ಮಡಿಕೇರಿ, ಡಿ.04: ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ನಿರಂತರ ಹಿಂಸಾಚಾರದ ವಿರುದ್ದ, ನಾಳೆ (05-12-24)ನೇ ಗುರುವಾರ ಮಡಿಕೇರಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲು, ಹಿಂದೂ ಹಿತರಕ್ಷಣಾ ಸಮಿತಿ ಕೊಡಗು ಘಟಕ ಕರೆ ನೀಡಿದೆ.
ನಾಳೆ ಬೆಳಿಗ್ಗೆ 10.30 ಗಂಟೆಗೆ , ಮಡಿಕೇರಿಯ ಚೌಡೇಶ್ವರಿ ದೇವಾಲಯದಿಂದ ಹೊರಡಲಿರುವ ಬೃಹತ್ ಮೆರವಣಿಗೆಯು, ಗಾಂದಿ ಮೈದಾನದವರೆಗೆ ನಡೆಯಲಿದೆ. ಹಿಂದೂ ಬಾಂದವರು ಮತ್ತು ಸಾರ್ವಜನಿಕರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಕೋರಲಾಗಿದೆ.
ಇದು ಯಾವುದೇ ಒಂದು ರಾಜಕೀಯ ಪಕ್ಷ ಅಥವಾ ಸೀಮಿತ ಜನರ ಪ್ರತಿಭಟನೆಯಲ್ಲ, ಇದು ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆದ ದೌರ್ಜನ್ಯದ ವಿರುದ್ಧ ಪ್ರತಿಭಟಿಯಾಗಿದ್ದು, ಹಿಂದೂಗಳ ಬಗ್ಗೆ ಬಾಂಗ್ಲಾದೇಶ ಸರ್ಕಾರದ ನೀತಿ ಸರಿ ಇಲ್ಲ. ಬಾಂಗ್ಲಾದೇಶ ಸರಕಾರದ ತತ್ವ ಮಾನವೀಯತೆಯ ವಿರುದ್ಧವಾಗಿದೆ. ಇದು ಹಿಂದೂ ಮನಸ್ಥಿತಿಗೆ ಮತ್ತು ಮೌಲ್ಯಕ್ಕೆ ವಿರುದ್ಧವಾಗಿದೆ. ಹಿಂದೂಗಳ ಮೇಲೆ ದೌರ್ಜನ್ಯ ಮತ್ತು ಕ್ರೌರ್ಯ ಬಾಂಗ್ಲಾ ದೇಶದ ಮುಸ್ಲಿಮರು ಮಾಡುತ್ತಿದ್ದಾರೆ. ಮಹಿಳೆಯರನ್ನು ಅಪಹರಿಸಿ ಕಿರುಕುಳ ನೀಡಿ ಅತ್ಯಾಚಾರ ಮತ್ತು ಚಿತ್ರಹಿಂಸೆ ಮಾಡುತ್ತಿದ್ದಾರೆ. ಬಾಂಗ್ಲಾ ದೇಶ ಸರಕಾರ ಇದನ್ನು ತಡೆಯುತಿಲ್ಲ. ಬದಲಿಗೆ ಪ್ರೋತ್ಸಾಹ ಕೊಡುತ್ತಿದೆ. ಹಿಂದೂಗಳು ಅಸಹಾಯಕರಾಗಿ ನಿರಾಶಭಾವ ಹೊಂದಿದ್ದಾರೆ. ಬದುಕಲು ಸಾಧ್ಯವಿಲ್ಲದಗಿದೆ. ಹೆಗ್ಗಣಗಳನ್ನು ಹೊಡೆಯು ಹಾಗೆ ಕೊಲ್ಲು ತ್ತಿದ್ದಾರೆ.
ಅಸಾಹಯಕರಿಗೆ ಅಲ್ಲಿಯ ದೇವಸ್ಥಾನದ ಮುಖ್ಯಸ್ಥರು ಮತ್ತು ಮಠಾಧೀಶರು ಪರಸ್ಪರ ಸಹಾಯ ಮಾಡಲು ಅಲ್ಪಸಂಖ್ಯಾತ ಹಿಂದೂ ಸಂಘವನ್ನು ರಚಿಸಲು ಹೊರಟಿದ್ದಾರೆ. ಆದರೆ ಅವರ ದೇವಾಲಯವನ್ನು ವಿರೂಪಗೊಳಿಸಿ ಅದನ್ನು ನಾಶಪಡಿಸಿದ್ದಾರೆ ಬಾಂಗ್ಲಾ ದೇಶದ ಸರಕಾರ ಸನ್ಯಾಸಿಗಳನ್ನು ಜೈಲಿಗಟ್ಟಿದೆ. ಮಾತಂದರು ಅವರನ್ನು ಕೊಲ್ಲುವ ಬೆದರಿಕೆ ಹಾಕಿದ್ದಾರೆ.
