https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಮುದ್ದಂಡ ಕಪ್ : ಚಾಲನೆಗೊಂಡ ಮಹಿಳಾ ಹಾಕಿ…

ಮುದ್ದಂಡ ಕಪ್ : ಚಾಲನೆಗೊಂಡ ಮಹಿಳಾ ಹಾಕಿ…

News, Informatin , Enteetinement and Advertisement
21/04/202521/04/2025nadubadenews@gmail.comLeave a Comment on ಮುದ್ದಂಡ ಕಪ್ : ಚಾಲನೆಗೊಂಡ ಮಹಿಳಾ ಹಾಕಿ…
Spread the love
ಮುದ್ದಂಡ ಕಪ್ : ಚಾಲನೆಗೊಂಡ ಮಹಿಳಾ ಹಾಕಿ…

ಮಡಿಕೇರಿ ಏ.21 : ಕೊಡವ ಕುಟುಂಬಗಳ ನಡುವಿನ ಹಾಕಿ ಪಂದ್ಯಾವಳಿಯ ಬೆಳ್ಳಿಮಹೋತ್ಸವದ ಸಂಭ್ರಮದ ಹಿನ್ನೆಲೆಯಲ್ಲಿ ಮುದ್ದಂಡ ಕಪ್ ಹಾಕಿ ಉತ್ಸವದಲ್ಲಿ ಮಹಿಳಾ ತಂಡಗಳ ನಡುವೆ ಹಾಕಿ ಪಂದ್ಯಾವಳಿಯ ಪೈಪೋಟಿ ಆರಂಭಗೊಂಡಿದೆ. ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಮಹಿಳೆಯರ 5ಎ ಸೈಡ್ ಹಾಕಿ ಪಂದ್ಯಾವಳಿಗೆ ಅರ್ಜುನ ಪ್ರಶಸ್ತಿ ವಿಜೇತ, ಮಾಜಿ ಒಲಂಪಿಯನ್ ಎಂ.ಎಂ.ಸೋಮಯ್ಯ ಅವರು ಚಾಲನೆ ನೀಡಿದರು.

     ಪದ್ಮಶ್ರೀ ಪ್ರಶಸ್ತಿ ವಿಜೇತ ಹಿರಿಯ ಕಲಾವಿದೆ ಐಮುಡಿಯಂಡ ರಾಣಿ ಮಾಚಯ್ಯ ಹಾಗೂ ರಾಷ್ಟ್ರೀಯ ಬಾಸ್ಕೆಟ್‌ಬಾಲ್ ಆಟಗಾರ್ತಿ ಮಂಡೇಪಂಡ ಪುಷ್ಪ ಕುಟ್ಟಣ್ಣ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ,ಮಾತನಾಡಿದ ಐಮುಡಿಯಂಡ ರಾಣಿ ಮಾಚಯ್ಯ ಅವರು, ಜಿಲ್ಲೆಯಲ್ಲಿ ನಡೆಯುತ್ತಿರುವ ಈ ರೀತಿಯ ಕ್ರೀಡಾಕೂಟಗಳು ಕ್ರೀಡಾ ಪ್ರತಿಭೆಗಳ ಅನಾವರಣಕ್ಕೆ ಉತ್ತಮ ವೇದಿಕೆಯಾಗಿದೆ. ಹಾಕಿ ಒಲಂಪಿಯನ್‌ಗಳನ್ನು ಕೊಡುಗೆಯಾಗಿ ನೀಡಿದ ಹೆಗ್ಗಳಿಕೆ ಕೊಡಗಿಗೆ ಇದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳಾ ಕ್ರೀಡಾಪಟಗಳು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಲಿ ಎಂದು ಶುಭ ಹಾರೈಸಿದರು.

  ಮುದ್ದಂಡ ಕಪ್ ಹಾಕಿ ಉತ್ಸವ ಸಮಿತಿಯ ಅಧ್ಯಕ್ಷ ಮುದ್ದಂಡ ರಶಿನ್ ಸುಬ್ಬಯ್ಯ, ಕಾರ್ಯದರ್ಶಿ ಮುದ್ದಂಡ ಆದ್ಯ ಪೂವಣ್ಣ, ಉಪಾಧ್ಯಕ್ಷ ಡೀನ್ ಬೋಪಣ್ಣ, ಮುದ್ದಂಡ ಒಕ್ಕದ ಪ್ರಮುಖರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Post navigation

ಐದು ಲಕ್ಷ ವಲಸೆ ಕಾರ್ಮಿಕರಲ್ಲಿ  ಕೇವಲ 46000 ಮಾತ್ರ ನೋಂದಣಿ : ತಲೆ ಕೆಡಿಸಿ ಕೊಂಡ ಇಲಾಖೆ…
ಮುದ್ದಂಡ ಕಪ್ ಹಾಕಿ ಉತ್ಸವ : ಏ.21 ರಂದು ನಡೆದ ಪಂದ್ಯಾವಳಿ ವಿಜೇತರು

Related Posts

ರಾಜಕೀಯ ಏರಿಳಿತದ ಲೆಕ್ಕಚಾರದತ್ತ ಕೊಡಗು ವಿವಿ ಸಂಚಲನ, ಹರಣವಾಗದಿರುವುದೇ ನಮ್ಮ ಸ್ವಾಭಿಮಾನ…!!!

ರಾಜಕೀಯ ಏರಿಳಿತದ ಲೆಕ್ಕಚಾರದತ್ತ ಕೊಡಗು ವಿವಿ ಸಂಚಲನ, ಹರಣವಾಗದಿರುವುದೇ ನಮ್ಮ ಸ್ವಾಭಿಮಾನ…!!!

28/03/202528/03/2025nadubadenews@gmail.com
ಕಟ್ಟೆ ಮಾಡ್ ಶ್ರೀ ಮಾದೇವ ದೇವಾಲಯಕ್ಕೆ ಸಾಂಪ್ರದಾಯಿಕ  ಉಡುಗೆ ಧರಿಸಿ ತೆರಳಲು ಹೈ ಕೋರ್ಟ್ ಮಧ್ಯಂತರ ಆದೇಶ.

ಕಟ್ಟೆ ಮಾಡ್ ಶ್ರೀ ಮಾದೇವ ದೇವಾಲಯಕ್ಕೆ ಸಾಂಪ್ರದಾಯಿಕ  ಉಡುಗೆ ಧರಿಸಿ ತೆರಳಲು ಹೈ ಕೋರ್ಟ್ ಮಧ್ಯಂತರ ಆದೇಶ.

12/02/202512/02/2025nadubadenews@gmail.com
ಮಾರ್ಚ್‌ 13ಕ್‌, ಇಗ್ಗುತಪ್ಪಂಡ ಕುಂಬ್ಯಾರ್‌  ಕಲಾಡ್ಚ…

ಮಾರ್ಚ್‌ 13ಕ್‌, ಇಗ್ಗುತಪ್ಪಂಡ ಕುಂಬ್ಯಾರ್‌  ಕಲಾಡ್ಚ…

28/02/202528/02/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version