https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button

ಕೊಡವರ ಸಾಧನೆಗೆ ಸರ್ಕಾರಗಳು ಸೇತುವೆಯಾಗಲಿ : ಸಂಸದ ಅಜಯ್‌ಮಾಖೇನ್‌

Uncategorized
09/01/202509/01/2025nadubadenews@gmail.comLeave a Comment on ಕೊಡವರ ಸಾಧನೆಗೆ ಸರ್ಕಾರಗಳು ಸೇತುವೆಯಾಗಲಿ : ಸಂಸದ ಅಜಯ್‌ಮಾಖೇನ್‌
Spread the love

ಬೆಂಗಳೂರು, ಜ.09:  ಪ್ರಪಂಚದಲ್ಲಯೇ ವಿಶಿಷ್ಟ ಸಂಸ್ಕೃತಿಯನ್ನು ಹೊಂದಿರುವ ಕೊಡವರು, ಜನಸಂಖ್ಯೆಯಲ್ಲಿ ಕಡಿಮೆ ಸಂಖ್ಯೆಯಲ್ಲಿದ್ದರೂ, ಸಾಧನೆಯಲ್ಲಿ ಎಲ್ಲರನ್ನೂ ಮೀರಿಸಿದ್ದು, ಇಡೀ ದೇಶವೇ ಹೆಮ್ಮೆ ಪಡುವಂತದ್ದು. ಇವರ ಬೇಡಿಕೆಗಳಿಗೆ ಸರ್ಕಾರಗಳು ಸಮಯೋಚಿತವಾಗಿ ಸ್ಪಂದಿಸುವ ಮೂಲಕ, ಕೊಡವರಿಂದ ಮತ್ತಷ್ಟು ಸಾಧನೆಗೆ ಸಹಕಾರಿಯಾಗಬೇಕು ಎಂದು ರಾಜ್ಯ ಸಭಾಸದಸ್ಯರೂ, ಮಾಜೀ ಕೇಂದ್ರ ಸಚಿವರೂ ಆಗಿರುವ ಅಜಯ್‌ ಮಾಖೇನ್‌ ಹೆಳಿದರು.

          ಇಂದು ಬೆಂಗಳೂರಿನಲ್ಲಿ, ಕುಂಡ್ಯೋಳಂಡ  ಒಕ್ಕದ ಹಾಕಿನಮ್ಮೆಗೆ ಬಿಡುಗಡೆಯಾದ ಅನುದಾನ ವಿತರಣಾ ಸಮಾರಂಭದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಕೊಡವರ ಸಂಖ್ಯೆ ಕಡಿಮೆ ಇರಬಹುದು ಆದರೆ, ಸಾಧನೆಯಲ್ಲಿ ಯಾರಿಗೂ ಕಮ್ಮಿ ಇಲ್ಲ ಎನ್ನುವುದನ್ನು ವಿಶ್ವಕ್ಕೆ ಕೊಡವರು ತೋರಿಸಿದ್ದಾರೆ. ಕೊಡವರ ಸಾಧನೆ ಇಲ್ಲ ಎನ್ನುವ ಕ್ಷೇತ್ರವೇ ಇಲ್ಲ, ಸೈನ್ಯದಿಂದ ಹಿಡಿದು ಕ್ರೀಡೆಯವರೆಗೆ, ಮನರಂಜನೆಯಿಂದ ಹಿಡಿದು ಉದ್ಯಮದವರೆಗೆ, ಶಿಕ್ಷಣದಿಂದ ಹಿಡಿದು ಸೇವೆಯವರೆಗೆ ಕೊಡವ ಹೆಸರು ಛಾಪು ಒತ್ತಿದೆ.ಅದರಲ್ಲೂ ಸರ್ಕಾರಗಳ ಯಾವುದೇ ವಿಷೇಶ ಮಾನ್ಯತೆ, ಅನುದಾನ, ಮೀಸಲಾತಿಯಂತಃ ಸೌಲಭ್ಯಗಳಿಲ್ಲದೆಯೇ ಕೊಡವರ ಸಾಧನೆ ಹೆಚ್ಚಿದೆ. ಇದು ಮಾದರಿ ಎಂದರು.

 ದೂರದ ದೆಹಲಿಯವನಾದರೂ ನಮ್ಮ ಸೈನ್ಯದ ಪಿತಾಮಹರಾದ, ಫಿ,ಮಾ. ಕಾರ್ಯಾಪ್ಪ, ಜ.ತಿಮ್ಮಯ್ಯ ಸೇರಿದಂತೆ ಯೋಧರು  ಮತ್ತು ಕೊಡವ ಕ್ರೀಡಾಪಟಗಳ ಬಗ್ಗೆ ಅರಿವಿತ್ತು, ಆದರೆ ಕೊಡವರ ಇಷ್ಟೊಂದು ಸಾಧನೆಯ ಬಗ್ಗೆ ತಿಳದುಕೊಂಡಿದ್ದು, ಹಾಕಿಯಲ್ಲಿ ಗಿನ್ನೆಸ್‌ ದಾಖಲೆ ಮಾಡಿದಾಗ. ಕೊಡವರ ಒಟ್ಟು ಸ್ಥಿತಿಗತಿ ಬೇಕು ಬೇಡಿಕೆಗಳ ಬಗ್ಗೆ ಮತ್ತಷ್ಟು ಆಸಕ್ತಿ ಬೆಳೆದು ಆಳಕ್ಕೆ ಹೋದಾಗ, ನನಗೆ ಈ ಜನಾಂಗದ ಬಗ್ಗೆ ವಿಷೇಶ ಅಭಿಮಾನ ಬೆಳೆಯಿತು. ಹಾಗಾಗಿಯೇ ತಾನು ಸಂಸತ್ತಿನಲ್ಲಿ ಕೊಡವ ಹಾಕಿಗೆ ಕೇಂದ್ರ ಸ್ರಕಾರವೂ ಅನುದಾನ ನೀಡಬೇಕೆಂದು ಮನವಿ ಮಾಡಿದೆ ಎಂದರು.

