
ಮಡಿಕೇರಿ, ಏ.20: ಮುದ್ದಂಡ ಕಪ್ ಹಾಕಿ ಉತ್ಸವದಲ್ಲಿ ಕಳೆದ ಒಂದು ತಿಂಗಳಿನಿಂದ ನಡೆಯುತ್ತಿರುವ ರಸ ಪ್ರಶ್ನೆ ಸ್ಪರ್ಧೆ “ಕೊಡವ ಚೋದ್ಯ” ಸ್ಪರ್ಧೆಯ ಅಂತಿಮ ಸುತ್ತು ಇಂದು ನಡೆಯಿತು.
ಸ್ಪರ್ಧೆಯ ಮೊದಲಿಗೆ 35 ತಂಡಗಳು ಸ್ಪರ್ಧಿಸಿದ್ದು, ಒಂದು ತಂಡದಲ್ಲಿ 3 ಮಂದಿ ಪಾಲ್ಗೊಳ್ಳುವ ಅವಕಾಶ ಇತ್ತು. ಅಂತಿಮ ಸುತ್ತಿಗೆ ಶಾಂತೆಯಂಡ, ಚೀಯಕಪೂವಂಡ, ಅಮ್ಮಣಿಚಂಡ, ಓಡಿಯಂಡ (ಸೂರ್ಲಬ್ಬಿ), ಕುಪ್ಪಂಡ (ಕೈಕೇರಿ), ಪೆಮ್ಮಡಿಯಂಡ ಸೇರಿದಂತೆ ಆರು ತಂಡಗಳು ಆಯ್ಕೆಯಾಗಿದ್ದು, ಅಂತಿಮ ಆರು ಸುತ್ತಿನ ಸ್ಪರ್ಧೆಯಲ್ಲಿ ಕುಪ್ಪಂಡ (ಕೈಕೇರಿ) ತಂಡ 150 ಅಂಕ ಪಡೆಯುವ ಮೂಲಕ ಮೊದಲನೇ ಸ್ಥಾನ ಪಡೆದುಕೊಂಡರೆ, ಪೆಮ್ಮಡಿಯಂಡ ತಂಡ 110 ಅಂಕಗಳೊಂದಿಗೆ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು. ಅಮ್ಮಣಿಚಂಡ ತಂಡ 100 ಅಂಕ ಪಡೆಯುವ ಮೂಲಕ ತೃತೀಯ ಸ್ಥಾನ ಪಡೆದುಕೊಂಡಿತು.
ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಬೋಪಣ್ಣ, ಮುದ್ದಂಡ ಹಾಕಿ ಉತ್ಸವ ಸಮಿತಿಯ ಅಧ್ಯಕ್ಷ ಮುದ್ದಂಡ ರಶಿನ್ ಸುಬ್ಬಯ್ಯ ಹಾಗೂ ವಿರಾಜಪೇಟೆ ಕೊಡವ ಸಮಾಜದ ಗೌರವ ಕಾರ್ಯದರ್ಶಿ ಮಾಳೇಟಿರ ಶ್ರೀನಿವಾಸ್ ಉದ್ಘಾಟಿಸಿದ ಈ ಸ್ಪರ್ಧೆಯನ್ನು ಕ್ವಿಝ್ ಮಾಸ್ಟರ್ ಬೊಳ್ಳೆರ ಪೃಥ್ವಿ ಪೂಣಚ್ಚ, ಪಟ್ಟಮಾಡ ಪ್ರೀತ್ ಚಿಣ್ಣಪ್ಪ ನಡೆಸಿಕೊಟ್ಟರು. ಸ್ಪರ್ಧಾ ಸಂಚಾಲಕರಾಗಿ ಪುಡಿಯಂಡ ಸುನೀಲ್ ಪೂವಯ್ಯ ಕಾರ್ಯ ನಿರ್ವಹಿಸಿದರೆ, ಸಮಿತಿ ಸದಸ್ಯರುಗಳಾಗಿ ಅಮ್ಮಣಿಚಂಡ ಸುಭಾಷ್ ಕಾರ್ಯಪ್ಪ, ಅಮ್ಮಣಿಚಂಡ ನಿರ್ಜಿತ್ ಕಾರ್ಯಪ್ಪ, ಐಚೆಟ್ಟೀರ ರೋಶನ್ ತಿಮ್ಮಯ್ಯ, ಚೆನ್ನಪಂಡ ದರ್ಶನ್, ನೆರ್ಪಂಡ ನವ್ಯ ಮಂದಪ್ಪ, ಬಲ್ಟಿಕಾಳಂಡ ದಿಶಾ ಹೇಮಾವತಿ, ಮುದ್ದಂಡ ಗ್ರೀಷ್ಮ, ಮಾಚೆಟ್ಟೀರ ಬಿಶನ್ ಚಿಣ್ಣಪ್ಪ ಕಾರ್ಯನಿರ್ವಹಿಸಿದರು. .