https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ವಿರಾಜಪೇಟೆ ಕಾವೇರಿ ಕಾಲೇಜಿನಲ್ಲಿ ನಡೆದ ಪೋಷಕ- ಅಧ್ಯಾಪಕರ ಸಭೆ

ವಿರಾಜಪೇಟೆ ಕಾವೇರಿ ಕಾಲೇಜಿನಲ್ಲಿ ನಡೆದ ಪೋಷಕ- ಅಧ್ಯಾಪಕರ ಸಭೆ

Uncategorized
08/01/202508/01/2025nadubadenews@gmail.comLeave a Comment on ವಿರಾಜಪೇಟೆ ಕಾವೇರಿ ಕಾಲೇಜಿನಲ್ಲಿ ನಡೆದ ಪೋಷಕ- ಅಧ್ಯಾಪಕರ ಸಭೆ
Spread the love
ವಿರಾಜಪೇಟೆ ಕಾವೇರಿ ಕಾಲೇಜಿನಲ್ಲಿ ನಡೆದ ಪೋಷಕ- ಅಧ್ಯಾಪಕರ ಸಭೆ

ವಿರಾಜಪೇಟೆ,ಜ.08: (ಅಮ್ಮಂಡ ಅನುಪಮ ತಿಮ್ಮಯ್ಯ) ಕಾವೇರಿ ಪದವಿ ಪೂರ್ವ ಕಾಲೇಜು ವಿರಾಜಪೇಟೆಯಲ್ಲಿ ಪೋಷಕ- ಅಧ್ಯಾಪಕರ ಸಭೆಯನ್ನು ದಿನಾಂಕ 08/01/2025ರ ಬುಧವಾರದಂದು ಕಾಲೇಜಿನ ಸಭಾಂಗಣದಲ್ಲಿ ನಡೆಸಲಾಯಿತು.

ಸಭೆಯ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದ್ದ, ಪ್ರಾಂಶುಪಾಲ ಶ್ರೀ  ಎನ್.ಎಂ ನಾಣಯ್ಯ ಅವರು ಮಾತನಾಡಿ, ವಿದ್ಯಾರ್ಥಿಗಳ ಶೈಕ್ಷಣಿಕ ವಿಕಸನದಲ್ಲಿ ಪೋಷಕರ ಪಾತ್ರ ಮಹತ್ತರವಾದದ್ದು. ವಿದ್ಯಾರ್ಥಿಗಳಿಗೆ ಪರೀಕ್ಷಾ ಸಮಯದಲ್ಲಿ ಹೆಚ್ಚಿನ ಸಮಯವನ್ನು ಓದಿಗೆ ಮೀಸಲಿಡಬೇಕು, ಜೊತೆಗೆ ಮೊಬೈಲ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕೆಂದು ಕಿವಿಮಾತಿನೊಂದಿಗೆ, ಕಾಲೇಜಿನ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು ನೀಡಿದರು.

ಸಭೆಯಲ್ಲಿ ಹಾಜರಿದ್ದ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಸಂಚಾಲಕಿ, ಶ್ರೀಮತಿ ಎಂ.ಪಿ ದಮಯಂತಿ ಅವರು, ವಿದ್ಯಾರ್ಥಿಗಳು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು,  ಪರೀಕ್ಷೆ, ಆಂತರಿಕ  ಮೌಲ್ಯಮಾಪನದ ಬಗ್ಗೆ ಪೋಷಕರಿಗೆ ತಿಳಿಸಿಕೊಟ್ಟರು.

2025-2026ನೇ ಸಾಲಿನ ಶೈಕ್ಷಣಿಕ ವರ್ಷದ ಪೋಷಕ ಮತ್ತು ಅಧ್ಯಾಪಕ  ಸಭೆಯ ನೂತನ ಉಪಾಧ್ಯಕ್ಷರಾಗಿ ಶ್ರೀಮತಿ ಕೃಪಾ ಚಂಗಪ್ಪ  ಹಾಗೂ ಸದಸ್ಯರುಗಳಾಗಿ ಶ್ರೀಮತಿ ಹೆಚ್ ಎನ್. ಶೋಭಾ  ಮತ್ತು ಶ್ರೀ ಪ್ರವೀಣ್ ರವರನ್ನು  ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ಸರ್ವ ಉಪನ್ಯಾಸಕರು, ವಿದ್ಯಾರ್ಥಿಗಳು ಮತ್ತು ಪೋಷಕರು  ಹಾಜರಿದ್ದರು.