1947ರಲ್ಲಿ ಧಾರ್ಮಿಕ ಪ್ರತ್ಯೇಕತೆಯ ಹೆಸರಿನಲ್ಲಿ ಶೇ.25ರಷ್ಟು ಭೂ ಪ್ರದೇಶವನ್ನು ಪಾಲು ತೆಗೆದುಕೊಂಡರು. ಹೊಸ ದೇಶವನ್ನು ಸೃಷ್ಟಿಸಿ ಪಾಕಿಸ್ತಾನ ಎಂದು ಕರೆದರು. ಅಲ್ಪಸಂಖ್ಯಾತ ಹಿಂದೂ ಮತ್ತು ಇತರ ಧರ್ಮಗಳನ್ನು ಘನತೆಯಿಂದ ನೋಡಿಕೊಳ್ಳುವ ಒಪ್ಪಂದದೊಂದಿಗೆ ಹಿಂದೂ ಮತ್ತು ಮುಸ್ಲಿಂ ಜನಸಂಖ್ಯೆಯ ಒಟ್ಟು ವಿನಿಮಯವನ್ನು ಸ್ಥಗಿತಗೊಳಿಸಿ. ನೆಹರು ಮತ್ತು ಲಿಯಾಕತ್ ಒಪ್ಪಂದ ಮಾಡಿದ್ದಾರೆ. ಆದರೆ ಈಗ ಅಲ್ಲಿ ಹಿಂದೂಗಳು ಅಲ್ಪಸಂಖ್ಯಾತರು ಮತ್ತು ಅಸಹಾಯಕರಾಗಿದ್ದಾರೆ. ಅವರಿಗೆ ಬದುಕಲು ಸಹಾಯ ಬೇಕು ಮತ್ತು ರಕ್ಷಣೆ ಬೇಕು. ಅವರ ಜೀವನೋಪಾಯವನ್ನು ಮತ್ತೆ ಹಳಿಗೆ ತರಬೇಕು.
ಬಾಂಗ್ಲಾ ಹಿಂದೂಗಳಿಗೆ ಮತ್ತು ಇತರ ಅಲ್ಪಸಂಖ್ಯಾತರಿಗೆ ಸಹಾಯ ಮಾಡಬೇಕೆಂದು, ಬಾಂಗ್ಲಾ ಸರಕಾರಕ್ಕೆ ಆಗ್ರಹ ಮಾಡಬೇಕಾಗಿದೆ. ಮತ್ತು ನಮ್ಮ ದೇಶದ ಸರ್ಕಾರವು ಸೂಕ್ತ ಕ್ರಮವನ್ನು ತೆಗೆದುಕೊಳ್ಳುವಂತೆ ಒಂದೇ ಧ್ವನಿಯಲ್ಲಿ ಹೇಳಬೇಕು. ವಿಶ್ವ ನಾಯಕರ ಗಮನಕ್ಕೆ ಈ ವಿಷಯದ ಬಗ್ಗೆ ತಂದು, ಹಿಂದೂಗಳನ್ನು ರಕ್ಷಿಸಲು ಬಾಂಗ್ಲಾದೇಶ ಸರ್ಕಾರವನ್ನು ಒತ್ತಾಯಿಸಲು ಆಗ್ರಹ ಮಾಡಬೇಕು…
ಬಾಂಗ್ಲಾದೇಶದಲ್ಲಿ ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾತ ವಿಭಾಗಗಳ ಹಿತಾಸಕ್ತಿಗಳನ್ನು ರಕ್ಷಿಸಲು “ಸಂಯುಕ್ತ ಹಿಂದೂ ಪ್ರಾತಿನಿಧ್ಯ” ದಲ್ಲಿ ಭಾಗವಹಿಸಲು ಎಲ್ಲರೂ ಬಂದು ಆಂದೋಲನದಲ್ಲಿ ಭಾಗವಹಿಸಿ, ಸುರಕ್ಷತೆ, ಭದ್ರತೆ ಮತ್ತು ಸಮಗ್ರತೆಯ ಕಡೆಗೆ ಈ ಮಹತ್ವದ ಮೆರವಣಿಗೆಯಲ್ಲಿ ಪಾಲ್ಗೊಳ್ಳಿ ಎಂದು ಕೊಡಗು ಜಿಲ್ಲಾ ಪ್ರಕೋಷ್ಟದ ಸಂಚಾಲಕ ಅಪ್ಪನೆರವಂಡ ಮನೋಜ್ ಮಂದಪ್ಪ ಅವರು, ಮನವಿ ಮಾಡಿದ್ದಾರೆ.