https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ವಿರಾಜಪೇಟೆ ನಗರದ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ವಾರ್ಷಿಕ ಪೂಜಾ ಮಹೋತ್ಸವ

ವಿರಾಜಪೇಟೆ ನಗರದ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ವಾರ್ಷಿಕ ಪೂಜಾ ಮಹೋತ್ಸವ

Uncategorized
29/12/202429/12/2024nadubadenews@gmail.comLeave a Comment on ವಿರಾಜಪೇಟೆ ನಗರದ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ವಾರ್ಷಿಕ ಪೂಜಾ ಮಹೋತ್ಸವ
Spread the love
ವಿರಾಜಪೇಟೆ ನಗರದ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ವಾರ್ಷಿಕ ಪೂಜಾ ಮಹೋತ್ಸವ

ವಿರಾಜಪೇಟೆ,ಡಿ.30:( ಕಿಶೋರ್ ಕುಮಾರ್ ಶೆಟ್ಟಿ) ವೀರಾಜೆಪೇಟೆ ನಗರಕ್ಕೆ ಕಳಶ ಪ್ರಾಯದಂತಿರುವ ಮಲೆ ತಿರಿಕೆ ಬೆಟ್ಟದಲ್ಲಿ ಸ್ಥಾಪಿತವಾಗಿರುವ ಶ್ರಿ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ವಾರ್ಷಿಕ ಪೂಜಾ ಮಹೋತ್ಸವಗಳು ವಿಜ್ರಂಭಣೆಯಿಂದ ನಡೆಯಲಿದೆ.

ಶ್ರೀ ಅಯ್ಯಪ್ಪ ಸೇವಾ ಸಮಿತಿ ಮಲೆತಿರಿಕೆ ಬೆಟ್ಟ ವಿರಾಜಪೇಟೆ ವತಿಯಿಂದ ದಿನಾಂಕ: 30,31 ಮತ್ತು 01ರಂದು ವಿಶೇಷ ವಾರ್ಷಿಕ ಪೂಜಾ ಮಹೋತ್ಸವಗಳು ನಡೆಯಲಿದೆ. ವಾರ್ಷಿಕ ಪೂಜಾ ಮಹೋತ್ಸವಗಳು ತಾ. 25 ಮತ್ತು 26 ರಂದು ಕ್ಷೇತ್ರಪಾಲಕ ಗುಳಿಗ ಪೂಜೆ ಮತ್ತು ಮಂಡಲ ಪೂಜೆಯೊಂದಿಗೆ ಆರಂಭವಾಯಿತು. ತಾ 30 ರಂದು ಬೆಳಿಗ್ಗೆ ಮತ್ತು ರಾತ್ರಿ ವಿಶೇಷ ಪೂಜೆ, ತಾ.31 ರಂದು ಬೆಳಿಗ್ಗೆ ಮತ್ತು ರಾತ್ರಿ ವಿಶೇಷ ಪೂಜೆಗಳು ನಡೆಯಲಿದೆ. ದಿನಾಂಕ 01-01-2025ರಂದು ಪ್ರಾಥ:ಕಾಲ 05.30ಕ್ಕೆ ಗಣಪತಿ ಹೋಮ, ಲಕ್ಷ್ಮೀ ಪೂಜೆ, ಸರಸ್ವತಿ ಪೂಜೆ ನಡೆಯಲಿದೆ. ನಂತರ ಬೆಳಿಗ್ಗೆ 09ಕ್ಕೆ ತುಲಭಾರ ಸೇವೆ ಅರಂಭವಾಗಲಿದೆ. 10 ಗಂಟೆಗೆ ಲಕ್ಷಾರ್ಚನೆ ಸೇವೆ ನಡೆದು ಶ್ರೀ ಅಯ್ಯಪ್ಪ ಸ್ವಾಮಿಗೆ 12.30ಕ್ಕೆ ಮಹಾಪೂಜೆ ಸಲ್ಲಿಕೆಯಾಗಲಿದೆ. ಪ್ರಸಾಧ ವಿನಿಯೋಗ ಹಾಗೂ ಭಕ್ತರಿಗೆ ಮಹಾ ಅನ್ನ ಸಂತರ್ಪಣೆ ಜರುಗಲಿದೆ.  ಸಂಜೆ 6.30ಕ್ಕೆ ಶ್ರೀ ಸ್ವಾಮಿಯ ಚಲನವಲನ, ಕಥಾಸಾರಂಶ ಒಳಗೊಂಡ ತೇರು ಶೋಭಾಯಾತ್ರೆಯೊಂದಿಗೆ ಮುಖ್ಯ ಬೀದಿಗಳಲ್ಲಿ ಸಂಚರಿಸಲಿದೆ. ಮೆರವಣಿಗೆಯ ಅಂಗವಾಗಿ ದೀಪಾರತಿ, ಶ್ರೀ ಮತ್ಸ್ಯ ಅವತಾರ ಸ್ತಬ್ದ ಚಿತ್ರ, ಕೇರಳದ ಚಂಡೆ ಮದ್ದಳೆ, ಮಂಗಳೂರಿನ ಚಿಲಿ-ಪಿಲಿ, ಗೊಂಬೆ, ಹಾಗೂ ಸಾಂಸ್ಕೃತಿಕ ಕಲಾ ತಂಡಗಳು ಶೋಭಾಯತ್ರೆಗೆ ಮೆರೆಗು ನೀಡಲಿದೆ.  ಮೆರವಣಿಗೆಯು ಮಲೆತಿರಿಕೆ ಬೆಟ್ಟದ ತಪ್ಪಲಿನಿಂದ ಸಾಗಿ ತೆಲುಗರ ಬೀದಿ, ಜೈನರ ಬೀದಿ, ಫಿ.ಮಾ ಕಾರ್ಯಪ್ಪ ರಸ್ತೆ, ಮುಖ್ಯ ರಸ್ತೆಗಾಗಿ ಸಂಚರಿಸಿ, ಮಲಬಾರ್ ರಸ್ತೆಯಲ್ಲಿರುವ ಶ್ರೀ ಮುತ್ತಪ್ಪ ದೇವಾಲಯದಲ್ಲಿ ಕೊನೆಯಾಗಲಿದೆ. ಬಳಿಕ ಹಿಂದಿರುಗಿ ರಾತ್ರಿ 12.30 ಕ್ಕೆ ದೇವಾಲಯದಲ್ಲಿ ಶ್ರೀ ಸುಬ್ರಮಣ್ಯ ಸ್ವಾಮಿಗೆ ವಿಶೇಷ ಪೂಜೆ ನಡೆಯಲಿದೆ.

