ಮಡಿಕೇರಿ, ಏ.21:- ಕೊಡವ ಕೌಟುಂಬಿಕ ಬೆಳ್ಳಿ ಹಬ್ಬದ ಹಾಕಿ ನಮ್ಮೆಯಲ್ಲಿ, ಇಂದಿನಿಂದ ಪ್ರಾರಂಭವಾದ ಮಹಿಳಾ ಪೈಪೋಟಿಯಲ್ಲಿ, ತಾತಂಡ ಮತ್ತು ಪಾಂಡಿರ (ಹೆಬ್ಬೆಟ್ಟಗೇರಿ) ನಡುವಿನ ಪಂದ್ಯದಲ್ಲಿ 3-0 ಗೋಲುಗಳ ಅಂತರದಲ್ಲಿ ಪಾಂಡಿರ ತಂಡ ಗೆಲುವು ಸಾಧಿಸಿತು. ಪಾಂಡಿರ ಪರ ಕವಿತಾ ಮಂಜು ಹ್ಯಾಟ್ರಿಕ್ ಗೋಲು ದಾಖಲಿಸಿ, ಗಮನ ಸೆಳೆದರು. ತಾತಂಡ ಅನೂರ ಸೋಮಯ್ಯ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಕಾಂಡಂಡ ಮತ್ತು ಬೊವ್ವೇರಿಯಂಡ ನಡುವಿನ ಪಂದ್ಯದಲ್ಲಿ 1-0 ಗೋಲುಗಳ ಅಂತರದಲ್ಲಿ ಕಾಂಡಂಡ ಜಯ ಸಾಧಿಸಿತು. ಕಾಂಡಂಡ ಪರ ಕೀರ್ತನ 1 ಗೋಲು ದಾಖಲಿಸಿದರು. ಬೊವ್ವೇರಿಯಂಡ ರಿಯಾ ಮುತ್ತಮ್ಮ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಚೆಪ್ಪುಡಿರ ಮತ್ತು ಪಳೆಯಂಡ ನಡುವಿನ ಪಂದ್ಯದಲ್ಲಿ 4-1 ಗೋಲುಗಳ ಅಂತರದಲ್ಲಿ ಚೆಪ್ಪುಡಿರ ಗೆಲುವು ದಾಖಲಿಸಿತು. ಚೆಪ್ಪುಡಿರ ಪರ ಸಿಂಚಲ್ ಎಲ್ಲಾ 4 ಗೋಲು ಬಾರಿಸಿ ಗಮನ ಸೆಳೆದರು. ಪಳೆಯಂಡ ರೇಖಾ 1 ಗೋಲು ದಾಖಲಿಸಿದರು. ಪಳೆಯಂಡ ರೇಖಾ ದೇಚಮ್ಮ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಮಾಳೇಟಿರ (ಕೆದಮುಳ್ಳೂರು) ಮತ್ತು ಅಮ್ಮಾಟಂಡ ನಡುವಿನ ಪಂದ್ಯದಲ್ಲಿ ವಾಕ್ ಒವರ್ನಲ್ಲಿ ಮಾಳೇಟಿರ ತಂಡ ಮುಂದಿನ ಸುತ್ತಿಗೆ ಅರ್ಹತೆ ಪಡೆಯಿತು.