ಮುಂದುವರೆದು ಮಾತನಾಡಿದ ಅವರು, ಸರ್ಕಾರದ ಯಾವೂದೇ ಪೂರಕ ಬೆಂಬಲ ಮೀಸಲಾತಿ ಇಲ್ಲದೆಯೇ ಕೊಡವರು ಇಷ್ಟು ಸಾಧನೆ ಮಾಡಿರುವಾಗ, ಸರ್ಕಾರಗಳು ಈ ಜನಾಂಗಕ್ಕೆ ವಿಷೇಶ ಮಾನ್ಯತೆ ನೀಡಿದರೆ ಕೊಡವರು ದೇಶಕ್ಕೆ ಮತ್ತಷ್ಟು ಹೆಮ್ಮೆ ತರುವ ಸಾಧನೆ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಹಾಗಾಗಿ ಸರ್ಕಾರಗಳು ಕೂಡಲೇ ಕೊಡವರ ಎಲ್ಲಾ ಬೇಡಿಕೆಗಳನ್ನೂ ಈಡೇರಿಸಿ, ವಿಶೇಷ ಸ್ಥಾನಮಾನ ನೀಡುವ ಮೂಲಕ, ಕೊಡವ ಸಾಧನೆಯ ಹಾದಿಯ ಸೇತುವೆ ಆಗಬೇಕು. ತಾನೂ ಸದಾ ಕೊಡವರ ಪರ ದ್ವನಿಯಾಗಲಿದ್ದೇನೆ ಎಂದರು.  

Post navigation

ಕೊಡವ ಹಾಕಿನ ಇಂಞಚ್ಚಕೂ ಎತ್ತರಕ್‌ ಕೊಂಡಪೋಪಕ್‌ ಸರ್ಕಾರತ ಒತ್ತಾಸೆ ಉಂಡ್‌, ಕುಂಡ್ಯೋಳಂಡ ಒಕ್ಕಕ್‌ ಓರ್‌ ಕೋಟಿ ಕೊಡ್ತಿತ್‌, ಸಿ.ಎಂ. ಸಿದ್ದರಾಮಯ್ಯ
ಸಮ್ಮಿಲನ, ಸಂಭ್ರಮಕ್ಕಿಂತ ಬಡವರಿಗೆ ನೆರವಾಗೋಣ: ವಿಜಯ ಪ್ರೌಡಶಾಲೆಯ ಹಳೇ ವಿದ್ಯಾರ್ಥಿಗಳ ನಿರ್ಣಯ

Related Posts

ವಿರಾಜಪೇಟೆ ಪುರ ಸಭಾ ಸದಸ್ಯ ಶಭರೀಶ್‌ ಶೆಟ್ಟಿಗೆ ಕರ್ನಾಟಕ ಸೇವಾ ರತ್ನ ಬಿರುದು.

ವಿರಾಜಪೇಟೆ ಪುರ ಸಭಾ ಸದಸ್ಯ ಶಭರೀಶ್‌ ಶೆಟ್ಟಿಗೆ ಕರ್ನಾಟಕ ಸೇವಾ ರತ್ನ ಬಿರುದು.

21/10/202421/10/2024nadubadenews@gmail.com
ಎಡೆಬಿಡದೆ ಕಾಡುವ ಯೂರಿಕ್‌ ಆಸಿಡ್‌, ಬರಲು  ಕಾರಣ ಮತ್ತು  ಪರಿಹಾರಗಳೇನು…

ಎಡೆಬಿಡದೆ ಕಾಡುವ ಯೂರಿಕ್‌ ಆಸಿಡ್‌, ಬರಲು  ಕಾರಣ ಮತ್ತು  ಪರಿಹಾರಗಳೇನು…

27/09/202427/09/2024nadubadenews@gmail.com
ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್ ಅವಾರ್ಡ್‌ 2024ಕ್ಕೆ,  ಹರ್ಡಲ್ಸ್‌ ಪಟು ತೀತರಮಾಡ ಸಿಂಚಲ್ ಕಾವೇರಮ್ಮ ಆಯ್ಕೆ…    

ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್ ಅವಾರ್ಡ್‌ 2024ಕ್ಕೆ,  ಹರ್ಡಲ್ಸ್‌ ಪಟು ತೀತರಮಾಡ ಸಿಂಚಲ್ ಕಾವೇರಮ್ಮ ಆಯ್ಕೆ…  

19/11/202419/11/2024nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version