ಸೋಮವಾರಪೇಟೆ,ಡಿ:13: ಅಪ್ರಾಪ್ತ ಬಾಲಕ ವಾಹನ ಚಲಾಯಿಸಿದ ಕಾರಣಕ್ಕಾಗಿ ಮತ್ತು ಸದರಿ ವಾಹನದ ವಿಮಾ ಅವಧಿ ಮುಗಿದಿದ್ದ ಕಾರಣಕ್ಕೆ, ಸೋಮವಾರಪೇಟೆಯ ಜೆಎಂಎಫ್ ಸಿ ನ್ಯಾಯಾಲಯ 27000 ದಂಡ ವಿಧಿಸಿದ.
ಸೋಮವಾರಪೇಟೆ ಪೊಲೀಸ್ ಠಾಣೆಯ ಮೊಕದ್ದಮ್ಮೆ ಸಂಖ್ಯೆ 116 /24 ಸೋಮವಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಮಂಜುನಾಥ ಬಿ ಎಸ್ ರೇಂಜರ್ ಬ್ಲಾಕ್ ತಮ್ಮ ಅಪ್ರಾಪ್ತ ಮಗನಿಗೆ ದ್ವಿಚಕ್ರ ವಾಹನವನ್ನು ಚಾಲನೆ ಮಾಡಲು ನೀಡಿದ್ದಕ್ಕಾಗಿ ಮತ್ತು ದ್ವಿಚಕ್ರವಾಹನದ ವಿಮಾ ಪತ್ರ ಚಾಲ್ತಿಯಲ್ಲಿ ಇಲ್ಲದೆ ಇರುವುದರಿಂದ ಮಾನ್ಯ ಸೋಮವಾರಪೇಟೆ ಜೆಎಂಎಫ್ಸಿ ನ್ಯಾಯಾದೀಶರಾದ ಕೆ. ಗೋಪಾಲಕೃಷ್ಣ ಅವರು ಇಂದು ದಂಡ ವಿಧಿಸಿದ್ದು, 5(1) r/w 180 ಅಪ್ರಾಪ್ತ ಬಾಲಕನಿಗೆ ದ್ವಿಚಕ್ರ ವಾಹನ ನೀಡಿದ ಕಾರಣಕ್ಕೆ-25000/, ವಾಹನದ ವಿಮೆ ನವೀಕರಿಸದೆ ಇರುವುದರಿಂದ 2000/, ಒಟ್ಟು 27,000 ದಂಡ ವಿಧಿಸಿ ಆದೇಶಿಸಿದ್ದಾರೆ.