ಮುಕ್ಕಾಟಿರ (ಹರಿಹರ) ಮತ್ತು ಕೇಚೇಟಿರ ನಡುವಿನ ಪಂದ್ಯದಲ್ಲಿ ನಿಗದಿತ ಅವಧಿಯಲ್ಲಿ ಎರಡೂ ತಂಡಗಳು ತಲಾ 1 ಗೋಲು ದಾಖಲಿಸಿದ ಹಿನ್ನೆಲೆ ಟೈ ಬ್ರೇಕರ್ನಲ್ಲಿ 1-0 ಗೋಲುಗಳ ಅಂತರದಲ್ಲಿ ಕೇಚೇಟಿರ ಜಯ ಸಾಧಿಸಿತು. ಕೇಚೇಟಿರ ತೆಜಶ್ವಿ ದೇವಯ್ಯ ಹಾಗೂ ಮುಕ್ಕಾಟಿರ ಅಂಜನ ತಲಾ 1 ಗೋಲು ದಾಖಲಿಸಿದರು. ಮುಕ್ಕಾಟಿರ ನಿಲನ್ ಪೂಣಚ್ಚ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಬಿದ್ದಾಟಂಡ ಮತ್ತು ಚೋಯಮಾಡಂಡ ನಡುವಿನ ಪಂದ್ಯದಲ್ಲಿ 3-0 ಗೋಲುಗಳ ಅಂತರದಲ್ಲಿ ಚೋಯಮಾಡಂಡ ತಂಡ ಗೆಲುವು ದಾಖಲಿಸಿತು. ಚೋಯಮಾಡಂಡ ಪರ ಅನಿತಾ ಪೂಣಚ್ಚ 2 ಹಾಗೂ ಧನ್ವಿ 1 ಗೋಲು ದಾಖಲಿಸಿದರು. ಬಿದ್ದಾಟಂಡ ತ್ರಿಶಾಲಿ ತಂಗಮ್ಮ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಕೊಟ್ಟಂಗಡ ಮತ್ತು ನಾಪಂಡ ನಡುವಿನ ಪಂದ್ಯದಲ್ಲಿ 5-0 ಗೋಲುಗಳ ಅಂತರದಲ್ಲಿ ನಾಪಂಡ ತಂಡ ಜಯ ಸಾಧಿಸಿತು. ನಾಪಂಡ ಪರ ಸೌಮ್ಯ 5 ಗೋಲುಗಳನ್ನು ಬಾರಿಸಿ ಕ್ರೀಡಾ ಪ್ರೇಮಿಗಳ ಚಪ್ಪಳೆ ಗಿಟ್ಟಿಸಿಕೊಂಡರು. ಕೊಟ್ಟಂಗಡ ಇಂಚು ಮುತ್ತಮ್ಮ ಪ್ಲೇಯರ್ ಆಫ್ ಮ್ಯಾಚ್ ಪ್ರಶಸ್ತಿ ಪಡೆದರು.
ಚಂದಂಗಡ ಮತ್ತು ಕುಪ್ಪಂಡ (ಕೈಕೇರಿ) ನಡುವಿನ ಪಂದ್ಯದಲ್ಲಿ ವಾಕ್ ಒವರ್ನಲ್ಲಿ ಕುಪ್ಪಂಡ ತಂಡ ಮುಂದಿನ ಸುತ್ತಿಗೆ ಅರ್ಹತೆ ಪಡೆಯಿತು.
ಮಾಚಿಮಂಡ ಮತ್ತು ಚೇಂದಿರ ನಡುವಿನ ಪಂದ್ಯದಲ್ಲಿ 2-1 ಗೋಲುಗಳ ಅಂತರದಲ್ಲಿ ಚೇಂದಿರ ತಂಡ ಜಯ ಸಾಧಿಸಿತು. ಚೇಂದಿರ ಪರ ನಿಶಿಕ್ ಹಾಗೂ ಪ್ರಿಯ ತಲಾ 1 ಗೋಲು ದಾಖಲಿಸಿದರು. ಮಾಚಿಮಂಡ ಸಚಿತ 1 ಗೋಲು ಬಾರಿಸಿದರು. ಮಾಚಿಮಂಡ ದಮಯಂತಿ ಅಪ್ಪಯ್ಯ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಚೌರಿರ (ಹೊದವಾಡ) ಮತ್ತು ಮನೆಯಪಂಡ ನಡುವಿನ ಪಂದ್ಯದಲ್ಲಿ 6-0 ಗೋಲುಗಳ ಅಂತರದಲ್ಲಿ ಚೌರಿರ ತಂಡ ಜಯ ಸಾಧಿಸಿತು. ಚೌರಿರ ಪರ ದಮಯಂತಿ 4, ಧನ್ಯ ಹಾಗೂ ದ್ವಿತ ತಲಾ 1 ಗೋಲು ದಾಖಲಿಸಿದರು. ಮನೆಯಪಂಡ ಶಿಪ್ನ ಕಾಳಪ್ಪ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಮೇವಡ ಮತ್ತು ಕಾಯಪಂಡ ನಡುವಿನ ಪಂದ್ಯದಲ್ಲಿ ಸಡನ್ ಡೆತ್ನಲ್ಲಿ 1-0 ಗೋಲುಗಳ ಅಂತರದಲ್ಲಿ ಮೇವಡ ತಂಡ ಜಯ ಸಾಧಿಸಿತು. ಮೇವಡ ಪರ ಅನಿತ್ರಿ ಪೂವಮ್ಮ 1 ಗೋಲು ದಾಖಲಿಸಿದರು. ಕಾಯಪಂಡ ರಶ್ಮ ಬೋಪಣ್ಣ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಮುರುವಂಡ ಮತ್ತು ಅಚ್ಚಪಂಡ ನಡುವಿನ ಪಂದ್ಯದಲ್ಲಿ 3-0 ಗೋಲುಗಳ ಅಂತರದಲ್ಲಿ ಅಚ್ಚಪಂಡ ತಂಡ ಗೆಲುವು ಸಾಧಿಸಿತು. ಅಚ್ಚಪಂಡ ಪರ ಪೆರ್ಲಿನ್ ಪೊನ್ನಮ್ಮ ಹ್ಯಾಟ್ರಿಕ್ ಗೋಲು ದಾಖಲಿಸಿದರು. ಮುರುವಂಡ ಮೋನಿಕಾ ವಿಲಿನ್ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ತೆಕ್ಕಡ ಮತ್ತು ಕುಟ್ಟಂಡ (ಕಾರ್ಮಾಡ್) ನಡುವಿನ ಪಂದ್ಯದಲ್ಲಿ 1-0 ಗೋಲುಗಳ ಅಂತರದಲ್ಲಿ ತೆಕ್ಕಡ ಜಯ ಸಾಧಿಸಿತು. ತೆಕ್ಕಡ ಪರ ಪ್ರನಿತ್ ಪೂವಮ್ಮ 1 ಗೋಲು ದಾಖಲಿಸಿದರು. ಕುಟ್ಟಂಡ ಮಾನ್ಯ ಪೆಮ್ಮಯ್ಯ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಬಲ್ಲಂಡ ಮತ್ತು ಚೇನಂಡ ನಡುವಿನ ಪಂದ್ಯದಲ್ಲಿ 3-0 ಗೋಲುಗಳ ಅಂತರದಲ್ಲಿ ಚೇನಂಡ ಜಯ ಸಾಧಿಸಿತು. ಚೇನಂಡ ಪರ ರಕ್ಷ ಹ್ಯಾಟ್ರಿಕ್ ಗೋಲು ದಾಖಲಿಸಿದರು. ಬಲ್ಲಂಡ ತನಿಶ್ ತಂಗಮ್ಮ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಕುಟ್ಟಂಡ (ಮಾದಾಪುರ) ಮತ್ತು ಬೈರಾಜಂಡ ನಡುವಿನ ಪಂದ್ಯದಲ್ಲಿ ಸಡನ್ ಡೆತ್ನಲ್ಲಿ 1-0 ಗೋಲುಗಳ ಅಂತರದಲ್ಲಿ ಕುಟ್ಟಂಡ ತಂಡ ಜಯ ಸಾಧಿಸಿತು. ಬೈರಾಜಂಡ ಭವನಿ ಬೆಳ್ಯಪ್ಪ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಪರದಂಡ ಮತ್ತು ಪಾಲಂದಿರ ನಡುವಿನ ಪಂದ್ಯದಲ್ಲಿ 2-1 ಗೋಲುಗಳ ಅಂತರದಲ್ಲಿ ಪರದಂಡ ಗೆಲುವು ಸಾಧಿಸಿತು. ಪರದಂಡ ಪರ ರೂಪ ಹಾಗೂ ಪವಿತ್ರ ತಲಾ 1 ಗೋಲು ದಾಖಲಿಸಿದರು. ಪಾಲಂದಿರ ಪೂರ್ಣ 1 ಗೋಲು ಬಾರಿಸಿದರು. ಪಾಲಂದಿರ ಗೀತಾ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.