
ವಿರಾಜಪೇಟೆ, ಏ.09: ವಿರಾಜಪೇಟೆ ತಾಲೂಕು ವಿವಿಧೋದ್ದೇಶ ಗ್ರಾಮೀಣ ಮಹಿಳಾ ಸಹಕಾರ ಸಂಘ ನಿಯಮಿತ ಗೋಣಿಕೊಪ್ಪಲು ಇದರ ನೂತನ ಅಧ್ಯಕ್ಷರಾಗಿ ಮೀದೇರಿರ ಕವಿತಾ ರಾಮು ಹಾಗು ಉಪಾಧ್ಯಕ್ಷರಾಗಿ ಕೋಳೆರ ಭಾರತಿ ದಿನು ಅವಿರೋಧ ಆಯ್ಕೆಯಾಗಿದ್ದಾರೆ.
ಕಾನೂನು ಸಲಹೆಗಾರರಾಗಿ ಬೊಳ್ಳಚಂಡ ಶೃಂಗ ಸೋಮಣ್ಣ ಸಲಹೆಗಾರರಾಗಿ ಶಂಕರಿ ಪೊನ್ನಪ್ಪ,( ಸ್ಥಾಪಕ ಅಧ್ಯಕ್ಷರು), ಮನೆಯಪಂಡ ಶೀಲಾ ಬೋಪಣ್ಣ, ಮುಲ್ಲೆಂಗಡ ಮದೋಷ ಪೂವಯ್ಯ, ಕದ್ದಣಿಯಂಡ ಹರೀಶ್ ಬೋಪಣ್ಣ ಮುಲ್ಲೆಂಗಡ ರೇವತಿ ಪೂವಯ್ಯ ಅವರುಗಳು ಆಯ್ಕೆ ಆಗಿದ್ದಾರೆ.
ಸಭೆಯಲ್ಲಿ ನಿಕಟ ಪೂರ್ವ ಅಧ್ಯಕ್ಷರಾದ ಕುಲ್ಲೆಟ್ಟಿರ ಪ್ರವೀ ಮಣ್ಣಪ್ಪ, ಉಪಾಧ್ಯಕ್ಷರಾದ ಕಡೆಮಡ ಕುಸುಮ ಜೋಯಪ್ಪ ಸೇರಿದಂತೆ ಪ್ರಮುಖರು ಹಾಜರಿದ್ದರು.