಡ ಅರುಣ್, ಪಡಿಞರಂಡ ಗಿರೀಶ್, ಕಾಕೇರ ರವಿ. ಕ್ರೀಡಾ ಸಮಿತಿಯಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. ಶೖಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪ್ರತಿಭಾವಂತ ವಿಧ್ಯಾರ್ಥಿಗಳ ಅಯ್ಕೆ ಸಮಿತಿಯಲ್ಲಿ ಪಾನಿಕುಟ್ಟಿರ ರಾಧ ಕುಟ್ಟಪ್ಪ ಮತ್ತು ತೊರೇರ ರಾಜ ಪೂವಯ್ಯ ಕಾರ್ಯ ನಿರ್ವಹಿಸಲಿದ್ದಾರೆ . ವ್ಯವಸ್ಥೆ ದೃಷ್ಟಿಯಲ್ಲಿ ಸಮಾಜದ ಗೌರವ ಕೋಶಾಧ್ಯಕ್ಷರಾದ ಕೊರಂಡ ಪ್ರಕಾಶ್ ನಾಣಯ್ಯ, ನಿರ್ದೆಶಕರುಗಳಾದ ತೊರೇರ ಮುದ್ದಯ್ಯ, ತಂಬಂಡ ಮಂಜುನಾಥ್, ಪಂದಿಕಂಡ ದಿನೇಶ್, ಕೊಕ್ಕೇರ ಜಗನಾಥ್, ಚಳಿಯಂಡ ಕಮಲಾ ಉತ್ತಯ್ಯ, ಮೂರೀರ ಶಾಂತಿ ಬೆಳ್ಳಿಯಪ್ಪ, ಪೊಟ್ಟಂಡ ವಸಂತಿ ಗಣೇಶ್, ಕೊಂಗೆಪ್ಪಂಡ ರವಿ, ಮೂರೀರ ಕುಶಾಲಪ್ಪ, ಮಳ್ಳಡ ಸುಥಾ ಮತ್ತಿತರನ್ನು ಒಳಗೊಂಡಂತೆ ವಿವಿಧ ಸಮಿತಿಗಳನ್ನು ರಚಿಸಲಾಗಿದೆ ಎಂದು  ಸಮಾಜದ ಪ್ರಕಟಣೆ ತಿಳಿಸಿದೆ.

Post navigation

ಮುದ್ದಂಡ ಕಪ್ ಹಾಕಿ ನಮ್ಮೆಯಲ್ಲಿ 1975 ವಿಶ್ವಕಪ್ ವಿಜೇತ ಬಿ.ಪಿ.ಗೋವಿಂದ ಅವರಿಗೆ ಗೌರವ …
ಉಳ್ಳಿಯಡ ಡಾಟಿ ಪೂವಯ್ಯ ಅಯಿಂಗಡ ನಾಡ್‌ಲ್‌ ನಾಳ್…

Related Posts

ಎಲ್ಲಾ ದಾಖಲೆನ ಪೊಡಿ ತಟ್ಟ್‌ನ ಮುದ್ದಂಡ ಕಪ್‌ ಹಾಕಿ:  ಒಟ್ಟು 396 ಒಕ್ಕ ದಾಖಲ್‌.

ಎಲ್ಲಾ ದಾಖಲೆನ ಪೊಡಿ ತಟ್ಟ್‌ನ ಮುದ್ದಂಡ ಕಪ್‌ ಹಾಕಿ:  ಒಟ್ಟು 396 ಒಕ್ಕ ದಾಖಲ್‌.

19/03/202519/03/2025nadubadenews@gmail.com
ಅಮಿತ್‌ ಶಾರಿಂದ ಗೌರವ ಸ್ವೀಕರಿಸಿದ  CRPF ಕಮಾಂಡರ್ ಕೊಡಗಿನ ಆದರ್ಶ್  ಶಾಸ್ತ್ರಿ

ಅಮಿತ್‌ ಶಾರಿಂದ ಗೌರವ ಸ್ವೀಕರಿಸಿದ  CRPF ಕಮಾಂಡರ್ ಕೊಡಗಿನ ಆದರ್ಶ್  ಶಾಸ್ತ್ರಿ

19/04/202519/04/2025nadubadenews@gmail.com
ಪಂಚಾಯತ್  ರಾಜ್ ಇಲಾಖೆ ಚಳಿ ಬಿಡಿಸಿದ ಶಾಸಕ ಪೊನ್ನಣ್ಣ

ಪಂಚಾಯತ್ ರಾಜ್ ಇಲಾಖೆ ಚಳಿ ಬಿಡಿಸಿದ ಶಾಸಕ ಪೊನ್ನಣ್ಣ

20/06/202520/06/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version