ಆರಂಭದಲ್ಲಿ ಕುಮಾರಿ ಹರ್ಷ ಮತ್ತು ತಂಡದವರು ಪ್ರಾರ್ಥಿಸಿದರು. ಸಭೆಯಲ್ಲಿ ಹಾಜರಿದ್ದ ಸರ್ವರನ್ನು ಶಿಕ್ಷಕ ಮತ್ತು ಪೋಷಕ ಸಂಘದ ಸಂಚಾಲಕಿ ಶ್ರೀಮತಿ ಎಂ.ಬಿ. ದೇಚಮ್ಮ  ಸ್ವಾಗತಿವಸಿ, ಉಪನ್ಯಾಸಕಿ ಶ್ರೀಮತಿ ಅನುಪಮತಿಮ್ಮಯ್ಯ ವಂದಿಸಿದರು. ಕಾರ್ಯಕ್ರಮದ  ನಿರೂಪಣೆಯನ್ನು ಉಪನ್ಯಾಸಕಿ ಶ್ರೀಮತಿ ಗಾಯತ್ರಿ   ನೆರವೇರಿಸಿದರು.

Post navigation

ಪ್ರಗತಿ ಸ್ಕೂಲ್‌ ವಿರಾಜಪೇಟೆ, 2025-26ನೇ ಸಾಲಿಗೆ ಪ್ರವೇಶಾತಿ ಆರಂಭ.
ಗೌಡಳ್ಳಿ ಪ್ಯಾಕ್ಸ್‌ ಅಧ್ಯಕ್ಷರಾಗಿ ಹಿರಿಯ ಸಹಕಾರಿ, ಎಸ್.ಬಿ. ಭರತ್‌ಕುಮಾರ್‌ ಆಯ್ಕೆ.

Related Posts

ನಾಳೆಯಿಂದ 70 ವರ್ಷ ಮೇಲ್ಪಟ್ಟವರಿಗೂ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ, ಕೇಂದ್ರ ಸರ್ಕಾರದಿಂದ ಆಯುಷ್ಮಾನ್‌ ಕೊಡುಗೆ…

ನಾಳೆಯಿಂದ 70 ವರ್ಷ ಮೇಲ್ಪಟ್ಟವರಿಗೂ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ, ಕೇಂದ್ರ ಸರ್ಕಾರದಿಂದ ಆಯುಷ್ಮಾನ್‌ ಕೊಡುಗೆ…

29/10/202429/10/2024nadubadenews@gmail.com
ಸಮಸ್ತ ಜನತೆಗೆ ಆಯುಧ ಪೂಜೆ ಮತ್ತು ವಿಜಯ ದಶಮಿಗೆ ಗುಡ್‌ ವೇ ಅಟೆಸ್ಟೇಷನ್ಸ್‌  ಅವರ ಶುಭಾಷಯಗಳು…

ಸಮಸ್ತ ಜನತೆಗೆ ಆಯುಧ ಪೂಜೆ ಮತ್ತು ವಿಜಯ ದಶಮಿಗೆ ಗುಡ್‌ ವೇ ಅಟೆಸ್ಟೇಷನ್ಸ್‌ ಅವರ ಶುಭಾಷಯಗಳು…

11/10/202411/10/2024nadubadenews@gmail.com
ಸಂಪಾದನೆಯ ಒಂದಷ್ಟನ್ನು ಸಮಾಜಸೇವೆಗೆ ಮೀಸಲಿಡೋಣ: ವೈಶಾಲಿ ಕುಡ್ವಾ ಅಭಿಮತ

ಸಂಪಾದನೆಯ ಒಂದಷ್ಟನ್ನು ಸಮಾಜಸೇವೆಗೆ ಮೀಸಲಿಡೋಣ: ವೈಶಾಲಿ ಕುಡ್ವಾ ಅಭಿಮತ

07/01/202507/01/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version