ಹಾಗೂ 14-01-2025ರಂದು ಸಂಜೆ 6.30ಕ್ಕೆ ದೇವಾಲಯದಲ್ಲಿ ಮಕರಜ್ಯೋತಿ ವಿಶೇಷ ಪೂಜೆ ನಡೆಯಲಿದೆ. ಶ್ರೀ ಅಯ್ಯಪ್ಪ ಸ್ವಾಮಿ ವಾರ್ಷಿಕ ಪೂಜಾ ಮಹೋತ್ಸವ ಮತ್ತು ಮಕರ ಜ್ಯೋತಿ ವಿಶೇಷ ಪೂಜೆ, ಎಲ್ಲಾ ಧಾರ್ಮಿಕ ಪೂಜೆಗಳಿಗೆ ನಾಡಿನ ಸರ್ವ ಭಕ್ತಾಧಿಗಳು ಅಧಿಕ ಸಂಖ್ಯೆಯಲ್ಲಿ ಆಗಮಿಸುವಂತೆ ಶ್ರೀ ಅಯ್ಯಪ್ಪ ಸೇವಾ ಸಮಿತಿ ಮನವಿ ಮಾಡಿದೆ.

Post navigation

ಆರ್ಜಿಯಲ್ಲಿ ಶ್ರದ್ದಾ ಭಕ್ತಿಯಿಂದ ಜರುಗಿದ ಕಲಿಯುಗ ವರದ ಶ್ರಿ ಅಯ್ಯಪ್ಪ ಸ್ವಾಮಿ ಮಂಡಲ ಪೂಜಾ ಮಹೋತ್ಸವ
ಕಟ್ಟೆಮಾಡ್‌ನಲ್ಲಿ ನಡೆದ ಸಾಂಪ್ರದಾಯಿಕತೆಯ ಹಾಸ್ಯ ಪ್ರಸಂಗ: ಇದು ಶತಮಾನದ ಜೋಕು

Related Posts

45ದಿನಕ್ಕೆ 32,648 ವೀಕ್ಷಕರನ್ನು ತಲುಪಿದ್ದೇವೆ.  ಹುರಿದುಂಬಿಸಿ ಹರಸಿದವರಿಗೂ, ನಿಂದಿಸಿ ಹಂಗಿಸಿದವರಿಗೂ ಸಮರ್ಪಣೆ…

45ದಿನಕ್ಕೆ 32,648 ವೀಕ್ಷಕರನ್ನು ತಲುಪಿದ್ದೇವೆ.  ಹುರಿದುಂಬಿಸಿ ಹರಸಿದವರಿಗೂ, ನಿಂದಿಸಿ ಹಂಗಿಸಿದವರಿಗೂ ಸಮರ್ಪಣೆ…

10/11/202410/11/2024nadubadenews@gmail.com

21/12/202421/12/2024nadubadenews@gmail.com
ರಾಷ್ಟ್ರದ್ರೋಹಿ ವಿದ್ಯಾಧರ ಗೌಡ ಪ್ರಕರಣದಲ್ಲಿ ಪೊಲೀಸರ ಕಾರ್ಯ ಕ್ಷಮತೆಯನ್ನು ಅಭಿನಂದಿಸುತ್ತೇವೆ. ಆದರೆ ಪ್ರಕರಣವನ್ನು ಮರು ತನಿಖೆಯೊಂದಿಗೆ, ಆತನ  ಗಡಿಪಾರು ಮಾಡದಿದ್ದರೆ, ಮುಂದೆ ಅಹಿತಕರ ಘಟನೆಗಳಾದರೆ ಇಲಾಖೆಯೆ ಹೊಣೆ: ವಿವಿಧ ಸಂಘಟನೆಗಳ ಹೇಳಿಕೆ…

ರಾಷ್ಟ್ರದ್ರೋಹಿ ವಿದ್ಯಾಧರ ಗೌಡ ಪ್ರಕರಣದಲ್ಲಿ ಪೊಲೀಸರ ಕಾರ್ಯ ಕ್ಷಮತೆಯನ್ನು ಅಭಿನಂದಿಸುತ್ತೇವೆ. ಆದರೆ ಪ್ರಕರಣವನ್ನು ಮರು ತನಿಖೆಯೊಂದಿಗೆ, ಆತನ  ಗಡಿಪಾರು ಮಾಡದಿದ್ದರೆ, ಮುಂದೆ ಅಹಿತಕರ ಘಟನೆಗಳಾದರೆ ಇಲಾಖೆಯೆ ಹೊಣೆ: ವಿವಿಧ ಸಂಘಟನೆಗಳ ಹೇಳಿಕೆ…

27/11/202427/11/2024nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version