ಮಡಿಕೇರಿ, ಡಿ.06: ದೇಶದ ವೀರಾ ಸೇನಾನಿಗಳ ವಿರುದ್ದ ಅಬ್ಬರಿಸಿದ್ದ ದೇಶದ್ರೋಹಿ ವಕೀಲ ಕೆ.ಆರ್. ವಿದ್ಯಧರನ ವಿರುದ್ದ ಕಟೀಣ ಕ್ರಮ ಕೈಗೊಳ್ಳಿ ಇಲ್ಲವೇ ಮುಂದಿನ ದಿನಗಳಲ್ಲಿ ಉಪವಾಸ ಸತ್ಯಗ್ರಹಕೂ ಮುಂದಾಗುತ್ತೇವೆಂದು, ಮಾಜಿ ಸೈನಿಕರು ಇಂದು ಮಡಿಕೇರಿಯಲ್ಲಿ ಅಬ್ಬರಿಸಿದರು.
ಜಿಲ್ಲೆ ಮತ್ತು ರಾಜ್ಯದ ಇತರ ಜಿಲ್ಲೆಗಳಿಂದ ಆಗಮಿಸಿದ್ದ ಮಾಜಿ ಸೈನಿಕರು, ವಿವಿಧ ಕೊಡವ ಸಮಾಜ ಹಾಗೂ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಫಿ.ಮಾ. ಕಾರ್ಯಪ್ಪ ವೃತ್ತದಲ್ಲಿ ಜಮಾವಣೆಗೊಂಡು, ಅಲ್ಲಿಂದ ಮೆರವಣಿಗೆಯಲ್ಲಿ ತೆರಳಿ, ಜನರಲ್ ತಿಮ್ಮಯ್ಯ ವೃತ್ತಕ್ಕಾಗಿ ಸಾಗಿ, ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಟಾಧಿಕಾರಿಗಳಿಗೆ ದೂರು ನೀಡಿದರು.
ಈ ಸಂದರ್ಭ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ, ಕೊಡಗು ಜಿಲ್ಲಾ ಮಾಜೀ ಸೈನಿಕರ ಸಂಘದ ಅಧ್ಯಕ್ಷ ಕೊಟ್ಟ್‌ಕತ್ತಿರ ಸೋಮಣ್ಣ ಅವರು, ದೇಶಕ್ಕಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟಿರುವ ಸೈನಿಕರು ನಾವು, ನಮ್ಮ ದೇಶದ ಬೆನ್ನೆಲುಬು ರೈತನಾದರೆ, ರಕ್ಷಾ ಕವಚವೇ ನಮ್ಮ ಸೈನ್ಯ. ಅಂತಃ ಹೆಮ್ಮೆಯ ಸೈನ್ಯವನ್ನು ಕಟ್ಟಿದ ಮಹಾನ್ ಚೇತಗಳನ್ನು ನಮ್ಮದೇ ಮಣ್ಣಿನಲ್ಲಿ ನಿಂತು ಅವಮಾನಿಸುವುದು ಎಲ್ಲಾ ಕೋನಗಳಿಂದಲೂ ದೇಶದ್ರೋಹಕ್ಕೆ ಸಮ. ಹಾಗಾಗಿ ಆರೋಪಿ ವಿದ್ಯಾಧರನನ್ನು ಜಿಲ್ಲೇಯಿಂದ ಗಡಿಪಾರು ಮಾಡುವುದಷ್ಟೇ ಅಲ್ಲ ಕಾನೂನಿನ ಅಡಿಯಲ್ಲಿ ಗರಿಷ್ಟ ಪ್ರಮಾಣದ ಶಿಕ್ಷೆಯಾಗಬೇಕು. ಅಲ್ಲದೆ ವಕೀಲರ ಸಂಘವು ಶಾಸ್ವತವಾಗಿ ಆತನ ವಕೀಲ ಪರವಾನಗಿಯನ್ನು ರದ್ದು ಮಾಡಬೇಕೆಂದು ಆಗ್ರಹಿಸಿದರು. ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ಉಪವಾಸ ಸತ್ಯಾಗ್ರಹದಂತ ಕಟಿಣ ಹೋರಾಟಕ್ಕೆ ನಾವು ಮುಂದಾಗುತ್ತೇವೆ, ಇದು ಕೇವಲ ಸಾಂಕೇತಿಕ ಹೋರಾಟವಷ್ಟೇ ಎಂದು ಎಚ್ಚರಿಸಿದರು.
ಆಖಿಲ ಕೊಡವ ಸಮಾಜ ಆದ್ಯಕ್ಷರಾದ ಪರದಂಡ ಸುಬ್ರಮಣಿ, ಕೊಡವ ಸಮಾಜ ಒಕ್ಕೂಟ ಅಧ್ಯಕ್ಷ ಕಳ್ಳಿಚಂಡ ವಿಷ್ಣುಕಾರ್ಯಪ್ಪ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಮತ್ತು ಕೊಡವ ಸಮಾಜಗಳ ಪಧಾದಿಕಾರಿಗಳು, ಫಿ.ಮಾ. ಕಾರ್ಯಪ್ಪ, ಜನರಲ್ ತಿಮ್ಮಯ್ಯ ಅವರ ಅಭಿಮಾನಿಗಳು ನೂರಾರು ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.