https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button

ಅಂತರ್‌ಜಿಲ್ಲಾ ಶ್ರೀಗಂಧ ಕಳ್ಳರನ್ನ ಬಂಧಿಸಿದ ಅರಣ್ಯಾಧಿಕಾರಿಗಳು

Uncategorized
27/12/202427/12/2024nadubadenews@gmail.comLeave a Comment on ಅಂತರ್‌ಜಿಲ್ಲಾ ಶ್ರೀಗಂಧ ಕಳ್ಳರನ್ನ ಬಂಧಿಸಿದ ಅರಣ್ಯಾಧಿಕಾರಿಗಳು
Spread the love

ಸೋಮವಾರಪೇಟೆ, ಡಿ.27: (ತೇಲಪಂಡ ಕವನ್‌ ಕಾರ್ಯಪ್ಪ)  ಕಳೆದೆರಡು ವರ್ಷಗಳಿಂದ ಸೋಮವಾರಪೇಟೆ ತಾಲ್ಲೂಕಿನ ಕೆಲ ಗ್ರಾಮಗಳಲ್ಲಿ ಶ್ರೀಗಂಧ ಮರಗಳನ್ನು ಕಳ್ಳತನ ಮಾಡುತ್ತಿದ್ದ ಹೊರಜಿಲ್ಲೆಯ ಕಳ್ಳರನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಈಚೆಗೆ ಬಂಧಿಸಿದ್ದಾರೆ.

ಹಾಸನ ಜಿಲ್ಲೆ, ಅರಕಲಗೂಡು ತಾಲ್ಲೂಕಿನ ಬೀರನಹಳ್ಳಿ ಕಾವಲು ಗ್ರಾಮದ  ಮರಿಯಪ್ಪ ಎಂಬವರ ಪುತ್ರ ಚಂದ್ರು ಹಾಗೂ ಮಂಜು ಎಂಬವರ ಪುತ್ರ ಸುರೇಶ್ ಬಂಧಿತ ಆರೋಪಿಗಳು.

ಪ್ರತಿನಿತ್ಯ ಸಣ್ಣ ಗಾತ್ರದ ಮರಗಳನ್ನು ಕಡಿದು ಮೂಟೆಗಳಲ್ಲಿ ಸಾಗಿಸಿ, ಬೆಮ್ಮತ್ತಿಯ ವ್ಯಕ್ತಿಯೋರ್ವನಿಗೆ ಮಾರಾಟ ಮಾಡುತ್ತಿದ್ದರು ಎಂಬ ಮಾಹಿತಿ ಪಡೆದ ಅರಣ್ಯ ಅಧಿಕಾರಿಗಳು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತನಿಖೆಯ ನಂತರ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನದಲ್ಲಿದ್ದಾರೆ.

ಕಾರ್ಯಾಚರಣೆಯಲ್ಲಿ ಎಸಿಎಫ್ ಎ.ಎ.ಗೋಪಾಲ್ ಅವರ ಮಾರ್ಗದರ್ಶನದಲ್ಲಿ ಆರ್‍ಎಫ್‍ಒಗಳಾದ  ಶೈಲೇಂದ್ರಕುಮಾರ್, ಪೂಜಶ್ರೀ, ಡಿಆರ್‍ಎಫ್‍ಗಳಾದ ಶ್ರವಣಕುಮಾರ್, ಸೂರ್ಯ, ಲೋಹಿತ್, ರೇಣುಕುಮಾರ್, ಸಿಬ್ಬಂದಿಗಳಾದ ಪ್ರವೀಣ್ ಕುಮಾರ್, ರಂಜಿತ್, ಸತೀಶ್, ದರ್ಶನ್, ರಾಕೇಶ್, ಪ್ರವೀಣ್, ಹರೀಶ್, ನಂದೀಶ್, ಸಂತೋಷ್ ಭಾಗವಹಿಸಿದ್ದರು.

Post navigation

ಇಂದು ನಡೆಯಬೇಕಿದ್ದ ರೈತರ ಕೆನರಾ ಬ್ಯಾಂಕ್ ಲೋನ್ ಅದಾಲತ್ 30ಕ್ಕೆ ಮುಂದೂಡಿಕೆ.
ಕೊಡವರ ಶೌರ್ಯದೊಂದಿಗೆ ಮೈಸೂರು ರಾಜವಂಶದ ಐತಿಹಾಸಿಕ ಸಂಬಂಧ ಬೆಸೆದಿದೆ: ಸಂಸದ ಯಧುವೀರ್‌ ಒಡೆಯರ್

Related Posts

ಕೈಬುಲಿರ ಪಾರ್ವತಿ ಬೋಪಯ್ಯ (ತಾಮನೆ: ಮೇದುರ) ಅಯಿಂಗಕ್‌, ಪೆರಿಯ  ನಾಗರೀಕ ಸೇವಾ ಬಿರ್‌ದ್‌. ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣ ಅಯಿಂಗಡ ಇರಾದೆ ಪೋಲೆ ಘೋಷಣೆ ಮಾಡ್‌ನ ಸರ್ಕಾರ…

29/09/2024nadubadenews@gmail.com
65ರ ಭಾರತ-ಪಾಕ್‌ ಸಮರ ವೀರ ಹುತಾತ್ಮ,  ಕೂಕಂಡ ಎನ್ .ಪೊನ್ನಪ್ಪ ರಸ್ತೆ  ಪೊನ್ನಂಪೇಟೆಯಲ್ಲಿ ಅನಾವರಣ.

65ರ ಭಾರತ-ಪಾಕ್‌ ಸಮರ ವೀರ ಹುತಾತ್ಮ,  ಕೂಕಂಡ ಎನ್ .ಪೊನ್ನಪ್ಪ ರಸ್ತೆ  ಪೊನ್ನಂಪೇಟೆಯಲ್ಲಿ ಅನಾವರಣ.

19/11/202419/11/2024nadubadenews@gmail.com
ಗರ್ವಾಲೆ ಕೊಡವ ಸಮಾಜ ಪುತ್ತರಿ ಒತ್ತೋರ್ಮೆ ಕೂಟ ಡಿಸೆಂಬರ್:29‌

ಗರ್ವಾಲೆ ಕೊಡವ ಸಮಾಜ ಪುತ್ತರಿ ಒತ್ತೋರ್ಮೆ ಕೂಟ ಡಿಸೆಂಬರ್:29‌

24/12/202424/12/2024nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version