https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಕೃಷಿ ಭಾಗ್ಯ ಯೋಜನೆಯಡಿ, ಕ್ಷೇತ್ರ ಬದು, ಕೃಷಿ ಹೊಂಡ, ತಂತಿ ಬೇಲಿ, ಪಾಲಿಥೀನ್‌ ಹೊದಿಕೆ, ಪಂಪ್‌ ಸೆಟ್‌, ತುಂತುರು ನೀರಾವರಿ ಯೋಜನೆಗೆ ಸಹಾಯಧನಕ್ಕೆ ಅರ್ಜಿ ಆಹ್ವಾನ…

ಕೃಷಿ ಭಾಗ್ಯ ಯೋಜನೆಯಡಿ, ಕ್ಷೇತ್ರ ಬದು, ಕೃಷಿ ಹೊಂಡ, ತಂತಿ ಬೇಲಿ, ಪಾಲಿಥೀನ್‌ ಹೊದಿಕೆ, ಪಂಪ್‌ ಸೆಟ್‌, ತುಂತುರು ನೀರಾವರಿ ಯೋಜನೆಗೆ ಸಹಾಯಧನಕ್ಕೆ ಅರ್ಜಿ ಆಹ್ವಾನ…

Uncategorized
03/10/202403/10/2024nadubadenews@gmail.comLeave a Comment on ಕೃಷಿ ಭಾಗ್ಯ ಯೋಜನೆಯಡಿ, ಕ್ಷೇತ್ರ ಬದು, ಕೃಷಿ ಹೊಂಡ, ತಂತಿ ಬೇಲಿ, ಪಾಲಿಥೀನ್‌ ಹೊದಿಕೆ, ಪಂಪ್‌ ಸೆಟ್‌, ತುಂತುರು ನೀರಾವರಿ ಯೋಜನೆಗೆ ಸಹಾಯಧನಕ್ಕೆ ಅರ್ಜಿ ಆಹ್ವಾನ…
Spread the love
ಕೃಷಿ ಭಾಗ್ಯ ಯೋಜನೆಯಡಿ, ಕ್ಷೇತ್ರ ಬದು, ಕೃಷಿ ಹೊಂಡ, ತಂತಿ ಬೇಲಿ, ಪಾಲಿಥೀನ್‌ ಹೊದಿಕೆ, ಪಂಪ್‌ ಸೆಟ್‌, ತುಂತುರು ನೀರಾವರಿ ಯೋಜನೆಗೆ ಸಹಾಯಧನಕ್ಕೆ ಅರ್ಜಿ ಆಹ್ವಾನ…

ಬೆಂಗಳೂರು, ಅ.03 : 2024-25ನೇ ಸಾಲಿನಲ್ಲಿ ಕೃಷಿ ಭಾಗ್ಯ ಯೋಜನೆಯಡಿ ವಿವಿಧ ಘಟಕಗಳ ಸೌಲಭ್ಯ ಪಡೆಯಲು ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.

ಅರ್ಹ ರೈತರು ಅರ್ಜಿಯ ನಮೂನೆಗಳನ್ನ ಸಮೀಪದ ರೈತ ಸಂಪರ್ಕ ಕೇಂದ್ರಗಳಲ್ಲಿ ಪಡೆದು ಅರ್ಜಿ ಸಲ್ಲಿಸಬಹುದು. ರೈತರು ಕನಿಷ್ಟ 1 ಎಕರೆ ಜಮೀನನ್ನು ಹೊಂದಿರಬೇಕು.

ಈ ಯೋಜನೆಯನ್ನು ರೈತರ ಅವಶ್ಯಕತೆಗನುಗುಣವಾಗಿ ಅಚ್ಚು ಕಟ್ಟು ಪ್ರದೇಶವನ್ನು ಒಳಗೊಂಡಂತೆ ಅನುಷ್ಠಾನಗೊಳಿಸಲಾಗುವುದು. ಕ್ಷೇತ್ರಬದು ನಿರ್ಮಾಣಕ್ಕೆ (ಸಾಮಾನ್ಯ ವರ್ಗ 80% ಸಹಾಯಧನ & ಪರಿಶಿಷ್ಟ ಜಾತಿ / ಪರಿಶಿಷ್ಟ ವಂಗಡ ವರ್ಗ 90%), ಕೃಷಿ ಹೊಂಡ (ಸಾಮಾನ್ಯ ವರ್ಗ 80% ಸಹಾಯಧನ & ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ವರ್ಗ 90%), ನೀರು ಇಂಗದಂತೆ ತಡೆಯಲು ಪಾಲಿಥೀನ್ ಹೊದಿಕೆ (ಸಾಮಾನ್ಯ ವರ್ಗ 80% ಸಹಾಯಧನ & ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ವರ್ಗ 90%), ಕೃಷಿ ಹೊಂಡದ ಸುತ್ತಲೂ ತಂತಿ ಬೇಲಿ (ಸಾಮಾನ್ಯ ವರ್ಗ 40% ಸಹಾಯಧನ & ಪರಿಶಿಷ್ಟ ಜಾತಿ / ಪರಿಶಿಷ್ಟ ವಂಗಡ ವರ್ಗ 50%), ಕೃಷಿ ಹೊಂಡದಿಂದ ನೀರು ಎತ್ತಲು ಡಿಸೇಲ್ / ಪೇಟ್ರೋಲ್ ಪಂಪ್‌ಸೆಟ್ (ಸಾಮಾನ್ಯ ವರ್ಗ 80% ಸಹಾಯಧನ & ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ವರ್ಗ 90%),ನೀರನ್ನು ಬೆಳಗೆ ಹಾಯಿಸಲು ಸೂಕ್ಷ್ಮ (ತುಂತುರು / ಹನಿ) ನೀರಾವರಿ (ಎಲ್ಲಾ ವರ್ಗದ ರೈತರಿಗೆ 90%) ಸೌಲಭ್ಯಗಳನ್ನು ನಿಯಮಾನುಸಾರ ನೀಡಲಾಗುವುದು.

ರೈತರು ತಮ್ಮ ಜಮೀನುಗಳಲ್ಲಿ ಕೃಷಿ ಹೊಂಡಗಳನ್ನು ನಿರ್ಮಿಸಿಕೊಂಡು ಮಳೆ ನೀರನ್ನು ಸಂಗ್ರಹಿಸಿ ಬೆಳೆಗಳ ಸಂದಿಗ್ದ ಹಂತದಲ್ಲಿ ರಕ್ಷಣಾತ್ಮಕ ನೀರಾವರಿ ಒದಗಿಸುವುದು ಕೃಷಿ ಭಾಗ್ಯ ಯೋಜನೆಯ ಉದ್ದೇಶವಾಗಿದ್ದು, ಪ್ರತಿಯೊಬ್ಬ ಫಲಾನುಭವಿಗೆ ಮೇಲೆ ತಿಳಿಸಿದ ಎಲ್ಲಾ ಘಟಕಗಳನ್ನು ಕಡ್ಡಾಯವಾಗಿ ಅನುಷ್ಠಾನ ಮಾಡಲಾಗುವುದು. ಎಂದು ಇಲಾಖೆ ತಿಳಿಸಿದೆ.

Post navigation

7 ಅಂತರಾಷ್ಟ್ರೀಯ ಡ್ರಗ್ ಫೆಡ್ಲರ್ ಗಳ ಬಂಧಿಸಿದ ಕೊಡಗು ಪೋಲಿಸರಿಗೆ, ಜಿಲ್ಲೆಯ ಅಭಿನಂದನೆ…       
ಏಲಕ್ಕಿ ಬೆಳೆಗಾರರಿಗೆ ಸಹಾಯಧನಕ್ಕೆ ಅರ್ಜಿ ಆಹ್ವಾನ…

Related Posts

ರಾಷ್ಟ್ರದ್ರೋಹಿ ವಿದ್ಯಾಧರ ಗೌಡ ಪ್ರಕರಣದಲ್ಲಿ ಪೊಲೀಸರ ಕಾರ್ಯ ಕ್ಷಮತೆಯನ್ನು ಅಭಿನಂದಿಸುತ್ತೇವೆ. ಆದರೆ ಪ್ರಕರಣವನ್ನು ಮರು ತನಿಖೆಯೊಂದಿಗೆ, ಆತನ  ಗಡಿಪಾರು ಮಾಡದಿದ್ದರೆ, ಮುಂದೆ ಅಹಿತಕರ ಘಟನೆಗಳಾದರೆ ಇಲಾಖೆಯೆ ಹೊಣೆ: ವಿವಿಧ ಸಂಘಟನೆಗಳ ಹೇಳಿಕೆ…

27/11/202427/11/2024nadubadenews@gmail.com
ನಾಡಿನ ಸಮಸ್ತ ಜನತೆಗೆ, ದೀಪಾವಳಿಯ ಶುಭಾಷಯ ಕೋರಿದವರು…

ನಾಡಿನ ಸಮಸ್ತ ಜನತೆಗೆ, ದೀಪಾವಳಿಯ ಶುಭಾಷಯ ಕೋರಿದವರು…

02/11/202402/11/2024nadubadenews@gmail.com
ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಸೃಷ್ಟಿ, ಕೊಡಗು ಸೇರಿದಂತೆ ವಿವಿದೆಡೆ ಸಾಧಾರಣದಿಂದ ಭಾರೀ ಮಳೆ ಮುನ್ಸೂಚನೆ…

ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಸೃಷ್ಟಿ, ಕೊಡಗು ಸೇರಿದಂತೆ ವಿವಿದೆಡೆ ಸಾಧಾರಣದಿಂದ ಭಾರೀ ಮಳೆ ಮುನ್ಸೂಚನೆ…

13/11/202413/11/2024nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version